ಹೈದರಾಬಾದ್: ನಟಿ ಶ್ವೇತಾ ತಿವಾರಿ ಸೋಮವಾರ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತಿ ಅಭಿನವ್ ಕೊಹ್ಲಿ ತಮಗೆ ನಿಂದನೆ ಮಾಡಿರುವ ಮತ್ತು ದೈಹಿಕ ಹಿಂಸಾಚಾರ ನೀಡಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಕೆಲವು ಗಂಟೆಗಳ ನಂತರ, ಅಭಿನವ್ ಸಹ ಪತ್ನಿ ಶ್ವೇತಾ ಮಾಡಿರುವ ದೈಹಿಕ ಕಿರುಕುಳದ ಆರೋಪಗಳನ್ನು ನಿರಾಕರಿಸಿದ್ದಾರೆ.
ಕಸೌತಿ ಜಿಂದಗಿಯ ನಟಿ ಶ್ವೇತಾ ರಿಲೀಸ್ ಮಾಡಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಭಿನವ್ ಅವರೊಂದಿಗೆ ಮತ್ತು ಅವರ ಮಗ ರಿಯಾನ್ಶ್ ಅವರೊಂದಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ವಿಡಿಯೋ ಜೊತೆಗೆ ಶ್ವೇತಾ "ಈಗ ಸತ್ಯ ಹೊರಬರಲಿ (ಆದರೆ ಇದು ನನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ, ನಾನು ಅದನ್ನು ಕೊನೆಗೆ ಡಿಲಿಟ್ ಮಾಡುತ್ತೇನೆ, ಸತ್ಯವನ್ನು ಬಹಿರಂಗಪಡಿಸಲು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ನಂತರ ಅದು ಡಿಲಿಟ್ ಆಗಲಿದೆ. ಈ ವಿಡಿಯೋ ನೋಡಿ ನನ್ನ ಮಗು ಅವನಿಗೆ ಹೆದರುತ್ತಿದೆ. ಅವನು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿಲ್ಲ! "ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ನನ್ನ ಮಗ ತನ್ನ ತಂದೆ ಮನೆಗೆ ಬರುತ್ತಾರೆ ಅಥವಾ ಭೇಟಿಯಾಗುತ್ತಾರೆ ಎಂದರೆ ಹೆದರುತ್ತಾನೆ. ನನ್ನ ಮಗುವನ್ನು ಈ ಮಾನಸಿಕ ಆಘಾತದಿಂದ ಹೊರತರಲು ನನಗೆ ಸಾಧ್ಯವಾಗುತ್ತಿಲ್ಲ. ಅವನನ್ನು ಖುಷಿಯಾಗಿರಿಸಲು ನಾನು ತುಂಬಾ ಪ್ರಯತ್ನಿಸುತ್ತಿದ್ದೇನೆ. ಇದು ದೈಹಿಕ ಕಿರುಕುಳವಲ್ಲದಿದ್ದರೆ ಏನು !!!! ?? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ ಶ್ವೇತಾ ಅವರ ಪತಿ ಅಭಿನವ್ ಕೂಡ ಒಂದು ಗಂಟೆ ಹದಿನಾರು ನಿಮಿಷಗಳ ಸುದೀರ್ಘವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಅಕ್ಟೋಬರ್ 24, 2020 ರಂದು ನಡೆದ ಘಟನೆಗೆ ಕಾರಣವಾದ ಘಟನೆಗಳ ಕಾಲಾನುಕ್ರಮವನ್ನು ಹಂಚಿಕೊಳ್ಳುವ ಮೂಲಕ ಕಥೆಯ ಭಾಗವನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವಿಡಿಯೋವನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಅಭಿನವ್ ಸಹ ಸಮತಾ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
- " class="align-text-top noRightClick twitterSection" data="
">
ನಟಿ ಶ್ವೇತಾ ಈ ಹಿಂದೆ ರಾಜಾ ಚೌಧರಿ ಅವರನ್ನು ಮದುವೆಯಾಗಿದ್ದರು. ಅವರ ವಿರುದ್ಧವೂ ಹಿಂಸಾಚಾರ ಆರೋಪ ಹೊರಿಸಿ ವಿಚ್ಛೇದನ ಪಡೆದು 2013 ರಲ್ಲಿ ಅಭಿನವ್ ಕೊಹ್ಲಿಯನ್ನು ವಿವಾಹವಾಗಿದ್ದರು.