ETV Bharat / sitara

ಮುನಿಸು ಮರೆತ ಲಾರೆನ್ಸ್​​... ಬಾಲಿವುಡ್​ಗೆ ರಾಘವ್​​ ಕಮ್​ಬ್ಯಾಕ್ - ರಾಘವ್ ಲಾರೆನ್ಸ್

ತಮಿಳು ನಟ ಹಾಗೂ ನಿರ್ದೇಶಕ ರಾಘವ್ ಲಾರೆನ್ಸ್​ ಬಿಟೌನ್​​ಗೆ ವಾಪಸ್​ ಆಗಿದ್ದಾರೆ. ಅವರೇ ಬಾಲಿವುಡ್​ನ 'ಲಕ್ಷ್ಮೀ ಬಾಂಬ್​' ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.

ಚಿತ್ರಕೃಪೆ : ಟ್ವಿಟ್ಟರ್​
author img

By

Published : Jun 3, 2019, 12:32 PM IST

ಚಿತ್ರತಂಡ ತೊರೆದಿದ್ದ ರಾಘವ್​ ಅವರನ್ನು ವಾಪಸ್ ಕರೆತರುವಲ್ಲಿ 'ಲಕ್ಷ್ಮೀ ಬಾಂಬ್' ನಿರ್ಮಾಪಕಿ ಶಬೀನಾ ಖಾನ್​ ಯಶಸ್ವಿಯಾಗಿದ್ದಾರೆ. ಇನ್ಮುಂದೆ ಈ ನಿರ್ದೇಶಕರೇ ಅಕ್ಷಯ್ ಕುಮಾರ್ ನಟಿಸುತ್ತಿರುವ 'ಲಕ್ಷ್ಮೀ ಬಾಂಬ್​'ಗೆ ಆ್ಯಕ್ಷನ್ ಕಟ್​ ಹೇಳಲಿದ್ದಾರೆ.

ತಮ್ಮ ಮರು ಆಗಮನದ ಬಗ್ಗೆ ಅಭಿಮಾನಿಗಳಿಗೆ ಟ್ವಿಟರ್​​ನಲ್ಲಿ ತಿಳಿಸಿರುವ ರಾಘವ್​, ನಿಮ್ಮೆಲ್ಲರ ಇಚ್ಛೆಯಂತೆ ಲಕ್ಷ್ಮೀ ಬಾಂಬ್​ ತಂಡ ಸೇರಿಕೊಳ್ಳುತ್ತಿದ್ದೇನೆ. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು, ಎಲ್ಲ ಗೊಂದಲಗಳನ್ನು ಬಗೆಹರಿಸಿರುವ ನಟ ಅಕ್ಷಯ್ ಕುಮಾರ್ ಹಾಗೂ ನಿರ್ಮಾಪಕರಾದ ಶಬೀನಾ ಖಾನ್​ ಅವರಿಗೂ ಧನ್ಯವಾದಗಳು. ನನಗೆ ಗೌರವ ನೀಡಿದ್ದಕ್ಕೆ ನಿಮಗೆ ಮತ್ತೊಮ್ಮೆ ಥ್ಯಾಂಕ್ಸ್ ಎಂದಿದ್ದಾರೆ.

ಇನ್ನು ತಮಿಳಿನ 'ಕಾಂಚನಾ 3' ಚಿತ್ರವೇ ಲಕ್ಷ್ಮೀ ಬಾಂಬ್​ ಆಗಿ ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ. ಮೂಲ ಚಿತ್ರದಲ್ಲಿ ರಾಘವ್​ ನಟಿಸಿ ನಿರ್ದೇಶಿಸಿದ್ದರು. ಲಕ್ಷ್ಮೀ ಬಾಂಬ್​ನಲ್ಲಿಯ ಇವರ ಪಾತ್ರವನ್ನು ನಟ ಅಕ್ಷಯ್ ಕುಮಾರ್ ನಿಭಾಯಿಸುತ್ತಿದ್ದಾರೆ. ಇವರು ಕೇವಲ ನಿರ್ದೇಶನ ಮಾತ್ರ ಮಾಡುತ್ತಿದ್ದಾರೆ. ಇವರ ಗಮನಕ್ಕೆ ತರದೇ ಚಿತ್ರತಂಡ ಲಕ್ಷ್ಮೀ ಬಾಂಬ್ ಫಸ್ಟ್​ ಪೋಸ್ಟರ್​ ರಿಲೀಸ್ ಮಾಡಿತ್ತು. ಇದು ರಾಘವ್ ಅವರ ಬೇಸರಕ್ಕೆ ಕಾರಣವಾಗಿತ್ತು. ಗೌರವ ಸಿಗದ ಜಾಗದಲ್ಲಿ ನಾನು ಇರಲಾರೆ ಎಂದು ನೇರವಾಗಿ ಹೇಳಿದ್ದ ಅವರು, ಚಿತ್ರತಂಡದಿಂದ ಹೊರ ನಡೆದಿದ್ದರು. ಇದೀಗ ಚಿತ್ರತಂಡದ ಮನವೊಲಿಕೆಯಿಂದಾಗಿ ಪುನಃ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.