ETV Bharat / science-and-technology

ನಿರ್ದಿಷ್ಟ ಆನುವಂಶಿಕ ಅಸಹಜತೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್​ ಬಾಧೆ ಹೆಚ್ಚು

ಕೆಲ ನಿರ್ದಿಷ್ಟ ರೀತಿಯ ಆನುವಂಶಿಕ ಅಸಹಜತೆ ಹೊಂದಿರುವ ಮಹಿಳೆಯರಿಗೆ 50 ವರ್ಷ ವಯಸ್ಸಿನ ನಂತರ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅಧ್ಯಯನವೊಂದು ಹೇಳಿದೆ.

women over 50 with specific mutations
women over 50 with specific mutations
author img

By

Published : Feb 26, 2023, 12:35 PM IST

ಟೊರೊಂಟೊ (ಕೆನಡಾ) : BRCA1 ಅಥವಾ BRCA2 ಆನುವಂಶಿಕ ಅಸಹಜತೆಗಳನ್ನು ಹೊಂದಿರುವ ಮಹಿಳೆಯರು 50 ವರ್ಷ ವಯಸ್ಸಿನ ನಂತರ ಕ್ಯಾನ್ಸರ್ ​ಪೀಡಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಅವರಿಗೆ ಎಂದಿಗೂ ಕ್ಯಾನ್ಸರ್​ ಬಂದಿಲ್ಲವಾದರೂ ಈ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಈ ರೂಪಾಂತರಗಳು ಸ್ತನ ಮತ್ತು ಅಂಡಾಶಯ ಕ್ಯಾನ್ಸರ್​ನ ಆರಂಭಿಕ ಹಂತದಲ್ಲಿ ಸಂಬಂಧ ಹೊಂದಿದ್ದರೂ ಸಹ ಈ ಸಾಧ್ಯತೆ ನಿಜವಾಗಿರುತ್ತದೆ. ಈ ಸಂಶೋಧನಾ ವರದಿಗಳು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಜರ್ನಲ್ ನಲ್ಲಿ ಇತ್ತೀಚೆಗೆ ಪ್ರಕಟವಾಗಿವೆ.

ಈ ಅಧ್ಯಯನವು 16 ದೇಶಗಳ 50 ರಿಂದ 75 ವರ್ಷದೊಳಗಿನ 2000 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿತು. ತಾವು BRCA ರೂಪಾಂತರವನ್ನು ಹೊಂದಿದ್ದೇವೆಂದು ಇವರಿಗೆ ತಿಳಿದಿತ್ತು ಮತ್ತು ಇವರಿಗೆ ಈ ಹಿಂದೆ ಕ್ಯಾನ್ಸರ್ ರೋಗ ಪತ್ತೆ ಆಗಿರಲಿಲ್ಲ. ಈ ಮಹಿಳೆಯರು 50 ವರ್ಷ ವಯಸ್ಸಿನ ನಂತರ ಯಾವುದೇ ರೀತಿಯ ಕ್ಯಾನ್ಸರ್ ಪೀಡಿತರಾಗುವ ಸಂಚಿತ ಅಪಾಯವು BRCA1 ರೂಪಾಂತರ ಹೊಂದಿರುವವರಿಗೆ 49 ಪ್ರತಿಶತ ಮತ್ತು BRCA2 ರೂಪಾಂತರ ಹೊಂದಿರುವವರಿಗೆ 43 ಪ್ರತಿಶತ ಆಗಿರುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಗೆ ಒಳಗಾಗದ ಅಧ್ಯಯನ ಸಮೂಹದಲ್ಲಿ, BRCA1 ರೂಪಾಂತರ ಹೊಂದಿರುವವರಿಗೆ 77 ಪ್ರತಿಶತದಷ್ಟು ಮತ್ತು BRCA2 ರೂಪಾಂತರ ಹೊಂದಿರುವವರಿಗೆ 67 ಪ್ರತಿಶತದಷ್ಟು ಅಪಾಯವು ಇನ್ನೂ ಹೆಚ್ಚಾಗಿದೆ.

