ಹೈದರಾಬಾದ್ : 90ರ ದಶಕದ ಆ್ಯಕ್ಷನ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ 'ತಪಡ್' ಸಿನಿಮಾದಲ್ಲಿ ನಟಿ ತಾರಾ ಸುತಾರಿಯಾ ಜೊತೆ ಪರದೆ ಹಂಚಿಕೊಳ್ಳಲಿದ್ದಾರೆ. ಅಹಾನ್ ತಮ್ಮ ಚೊಚ್ಚಲ ಸಿನಿಮಾ ಬಿಡುಗಡೆಯಾಗಲು ಕಾಯುತ್ತಿದ್ದಾರೆ. ಇವಿಷ್ಟೇ ಅಲ್ಲ, ಈಗಾಗಲೇ ಅಹಾನ್ ಕೈಯಲ್ಲಿ ಎರಡು ಸಿನಿಮಾಗಳು ಇವೆ ಎಂದು ಮೂಲಗಳು ತಿಳಿಸಿವೆ.
- " class="align-text-top noRightClick twitterSection" data="
">
2021ರಲ್ಲಿ ಬಾಲಿವುಡ್‌ಗೆ ಕಾಲಿಡಲಿರುವ ಮಹತ್ವಾಕಾಂಕ್ಷಿ ನಟರಲ್ಲಿ ಅಹಾನ್ ಕೂಡ ಒಬ್ಬರು. ಈ ಚಿತ್ರವು ತೆಲುಗಿನಲ್ಲಿ 2018ರಲ್ಲಿ ಕಾಣಿಸಿಕೊಂಡ ಹಿಟ್ ಸಿನಿಮಾ ಆರ್ಎಕ್ಸ್ 100ನ ರಿಮೇಕ್ ಆಗಿದೆ. ಈ ಚಿತ್ರವನ್ನು ಸಾಜಿದ್ ನಾಡಿಯಾಡ್‌ವಾಲಾ ನಿರ್ಮಾಣ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ಇತ್ತೀಚಿನ ವರದಿಗಳ ಪ್ರಕಾರ, ಅಹಾನ್ ಅವರು ಮಹೇಶ್ ಭಟ್ ನಿರ್ದೇಶನದ ಆಶಿಕಿ-3 ಸಿನಿಮಾದಲ್ಲೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವಿಷ್ಟೇ ಅಲ್ಲ, ಅಕ್ಷಯ್ ಕುಮಾರ್ ಜೊತೆಗೂ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
- " class="align-text-top noRightClick twitterSection" data="
">