ಹೈದರಾಬಾದ್ : ಬಾಲಿವುಡ್ ನಟಿ ಕರೀನಾ ಕಪೂರ್ ಒಮಿಕ್ರಾನ್ ವರದಿ ನೆಗೆಟಿವ್ ಬಂದು ಹಿನ್ನೆಲೆ ಇಂದು ಪತಿ ಸೈಫ್ ಅಲಿ ಖಾನ್ ಮತ್ತು ಪುತ್ರರಾದ ತೈಮೂರ್ ಮತ್ತು ಜೆಹ್ ಅಲಿ ಖಾನ್ರೊಂದಿಗೆ ಕ್ರಿಸ್ಮಸ್ ಔತಣ ಕೂಟಕ್ಕೆ ಮುಂಬೈಗೆ ತೆರಳಿದರು.
ಕರೀನಾ ಚರ್ಮದ ಕಂದು ಬಣ್ಣದ ಪ್ಯಾಂಟ್‌ನೊಂದಿಗೆ ಕಪ್ಪು ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡರೆ, ಸೈಫ್ ಜೀನ್ಸ್ ಮತ್ತು ಬೂಟು ಧರಿಸಿದ್ದರು. ಇತ್ತ ತೈಮೂರ್ ಕುರ್ತಾ-ಪೈಜಾಮಾದಲ್ಲಿ ಮಿಂಚಿದರೆ, ಜೆಹ್ ಜೀನ್ಸ್‌ನೊಂದಿಗೆ ತಿಳಿ ನೀಲಿ ಶರ್ಟ್‌ನಲ್ಲಿ ಕಾಣಿಸಿದರು.
- " class="align-text-top noRightClick twitterSection" data="
">
ಡಿಸೆಂಬರ್ ತಿಂಗಳಲ್ಲಿ ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಹಾಗೂ ಆಕೆಯ ಸ್ನೇಹಿತೆ ಅಮೃತಾ ಅರೋರಾಗೆ ಕೊರೊನಾ ತಗುಲಿತ್ತು. ಹೀಗಾಗಿ, ಅವರನ್ನು ಕ್ವಾರಂಟೈನ್ ಮಾಡಿ ಅವರು ವಾಸವಾಗಿದ್ದ ನಾಲ್ಕು ಕಟ್ಟಡಗಳನ್ನು ಸೀಲ್ಡೌನ್ ಮಾಡಲಾಗಿತ್ತು.
ಕ್ವಾರಂಟೈನ್ಗೊಳಗಾಗಿದ್ದ ನಟಿ ಕರೀನಾ ಹಾಗೂ ಆಕೆಯ ಸ್ನೇಹಿತೆಯನ್ನು ಜೀನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗಿತ್ತು. ವರದಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿಲ್ಲ ಎಂದು ಬೃಹನ್ ಮುಂಬೈ ಕಾರ್ಪೊರೇಷನ್ ಶುಕ್ರವಾರ ಮಾಹಿತಿ ನೀಡಿತ್ತು.
ಸದ್ಯ ಕರೀನಾ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ 2022ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಜಾಕಿ ಭಗ್ನಾನಿ ಹುಟ್ಟುಹಬ್ಬಕ್ಕೆ ರಕುಲ್ ಪ್ರೀತ್ ವಿಶ್ ಮಾಡಿದ್ದು ಹೀಗೆ..