ನ್ಯೂಯಾರ್ಕ್: ಈ ಬಾರಿಯ ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್ನಲ್ಲಿ ಭಾರತ ಪ್ರಶಸ್ತಿ ಗಳಿಸುವ ಭರವಸೆ ಮೂಡಿಸಿತ್ತು. ಆದರೆ, ಸೋಮವಾರ ಮುಕ್ತಾಯಗೊಂಡ ಎಮ್ಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಯಾವುದೇ ಪ್ರಶಸ್ತಿ ಗಳಿಸದೇ ಭಾರತದ ನಟರು ನಿರಾಸೆ ಮೂಡಿಸಿದ್ದಾರೆ.
ಎಮ್ಮಿ ಅವಾರ್ಡ್ಗಾಗಿ ಭಾರತದಿಂದ ಉತ್ತಮ ನಟ ವಿಭಾಗಕ್ಕೆ ನವಾಜುದ್ದೀನ್ ಸಿದ್ಧಿಕಿ, ಅತ್ಯುತ್ತಮ ಹಾಸ್ಯ ಕಾರ್ಯಕ್ರಮ ವಿಭಾಗಕ್ಕೆ ವೀರ್ ದಾಸ್ ಫಾರ್ ಇಂಡಿಯಾ, ಉತ್ತಮ ಧಾರಾವಾಹಿ ವಿಭಾಗಕ್ಕೆ ಸುಶ್ಮಿತಾ ಸೇನ್ ಅವರ ಆರ್ಯ ಧಾರಾವಾಹಿ ಸರಣಿ ನಾಮಾಂಕಿಗೊಂಡಿದ್ದವು. ಆದರೆ, ಮೂರು ವಿಭಾಗಗಳಲ್ಲೂ ಭಾರತಕ್ಕೆ ಪ್ರಶಸ್ತಿ ಬಂದಿಲ್ಲ.
ಅತ್ಯುತ್ತಮ ನಟ ವಿಭಾಗದಲ್ಲಿ ನವಾಜುದ್ದೀನ್ ಸಿದ್ಧಿಕಿ ಅವರು ಖ್ಯಾತ ಬ್ರಿಟಿಷ್ ನಟ ಡೇವಿಡ್ ಟೆನೆಂಟ್ ಅವರೆದುದು ಪ್ರಶಸ್ತಿ ಕಳೆದುಕೊಂಡರೆ, ವೀರ್ ದಾಸ್, ಜನಪ್ರಿಯ 'ಕಾಲ್ ಮೈ ಏಜೆಂಟ್' ಹಾಸ್ಯ ಕಾರ್ಯಕ್ರಮದೆದುರು ಪ್ರಶಸ್ತಿಯಿಂದ ವಂಚಿತರಾದರು.
ಪ್ರಶಸ್ತಿ ದೊರೆಯದೇ ಹೋದರೂ ಮೂರು ವಿಭಾಗಗಳಲ್ಲಿ ಭಾರತೀಯರು ನಾಮಾಂಕಿತಗೊಂಡಿದ್ದು ಇದೇ ಮೊದಲು. ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವು ಗಮನ ಸೆಳೆದಿದೆ.
Emmy Awardees list -2021
ಅತ್ಯುತ್ತಮ ನಟಿ: ಹೈಲೇ ಸ್ಕೈರೀಸ್(ಇಂಗ್ಲೆಂಡ್)
ಅತ್ಯುತ್ತಮ ನಟ: ಡೇವಿಡ್ ಟೆನಂಟ್(ಇಂಗ್ಲೆಂಡ್)
ಉತ್ತಮ ಹಾಸ್ಯ ಧಾರಾವಾಹಿ ಸರಣಿ: ಕಾಲ್ ಮೈ ಏಜೆಂಟ್ ಸೀಸನ್(ಫ್ರಾನ್ಸ್)
ಉತ್ತಮ ಸಾಕ್ಷ್ಯಚಿತ್ರ: ಹೋಪ್ ಫ್ರೋಜನ್: ಎ ಕ್ವೆಸ್ಟ್ ಟು ಲೈವ್ ಟ್ವೈಸ್(ಥೈಲ್ಯಾಂಡ್)
ನಾಟಕ ಸರಣಿ - ಟೆಹ್ರಾನ್ (ಇಸ್ರೇಲ್)
ಉತ್ತಮ ಕಿರು ರೂಪದ ಸರಣಿ: ಇನ್ಸೈಡ್(ನ್ಯೂಜಿಲೆಂಡ್)