ETV Bharat / sitara

ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ಆಮೀರ್ ಖಾನ್ ನಿರ್ಧಾರ...! - ಸೋಷಿಯಲ್ ಮೀಡಿಯಾ ತೊರೆದ ಆಮೀರ್ ಖಾನ್

ಬಾಲಿವುಡ್ ನಟ ಆಮೀರ್ ಖಾನ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ವೈಯಕ್ತಿಕ ಸೋಷಿಯಲ್ ಮೀಡಿಯಾ ಬದಲು ತಮ್ಮ ಎಕೆಪಿ ಪ್ರೊಡಕ್ಷನ್ಸ್ ಅಧಿಕೃತ ಖಾತೆ ಮೂಲಕ ಅಭಿಮಾನಿಗಳಿಗೆ ನನ್ನ ಬಗ್ಗೆ ಅಪ್​​ಡೇಟ್ ಸಿಗಲಿದೆ ಎಂದು ಆಮೀರ್ ಖಾನ್ ತಾವು ಮಾಡಿರುವ ಪೋಸ್ಟ್​​​ನಲ್ಲಿ ತಿಳಿಸಿದ್ದಾರೆ.

Aamir Khan
ಆಮೀರ್ ಖಾನ್
author img

By

Published : Mar 17, 2021, 9:11 AM IST

ಸೆಲಬ್ರಿಟಿಗಳು ಅಭಿಮಾನಿಗಳ ಕೈಗೆ ಅಷ್ಟು ಸುಲಭವಾಗಿ ಸಿಗದಿದ್ದರೂ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ತಮ್ಮ ಸಿನಿಮಾ ಅಥವಾ ಇನ್ನಿತರ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸೆಲಬ್ರಿಟಿಗಳು ಅಪ್​ಡೇಟ್ ನೀಡಿದರೆ, ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚಿನ ನಟ-ನಟಿಯರ ಬಗ್ಗೆ ತಿಳಿದುಕೊಳ್ಳುತ್ತಾರೆ. ತಮ್ಮ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

Aamir Khan
ಆಮೀರ್ ಖಾನ್ ಪೋಸ್ಟ್

ಆದರೆ ಅನೇಕ ಸೆಲಬ್ರಿಟಿಗಳು ಇಂದಿಗೂ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದಾರೆ. ಮತ್ತೆ ಕೆಲವರು ಕಾರಣಾಂತರಗಳಿಂದ ಇರುವ ಸೋಷಿಯಲ್​​​ ಮೀಡಿಯಾ ಖಾತೆಯನ್ನು ಡಿಲೀಟ್ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಆಮೀರ್ ಖಾನ್ ಕೂಡಾ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಮಾರ್ಚ್ 14 ರಂದು ಆಮೀರ್ ಖಾನ್ 56ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮೊನ್ನೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಆಮೀರ್ ಖಾನ್, ತಾವು ಸೋಷಿಯಲ್ ಮೀಡಿಯಾದಿಂದ ಹೊರ ಹೋಗಲು ನಿರ್ಧರಿಸಿರುವ ವಿಚಾರ ತಿಳಿಸಿದ್ದಾರೆ. " ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಸೋಷಿಯಲ್ ಮೀಡಿಯಾದಲ್ಲಿ ಇದು ನನ್ನ ಕೊನೆಯ ಪೋಸ್ಟ್. ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಇದರ ಬದಲಿಗೆ ನನ್ನ ಎಕೆಪಿ ಸಂಸ್ಥೆ ಅಧಿಕೃತ ಖಾತೆ ತೆರೆದಿದ್ದು ಈ ಮೂಲಕ ನೀವು ನನ್ನ ಹಾಗೂ ನನ್ನ ಸಿನಿಮಾ ಬಗ್ಗೆ ಅಪ್​ಡೇಟ್ ಪಡೆಯಲಿದ್ದೀರಿ" ಎಂದು ಆಮೀರ್ ಖಾನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ರಾಬರ್ಟ್​' ಸಕ್ಸಸ್ ಮೀಟ್: ಚಿತ್ರದ ನಾಯಕಿ ಆಶಾ ಭಟ್ ಮಾತು

ಆಮೀರ್ ಖಾನ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿರುವುದು ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಆಮೀರ್ ಖಾನ್ ಸದ್ಯಕ್ಕೆ 'ಲಾಲ್​ಸಿಂಗ್ ಛಡ್ಡಾ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಇದೇ ವರ್ಷ್ ಕ್ರಿಸ್​​​ಮಸ್​​​​ ವೇಳೆಗೆ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.