ಬಾಲಿವುಡ್ ನಟಿ ಆಲಿಯಾ ಭಟ್ಗೆ ಕೂಡ ಕೊರೊನಾ ವೈರಸ್ ತಗುಲಿದೆ. ಈ ಬಗ್ಗೆ ಆಲಿಯಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ.
ಗುರುವಾರ ತಡರಾತ್ರಿ ಇನ್ಸ್ಟಾ ಸ್ಟೋರಿ ಹಂಚಿಕೊಂಡಿದ್ದು, ಎಲ್ಲರಿಗೂ ನಮಸ್ಕಾರ, ನನಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ನಾನು ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ. ವೈದ್ಯರ ಸಲಹೆಯಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಸ್ಟೋರಿ ಕಂಡು ಬೇಗ ಗುಣಮುಖರಾಗುವಂತೆ ಹಾರೈಸಿರುವ ಅಭಿಮಾನಿಗಳಿಗೂ ಧನ್ಯವಾದ ಹೇಳಿರುವ ಆಲಿಯಾ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆಗಳು. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ ಎಂದಿದ್ದಾರೆ.
ಆಲಿಯಾ ಸದ್ಯ ಮುಂಬೈನಲ್ಲಿ ಸಂಜಯ್ ಲೀಲಾ ಭನ್ಸಾಲಿ ಅವರ 'ಗಂಗುಬಾಯಿ ಕಥಿಯಾವಾಡಿ' ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಹಿಂದೆ ಮಾರ್ಚ್ ಆರಂಭದಲ್ಲಿ, ಭನ್ಸಾಲಿ ಅವರಿಗೆ ಕೂಡ ಕೊರೊನಾ ದೃಢಪಟ್ಟಿತ್ತು. ಕೆಲ ವಾರಗಳಲ್ಲಿ ಅವರು ಚೇತರಿಸಿಕೊಂಡಿದ್ದರು. ಬಳಿಕ ಆಲಿಯಾ ಗೆಳೆಯ, ನಟ ರಣಬೀರ್ ಕಪೂರ್ಗೂ ಕೊರೊನಾ ತಗುಲಿತ್ತು. ಈ ವೇಳೆ ತಾವೂ ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ವರದಿಯು ನೆಗೆಟಿವ್ ಬಂದಿದೆ ಎಂದು ಆಲಿಯಾ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ತಿಳಿಸಿದ್ದರು.
ಇದನ್ನೂ ಓದಿ: ರಿಯಲ್ ಲೈಫ್ನಲ್ಲೂ ಒಂದಾದ ಸೀರಿಯಲ್ ಜೋಡಿ: ನಿಶ್ಚಿತಾರ್ಥದ ವಿಡಿಯೋ ಶೇರ್ ಮಾಡಿದ ಕವಿತಾ ಗೌಡ