ಅಭಿಷೇಕ್ ಬಚ್ಚನ್ ತಮ್ಮ ಮುಂದಿನ 'ದಸ್ವಿ' ಚಿತ್ರದ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅಭಿಷೇಕ್ 'ಜೈಲಿನಲ್ಲಿರುವ ಗಂಗಾ ರಾಮ್ ಚೌಧರಿ' ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಅವರು 10 ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಕೈದಿಯಾಗಿದ್ದಾರೆ.
"ಶಿಕ್ಷಣ ನನ್ನ ಹಕ್ಕು" ಎಂಬ ಶೀರ್ಷಿಕೆಯೊಂದಿಗೆ ಟೀಸರ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಅಭಿಷೇಕ್ 10ನೇ ತರಗತಿಯ ಮಕ್ಕಳಿಗೆ ಬೋರ್ಡ್ ಪರೀಕ್ಷೆಗೆ ಶುಭ ಹಾರೈಸಿದರು. ತುಷಾರ್ ಜಲೋಟಾ ನಿರ್ದೇಶನದ 'ದಸ್ವಿ' ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 7, 2022 ರಿಂದ ಜಿಯೋ ಸಿನಿಮಾ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುತ್ತದೆ.
ಈ ಹಿಂದೆ ಚಿತ್ರದ ಸೆಟ್‌ನಲ್ಲಿರುವ ಫೋಟೋವನ್ನು ಅಭಿಷೇಕ್ ಹಂಚಿಕೊಂಡಿದ್ದರು. ಅದರಲ್ಲಿ ನಟ ಕುರ್ತಾ-ಪೈಜಾಮಾ, ನೆಹರೂ ಜಾಕೆಟ್ ಮತ್ತು ಪೇಟ ಧರಿಸಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ: ಆರಾಧ್ಯ ಬಚ್ಚನ್ ಹಿಂದಿ ಕವಿತೆ ವಾಚನ ವಿಡಿಯೋ ವೈರಲ್: ಪರಂಪರೆ ಮುಂದುವರಿಯುತ್ತೆ ಎಂದ ನೆಟ್ಟಿಗರು!