ETV Bharat / sitara

ಮಾಧ್ಯಮದವರ ಜೊತೆ ಹೋಳಿ ಆಚರಿಸಿದ ನಟಿ ತನೀಷಾ ಮುಖರ್ಜಿ - ಮಾಧ್ಯಮದವರ ಜೊತೆ ಹೋಳಿ ಆಚರಿಸಿದ ನಟಿ ತನೀಷಾ ಮುಖರ್ಜಿ

ರಾಣಿ ಮುಖರ್ಜಿ ಸಹೋದರಿ, ನಟಿ ತನೀಷಾ ಮುಖರ್ಜಿಯವರು ಮಾಧ್ಯಮದವರಿಗೆ ಬಣ್ಣ ಹಚ್ಚಿ, ಸಿಹಿ ಹಂಚಿ ಹೋಳಿ ಆಚರಿಸಿದ್ದಾರೆ.

Tanishaa Mukerji celebrates Holi with paparazzi
ಮಾಧ್ಯಮದವರ ಜೊತೆ ಹೋಳಿ ಆಚರಿಸಿದ ನಟಿ ತನೀಷಾ ಮುಖರ್ಜಿ
author img

By

Published : Mar 19, 2022, 9:19 AM IST

ಮುಂಬೈ: ಬಣ್ಣಗಳ ಹಬ್ಬ ಹೋಳಿಯನ್ನು ಬಾಲಿವುಡ್​ ಮಂದಿ ಕುಟುಂಬ, ಸ್ನೇಹಿತರ ಜೊತೆ ಅದ್ಧೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಇತ್ತ ನಟಿ ತನೀಷಾ ಮುಖರ್ಜಿ ಅವರು ಮಾಧ್ಯಮಗಳೊಂದಿಗೆ ಹೋಳಿ ಆಚರಿಸಿ ಗಮನ ಸೆಳೆದಿದ್ದಾರೆ.

ಮಾಧ್ಯಮದವರ ಜೊತೆ ಹೋಳಿ ಆಚರಿಸಿದ ನಟಿ ತನೀಷಾ ಮುಖರ್ಜಿ

ಹೋಳಿ ಹಬ್ಬದವನ್ನು ಉತ್ತರ ಭಾರತದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಬಾಲಿವುಡ್​ ಅನೇಕ ನಟ, ನಟಿಯವರು ತಮ್ಮ ಮನೆಯಲ್ಲಿ ಹೋಳಿ ಹಬ್ಬವನ್ನು ಆಚರಿಸಿದ್ದು, ಸಂಭ್ರಮದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದರ ನಡುವೆ ರಾಣಿ ಮುಖರ್ಜಿ ಸಹೋದರಿ, ನಟಿ ತನೀಷಾ ಮುಖರ್ಜಿಯವರು ಮಾಧ್ಯಮದವರಿಗೆ ಬಣ್ಣ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಸದ್ಯ ತನೀಷಾ ಸಿನಿಮಾರಂಗದಿಂದ ದೂರ ಉಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದಾರೆ. ಕೊನೆಯದಾಗಿ ತನೀಷಾ 'ಈಸ್​​ ಶಾರ್ಟ್​​​'​ ಎಂಬ ಕಿರುಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ನೀಲ್-​ ನಿಕ್ಕಿ, ಸರ್ಕಾರ್​, ಸರ್ಕಾರ್​ ರಾಜ್​ ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತನೀಷಾ ಬಿಗ್​​ಬಾಸ್​ ಸೀಸನ್​ 7 ಹಾಗೂ ಕತರೊ ಕಿ ಕಿಲಾಡಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ: ಭಾರತಕ್ಕಿಂತ ಮುಂಚೆ ಅಮೆರಿಕಾದಲ್ಲಿ ಬಿಡುಗಡೆ ಆಗಲಿದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.