ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ಮಾಲೀಕತ್ವದ ಯೂಟ್ಯೂಬ್ ತನ್ನ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಯೂಟ್ಯೂಬ್ ಮ್ಯೂಸಿಕ್‌ಗೆ 'ರಿಯಲ್ ಟೈಮ್ ಲಿರಿಕ್ಸ್' ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಾರಂಭಿಸಿದೆ. ಕೆಲವು ಯೂಟ್ಯೂಬ್ ಮ್ಯೂಸಿಕ್ ಚಂದಾದಾರರಿಗೆ ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಾಗಿದೆ. ಆದಾಗ್ಯೂ, ಇದು ಪ್ರತಿಯೊಬ್ಬ ಬಳಕೆದಾರರಿಗೆ ವ್ಯಾಪಕವಾಗಿ ಲಭ್ಯವಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯೂಟ್ಯೂಬ್ನ ಹೊಸ ವೈಶಿಷ್ಟ್ಯವು Spotify ಮತ್ತು Apple Music ನಂಥ ಇತರ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗಳಲ್ಲಿ ಲಭ್ಯವಿರುವ ರಿಯಲ್ ಟೈಮ್ ಲಿರಿಕ್ಸ್ ವೈಶಿಷ್ಟ್ಯವನ್ನು ಹೋಲುತ್ತದೆ.
ರಿಯಲ್ ಟೈಮ್ ಲಿರಿಕ್ಸ್ ನೊಂದಿಗೆ ಬಳಕೆದಾರರು ಹಾಡಿನ ಲಿರಿಕ್ಸ್ ನೋಡುತ್ತಲೇ ತಮ್ಮ ನೆಚ್ಚಿನ ಹಾಡುಗಳನ್ನು ಆನಂದಿಸಬಹುದು. ಇದು ಬಳಕೆದಾರರ ಸಂಗೀತ ಆನಂದಿಸುವ ಅನುಭವವನ್ನು ಇನ್ನೂ ಉತ್ತಮಗೊಳಿಸಲಿದೆ. ರಿಯಲ್ ಟೈಮ್ ಲಿರಿಕ್ಸ್ನೊಂದಿಗೆ ಬಳಕೆದಾರರು ನೈಜ ಸಮಯದಲ್ಲಿ ಲಿರಿಕ್ಸ್ನೊಂದಿಗೆ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತ ತಾವೂ ಹಾಡಬಹುದು. ಹೊಸ ಫೀಚರ್ ಬರುವ ಮುನ್ನ ಪ್ಲೇಯಿಂಗ್‌ನ ಕೆಳಭಾಗದಲ್ಲಿರುವ ಮಧ್ಯದ ಟ್ಯಾಬ್ ಅನ್ನು ಎಳೆದಾಗ ಯೂಟ್ಯೂಬ್ ಮ್ಯೂಸಿಕ್ ಪ್ರಸ್ತುತ ಸ್ಥಿರವಾಗಿ ಲಿರಿಕ್ಸ್ ಅನ್ನು ತೋರಿಸುತ್ತದೆ. ಅಂದರೆ ಇದು ಹಾಡಿನೊಂದಿಗೆ ಮುಂದೆ ಚಲಿಸುವುದಿಲ್ಲ.
ಈ ಕುರಿತಾದ ಸ್ಕ್ರೀನ್‌ಶಾಟ್‌ಗಳು ಮತ್ತು ತಮ್ಮ ಅನುಭವಗಳನ್ನು ಪೋಸ್ಟ್ ಮಾಡಿರುವ ಹಲವಾರು ಬಳಕೆದಾರರು ಈ ವೈಶಿಷ್ಟ್ಯವನ್ನು ಈಗಾಗಲೇ ಸಕ್ರಿಯಗೊಳಿಸಿದ್ದಾರೆ. ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್ ತೆರೆಯುವ ಮೂಲಕ ಮತ್ತು ಪ್ಲೇ ಮಾಡಲು ಹಾಡನ್ನು ಆಯ್ಕೆ ಮಾಡುವ ಮೂಲಕ ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಬಹುದು. ಅಲ್ಲದೆ ಸ್ಕ್ರೀನ್ ಕೆಳಭಾಗದಲ್ಲಿರುವ 'ಲಿರಿಕ್ಸ್' ಟ್ಯಾಬ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಹಾಡು ಪ್ಲೇ ಆಗಲು ಪ್ರಾರಂಭಿಸಿದ ನಂತರ ಅವರು ರಿಯಲ್ ಟೈಮ್ ಲಿರಿಕ್ಸ್ ಸೌಲಭ್ಯವನ್ನು ಮ್ಯಾನುವಲ್ ಆಗಿ ಸಕ್ರಿಯಗೊಳಿಸಬಹುದು.
