ಹೀಗೆ ಹುಡುಗನೊಂದಿಗೆ ಹಾಯಾಗಿ ಕುಳಿತು, ಹಣೆಗೆ ಮುತ್ತು ಪಡೆದಿರುವ ತರುಣಿ ಹೆಸರು ಇರಾ ಖಾನ್. ನಿನ್ನೆ ದಿನವಿಡೀ ಸೋಷಿಯಲ್ ಮೀಡಿಯಾದಲ್ಲಿ ಈಕೆಯದ್ದೇ ಸುದ್ದಿ.
ಈ ಜೋಡಿ ಹಕ್ಕಿಗಳ ರೊಮ್ಯಾಂಟಿಕ್ ಫೋಟೋ ಟಾಪ್ ಟ್ರೆಂಡಿಂಗ್ನಲ್ಲಿತ್ತು. ಈ ಸುಂದರ ಪಟ ನೋಡಿದವರೆಲ್ಲ ಆ ಹುಡುಗಿ ಬದಲಾಗಿ ಹುಡುಗನ ಬಗ್ಗೆಯೇ ಜಾಸ್ತಿ ತಲೆ ಕೆಡಿಸಿಕೊಂಡ್ರು. ಗೂಗಲ್ಗೆ ದೌಡಾಯಿಸಿ ಹುಡುಗನ ತಲಾಶ್ ನಡೆಸಿದ್ರು. ಹೀಗೆ ಲಗುಬಗೆಯಿಂದ ಹುಡುಕಾಟ ನಡೆಸುವುದಕ್ಕೆ ಕಾರಣವೂ ಇದೆ. ಯಾಕಂದ್ರೆ, ಈ ಚಿತ್ರದಲ್ಲಿರುವ ಚೆಲುವೆ ಬಾಲಿವುಡ್ ಮೇರುನಟನ ಸುಪುತ್ರಿ. ಈಕೆಯೊಂದಿಗೆ ಇರೋ ಆ ಚಾಕೊಲೆಟ್ ಬಾಯ್ ಯಾರು ಅನ್ನೋದನ್ನು ತಿಳಿದುಕೊಳ್ಳುವ ತವಕ ಎಲ್ಲರಲ್ಲಿಯೂ ಇತ್ತು. ಅಷ್ಟಕ್ಕೂ ಈ ಹುಡುಗಿ ಯಾರು ಗೊತ್ತಾ ?
- " class="align-text-top noRightClick twitterSection" data="
">
ಈಕೆ ಹಿಂದಿ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಷ್ಟ್ ಅಮೀರ್ ಖಾನ್ ಅವರ ಮಗಳು. ಅಮೀರ್ ಮೊದಲನೇ ಪತ್ನಿ ರೀನಾ ದತ್ ಅವರಿಗೆ ಎರಡು ಮಕ್ಕಳು. ಅವರಲ್ಲಿ ಇರಾ ಖಾನ್ ಹಿರಿಯಳು. ಈಕೆ ತನ್ನ ಅಪ್ಪನಂತೆ ಸೋಷಿಯಲ್ ಮೀಡಿಯಾದಲ್ಲಿ ಜಾಸ್ತಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ನಿನ್ನೆ ಮಾತ್ರ ನೆಟಿಜನ್ಸ್ ತಲೆಗೆ ಸ್ಪಲ್ಪ ಕೆಲಸ ಕೊಟ್ಟು ಬಿಟ್ರು. ಮೊದಲೇ ಹೇಳಿದಂತೆ ಇದಕ್ಕೆ ಕಾರಣ ಮೇಲೆ ತೋರಿಸಿರುವ ಫೋಟೋ.
- " class="align-text-top noRightClick twitterSection" data="
">
ಈಕೆಯೊಂದಿಗೆ ಆ ಫೋಟೋದಲ್ಲಿ ಕಾಣಿಸಿಕೊಂಡಿದ್ದು ಮಿಶಾಲ್ ಕಿರ್ಪಾಲಾನಿ. ಇರಾ ಹಾಗೂ ಈತ ಕ್ಲೋಸ್ಫ್ರೆಂಡ್. ಇದನ್ನು ನಾವು ಹೇಳುತ್ತಿಲ್ಲ, ಒಮ್ಮೆ ಇವರಿಬ್ಬರ ಇನ್ಸ್ಟಾಗ್ರಾಂ ಇಣುಕಿ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಮಿಶಾಲ್ ಕಲಾವಿದ, ನಿರ್ಮಾಪಕ ಹಾಗೂ ಮ್ಯೂಸಿಕ್ ಕಂಪೋಸರ್.
- " class="align-text-top noRightClick twitterSection" data="
">