ಮುಂಬೈ : ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಡರಾತ್ರಿ ನಾನಾವತಿ ಆಸ್ಪತ್ರೆಯ ಕಾರಿಡಾರ್ನಲ್ಲಿ ಏಕಾಂಗಿಯಾಗಿ ವಾಕಿಂಗ್ ಮಾಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಖಾಲಿ ಕಾರಿಡಾರ್ನಲ್ಲಿ ನಡೆದಾಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, "ಸುರಂಗದ ಕೊನೆಯಲ್ಲಿ ಬೆಳಕು, ತಡರಾತ್ರಿಯ ನಡಿಗೆ" ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ನಿಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಈಗ ನಿಮಗೆ ಯಾರು ಆಹಾರ ನೀಡ್ತಾರೆ ಎಂದು ವ್ಯಂಗ್ಯವಾಗಿ ವ್ಯಕ್ತಿಯೊಬ್ಬರು ಮಾಡಿರುವ ಟ್ವೀಟ್ಗೆ ಜೂನಿಯರ್ ಬಚ್ಚನ್ ಅದೇ ಶೈಲಿಯಲ್ಲಿ ಉತ್ತರಿಸಿದ್ದು, ಸದ್ಯಕ್ಕೆ ನಾವಿಬ್ಬರು ಆಸ್ಪತ್ರೆಯ ಗೋಡೆಗೆ ಒರಗಿ ತಿನ್ನುತ್ತಿದ್ದೇವೆ ಎಂದು ಮಾರುತ್ತರ ನೀಡಿದ್ದಾರೆ.
-
फ़िलहाल तो लेट के खा रहे हैं दोनो एक साथ अस्पताल में। 🙏🏽
— Abhishek Bachchan (@juniorbachchan) July 29, 2020 " class="align-text-top noRightClick twitterSection" data="
">फ़िलहाल तो लेट के खा रहे हैं दोनो एक साथ अस्पताल में। 🙏🏽
— Abhishek Bachchan (@juniorbachchan) July 29, 2020फ़िलहाल तो लेट के खा रहे हैं दोनो एक साथ अस्पताल में। 🙏🏽
— Abhishek Bachchan (@juniorbachchan) July 29, 2020
ಇದಕ್ಕೂ ಮೊದಲು ಅಮಿತಾಬ್ ಬಚ್ಚನ್ ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಾರಿಯರ್ಗಳಿಗೆ ಇನ್ಸ್ಟಾಗ್ರಾಂನಲ್ಲಿ ಧನ್ಯವಾದ ಸಲ್ಲಿಸಿದ್ದರು.