ETV Bharat / sitara

ಬಾಲಿವುಡ್​ ನಟ ಅರ್ಜುನ್​ ಕಪೂರ್​ಗೆ ಕೋವಿಡ್​ ಪಾಸಿಟಿವ್​

ತಮಗೆ ಕೊರೊನಾ ಸೋಂಕು ತಗುಲಿರುವುದಾಗಿ ಸ್ವತಃ ಇನ್​ಸ್ಟಾಗ್ರಾಂನಲ್ಲಿ ಬಾಲಿವುಡ್​ ನಟ ಅರ್ಜುನ್​ ಕಪೂರ್​ ಖಚಿತ ಪಡಿಸಿದ್ದಾರೆ.

author img

By

Published : Sep 6, 2020, 3:39 PM IST

Actor Arjun Kapoor
ಅರ್ಜುನ್​ ಕಪೂರ್

ಮುಂಬೈ: ಬಾಲಿವುಡ್​ ನಟ ಅರ್ಜುನ್​ ಕಪೂರ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಸ್ವತಃ ತಾವೇ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಖಚಿತ ಪಡಿಸಿದ್ದಾರೆ.

"ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ ಎಂದು ನಿಮ್ಮೆಲ್ಲರಿಗೂ ತಿಳಿಸುವುದು ನನ್ನ ಕರ್ತವ್ಯವಾಗಿದೆ. ನನಗೆ ರೋಗದ ಯಾವುದೇ ಲಕ್ಷಣಗಳಿಲ್ಲ, ನಾನು ಆರೋಗ್ಯವಾಗಿದ್ದೇನೆ. ವೈದ್ಯರು ಮತ್ತು ಅಧಿಕಾರಿಗಳ ಸಲಹೆಯ ಮೇರೆಗೆ ನಾನು ಹೋಂ ಕ್ವಾರಂಟೈನ್​ನಲ್ಲಿದ್ದೇನೆ" ಎಂದು ಅರ್ಜುನ್​ ಕಪೂರ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

Arjun Kapoor Instagram post
ಅರ್ಜುನ್​ ಕಪೂರ್ ಇನ್​ಸ್ಟಾಗ್ರಾಂ ಪೋಸ್ಟ್

"ನಿಮ್ಮ ಸಹಕಾರಕ್ಕಾಗಿ ನಾನು ಎಲ್ಲರಿಗೂ ಮುಂಚಿತವಾಗಿ ಧನ್ಯವಾದ ತಿಳಿಸುತ್ತೇನೆ ಮತ್ತು ನನ್ನ ಆರೋಗ್ಯ ಪರಿಸ್ಥಿತಿ ಕುರಿತು ಅಪ್​ಡೇಟ್​ ನೀಡುತ್ತಿರುತ್ತೇನೆ. ಅಸಾಧಾರಣ ಮತ್ತು ಅಭೂತಪೂರ್ವ ಸಮಯ ಇದಾಗಿದ್ದು, ಮಾನವೀಯತೆಯು ಈ ವೈರಸ್ ಅನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆ ನನಗಿದೆ" ಎಂದು ಅರ್ಜುನ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.