ಮುಂಬೈ: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯ ಬಗ್ಗೆ ನಟಿ ರಿಯಾ ಚಕ್ರವರ್ತಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ರಿಯಾ ಅಫ್ಘಾನಿಸ್ತಾನದ ನಾಗರಿಕರ ಬಗ್ಗೆ, ವಿಶೇಷವಾಗಿ ಮಹಿಳೆಯರ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಉಂಟಾಗಿರುವ ಮಾನವೀಯ ಬಿಕ್ಕಟ್ಟನ್ನು ನಿವಾರಿಸಲು ಜಾಗತಿಕ ನಾಯಕರು ಮುಂದೆ ಬರಬೇಕೆಂದು ರಿಯಾ ಮನವಿ ಮಾಡಿದ್ದಾರೆ.
ತಾಲಿಬಾನ್ ದಂಗೆಕೋರರು ಕಾಬೂಲ್ ಪ್ರವೇಶಿಸಿದ ನಂತರ ಮತ್ತು ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಫ್ಘಾನಿಸ್ತಾನವನ್ನು ತೊರೆದ ಬಳಿಕ ರಿಯಾ ಈ ಮನವಿ ಮಾಡಿದ್ದಾರೆ. "ಪ್ರಪಂಚದಾದ್ಯಂತ ಮಹಿಳೆಯರು ವೇತನ ಸಮಾನತೆಗಾಗಿ ಹೋರಾಡುತ್ತಿರುವಾಗ, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಾರಾಟವಾಗುತ್ತಿದ್ದಾರೆ... ಅವರು ವೇತನವಾಗಿ ಮಾರ್ಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿ ಹೃದಯವಿದ್ರಾವಕವಾಗಿದೆ" ಎಂದು ರಿಯಾ ಬರೆದಿದ್ದಾರೆ.
"ಪುರುಷಪ್ರಭುತ್ವವನ್ನು ಹೊಸೆದುಹಾಕಿ... ಮಹಿಳೆಯರು ಕೂಡ ಮನುಷ್ಯರೇ" ಎಂದು ರಿಯಾ ಚಕ್ರವರ್ತಿ ಬರೆದಿದ್ದಾರೆ.
ನಟ ಕರಣ್ ಟ್ಯಾಕರ್ ಸಹ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಯನ್ನು ನೋಡಿ ಕಂಗಾಲಾಗಿದ್ದಾರೆ....''ಜಗತ್ತು ಸುಮ್ಮನೆ ಕುಳಿತು ಮೌನವಾಗಿ ನೋಡುತ್ತಿರುವುದು ಮಾನವೀಯತೆಗೆ ನಾಚಿಕೆಗೇಡು " ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
ನಿರ್ಮಾಪಕ ಶೇಖರ್ ಕಪೂರ್ ಕೂಡ ಅಫ್ಘಾನ್ನ ಸದ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಅಫ್ಘಾನಿಸ್ತಾನದ ಜನರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಿದೇಶಿ ಶಕ್ತಿಗಳ ವಸಾಹತುಶಾಹಿ ಮಹತ್ವಾಕಾಂಕ್ಷೆಗಳಿಂದ ಧ್ವಂಸವಾದ ಮತ್ತು ನಾಶವಾದ ರಾಷ್ಟ್ರ ಎಂದು ಕಪೂರ್ ಟ್ವೀಟ್ ಮಾಡಿದ್ದಾರೆ.
-
Special prayer 🙏 for the people of Afghanistan. A nation wrecked and destroyed by colonial ambitions of foreign powers. #Afganistan
— Shekhar Kapur (@shekharkapur) August 16, 2021 " class="align-text-top noRightClick twitterSection" data="
">Special prayer 🙏 for the people of Afghanistan. A nation wrecked and destroyed by colonial ambitions of foreign powers. #Afganistan
— Shekhar Kapur (@shekharkapur) August 16, 2021Special prayer 🙏 for the people of Afghanistan. A nation wrecked and destroyed by colonial ambitions of foreign powers. #Afganistan
— Shekhar Kapur (@shekharkapur) August 16, 2021
ಸ್ವರ ಭಾಸ್ಕರ್, ರಿಚಾ ಚಡ್ಡಾ, ಅನುರಾಗ್ ಕಶ್ಯಪ್, ಸನಮ್ ಪುರಿ ಮತ್ತು ಹನ್ಸಲ್ ಮೆಹ್ತಾ ಸೇರಿದಂತೆ ಬಾಲಿವುಡ್ನ ಇತರೆ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಅಫ್ಘಾನ್ ಬಗ್ಗೆ ತಮ್ಮ ಆತಂಕ ಹೊರಹಾಕಿದ್ದಾರೆ.