ಏತನ್ಮಧ್ಯೆ, ಯೂಟ್ಯೂಬ್ ತನ್ನ ಮ್ಯೂಸಿಕ್ ಅಪ್ಲಿಕೇಶನ್‌ಗೆ ಹಾಡು ಮತ್ತು ಆಲ್ಬಮ್ ಕ್ರೆಡಿಟ್‌ಗಳನ್ನು ಹೊರತಂದಿದೆ. ಈ ಹೊಸ ವೈಶಿಷ್ಟ್ಯದೊಂದಿಗೆ ಬಳಕೆದಾರರು ತಮ್ಮ ನೆಚ್ಚಿನ ಸಂಗೀತವನ್ನು ಕೇಳುವಾಗ ಹಾಡು ಮತ್ತು ಆಲ್ಬಮ್ ಕ್ರೆಡಿಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ.
ಯೂಟ್ಯೂಬ್ ಇದು ಉಚಿತ ವೀಡಿಯೊ ಶೇರಿಂಗ್ ವೆಬ್‌ಸೈಟ್ ಆಗಿದ್ದು, ಆನ್‌ಲೈನ್ ಮೂಲಕ ವೀಡಿಯೊ ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ. ಇತರರೊಂದಿಗೆ ಶೇರ್ ಮಾಡಲು ನಿಮ್ಮ ಸ್ವಂತ ವೀಡಿಯೊಗಳನ್ನು ಸಹ ನೀವು ರಚಿಸಬಹುದು ಮತ್ತು ಅಪ್‌ಲೋಡ್ ಮಾಡಬಹುದು. ಇದನ್ನು ಮೂಲತಃ 2005 ರಲ್ಲಿ ಆರಂಭಿಸಲಾಯಿತು. ಯೂಟ್ಯೂಬ್ ಈಗ ವೆಬ್‌ನಲ್ಲಿ ಅತ್ಯಂತ ಜನಪ್ರಿಯ ಸೈಟ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಬಳಕೆದಾರರು ಪ್ರತಿ ತಿಂಗಳು ಸುಮಾರು 6 ಶತಕೋಟಿ ಗಂಟೆಗಳ ವೀಡಿಯೊವನ್ನು ವೀಕ್ಷಿಸುತ್ತಾರೆ.
ಯೂಟ್ಯೂಬ್ ತುಂಬಾ ಜನಪ್ರಿಯವಾಗಲು ಒಂದು ಕಾರಣವೆಂದರೆ ಅದರಲ್ಲಿರುವ ಬೃಹತ್ ಪ್ರಮಾಣದ ವೀಡಿಯೊಗಳ ಸಂಖ್ಯೆ. ಸರಾಸರಿಯಾಗಿ ಪ್ರತಿ ನಿಮಿಷಕ್ಕೆ 100 ಗಂಟೆಗಳ ವೀಡಿಯೊವನ್ನು ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಲಾಗುತ್ತದೆ. ಹೀಗಾಗಿ ನೀವು ಯಾವಾಗಲೂ ಏನಾದರು ಹೊಸದನ್ನು ಇದರಲ್ಲಿ ವೀಕ್ಷಿಸಬಹುದು. ಬೆಕ್ಕು, ನಾಯಿ ಸೇರಿದಂತೆ ಶೈಕ್ಷಣಿಕ ವೀಡಿಯೊಗಳನ್ನು ಸಹ ನೀವು ಇದರಲ್ಲಿ ನೋಡಬಹುದು.
ಇದನ್ನೂ ಓದಿ : ಯುವತಿಯಿಂದ ಬೆತ್ತಲೆ ವೀಡಿಯೊ ಕಾಲ್: ಹನಿಟ್ರ್ಯಾಪ್ ದೂರು ನೀಡಿದ ಶಾಸಕ ತಿಪ್ಪಾರೆಡ್ಡಿ