ಹೈದರಾಬಾದ್: ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ಯಶ್ ರಾಜ್ ಫಿಲ್ಮ್ಸ್ ಅಡಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಅಭಿನಯಿಸಲು ಸಹಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಾತ್ಕಾಲಿಕವಾಗಿ ಸಿನಿಮಾಗೆ 'ಮಹಾರಾಜ' ಎಂದು ಹೆಸರಿಡಲಾಗಿದೆ. ಇದು ಜುನೈದ್ ಅವರ ಚೊಚ್ಚಲ ಸಿನಿಮಾವಾಗಿದ್ದು, ಇದರಲ್ಲಿ ಪತ್ರಕರ್ತರಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬು ಮಾತುಗಳು ಕೇಳಿ ಬರುತ್ತಿವೆ.
ಸಿದ್ಧಾರ್ಥ್ ಪಿ ಮಲ್ಹೋತ್ರಾ ನಿರ್ದೇಶಿಸುತ್ತಿರುವ ಈ ಚಿತ್ರವು 1862ರ ಮಹಾರಾಜ್ ಲಿಬೆಲ್ ಪ್ರಕರಣ ಆಧಾರಿತ ಸಿನಿಮಾ ಎಂದು ಹೇಳಲಾಗುತ್ತಿದೆ. ಇದರಲ್ಲಿ ಮಹಾರಾಜ ಎಂಬ ದೇವಮಾನವ, ಗುಜರಾತಿ ಪತ್ರಕರ್ತ ಮತ್ತು ಸುಧಾರಕ ಕರ್ಸಂದಾಸ್ ಮುಲ್ಜಿ ವಿರುದ್ಧ ಕೇಸ್ ದಾಖಲಿಸುತ್ತಾರೆ. ಇದಕ್ಕೆ ಕಾರಣ ಅವರು ಹಿಂದೂ ಧರ್ಮದ ಮೌಲ್ಯಗಳನ್ನು ಪ್ರಶ್ನಿಸಿ ಲೇಖನ ಬರೆದಿರುವುದು. ಈ ಸಿನಿಮಾದಲ್ಲಿ ಮಲ್ಜಿ ಪಾತ್ರವನ್ನು ಜುನೈದ್ ನಿರ್ವಹಿಸಲಿದ್ದಾರೆ.
ಇದನ್ನು ಓದಿ:'ಮದಗಜ' ಟೀಸರ್ ಬಿಡುಗಡೆ ಮಾಡಲಿದ್ದಾರೆ ಪ್ರಶಾಂತ್ ನೀಲ್
ಚಿತ್ರದ ಶೀರ್ಷಿಕೆ ಮತ್ತು ಜುನೈದ್ ಪಾತ್ರದ ಹೊರತಾಗಿ, ಹೊರಬಿದ್ದ ಮತ್ತೊಂದು ಮಾಹಿತಿ ಎಂದರೇ ಅದು ಈ ಚಿತ್ರದಲ್ಲಿ ಖ್ಯಾತ ನಟ ಜೈದೀಪ್ ಅಹ್ಲಾವತ್ ಅವರು ನಟಿಸುತ್ತಿದ್ದಾರೆ ಎಂಬುದು. ಅಹ್ಲಾವತ್ ಅವರು ಈ ಚಿತ್ರದಲ್ಲಿ ಜದುನಾಥ್ಜಿ ಬ್ರಿಜ್ರತಾಂಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಪ್ರಮುಖ ವೆಬ್‌ಲಾಯ್ಡ್ ವರದಿ ಮಾಡಿದೆ.