ನಮ್ಮ ಫಲಿತಾಂಶಗಳ ಬಗ್ಗೆ ಗಮನಾರ್ಹವಾದ ಸಂಗತಿಯೆಂದರೆ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್​ಗಳು ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್​ಗಳಾಗಿವೆ ಮತ್ತು ಈ ಆನುವಂಶಿಕ ಅಪಾಯಕಾರಿ ಅಂಶಗಳನ್ನು ಹೊಂದಿರುವ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂದು ನಮಗೆ ತಿಳಿದಿದೆ ಎಂದು ಮಹಿಳಾ ಕಾಲೇಜು ಆಸ್ಪತ್ರೆಯಲ್ಲಿ ಹಿರಿಯ ವಿಜ್ಞಾನಿಯೂ ಆಗಿರುವ ಮೆಟ್ಕಾಫ್ ಹೇಳಿದರು.

ಸಂಶೋಧನೆಯಲ್ಲಿ ಪಾಲ್ಗೊಂಡ ಮಹಿಳೆಯರಲ್ಲಿ ಕೇವಲ 15 ಪ್ರತಿಶತದಷ್ಟು ಮಹಿಳೆಯರು 50 ವರ್ಷ ವಯಸ್ಸಿಗೆ ಮುನ್ನ preventative bilateral mastectomy ಗೆ ಒಳಗಾದರು ಮತ್ತು 43 ಪ್ರತಿಶತದಷ್ಟು ಮಹಿಳೆಯರು bilateral salpingo-oophorectomy (BSO) ಗೆ (ಅಂಡಾಶಯಗಳು ಮತ್ತು ಫಾಲೋಪಿಯನ್ ಟ್ಯೂಬ್‌ಗಳನ್ನು ತೆಗೆದುಹಾಕುವುದು) ಒಳಗಾದರು. ಇವರಿಗೆ ಯಾವುದೇ ಕ್ಯಾನ್ಸರ್ ಬರುವ ಅಪಾಯ ಅತ್ಯಂತ ಕಡಿಮೆ ಎಂದರೆ ಶೇ 9 ರಷ್ಟು ಎಂದು ಹೇಳಲಾಗಿದೆ.

ನಮ್ಮ ವಿಶ್ಲೇಷಣೆಯು ಈ ಅಪಾಯ ಕಡಿತ ಶಸ್ತ್ರಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತದೆ ಮತ್ತು ನಂತರದ ವಯಸ್ಸಿನಲ್ಲಿ ಅವರ ಅನುವಂಶೀಯತೆಯು ಅವರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಒಳಗೊಂಡಂತೆ ಅವರ ಕ್ಯಾನ್ಸರ್ ಅಪಾಯಕ್ಕೆ ವೈದ್ಯಕೀಯ ಮಾರ್ಗಸೂಚಿಗಳು ಮತ್ತು ಶಿಫಾರಸುಗಳನ್ನು ಪರಿಗಣಿಸಲು ವ್ಯಕ್ತಿಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರ ಅಗತ್ಯವನ್ನು ಒತ್ತಿಹೇಳುತ್ತದೆ ಮೆಟ್ಕಾಫ್ ಹೇಳುತ್ತಾರೆ.

ಕೆಲವು ದೇಶಗಳಲ್ಲಿ ಅಪಾಯ ಕಡಿಮೆ ಮಾಡುವ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟಕರವಾಗಿರಬಹುದು ಎಂಬ ಅಂಶವನ್ನು ಒಳಗೊಂಡಂತೆ ಅಧ್ಯಯನಕ್ಕೆ ಕೆಲವು ಮಿತಿಗಳಿವೆ ಮತ್ತು ಈ ಮಹಿಳೆಯರು ಎಷ್ಟು ಬಾರಿ ಆನುವಂಶಿಕ ಸಮಾಲೋಚನೆಯನ್ನು ಪಡೆದರು ಅಥವಾ ಆನುವಂಶಿಕ ಸಮಾಲೋಚನೆಯನ್ನು ಪಡೆದರಾ ಎಂಬ ವಿಷಯವನ್ನು ನಿರ್ಣಯಿಸಲಾಗಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ನಮ್ಮ ಅಧ್ಯಯನದಲ್ಲಿ ಭಾಗವಹಿಸುವವರು ವಯಸ್ಸಾದಂತೆ ಕ್ಯಾನ್ಸರ್ ಅಪಾಯದ ಬಗ್ಗೆ ಹೆಚ್ಚುವರಿ ಸಲಹೆಯನ್ನು ಪಡೆದಿದ್ದಾರೆಯೇ ಎಂಬ ಬಗ್ಗೆ ನಮಗೆ ತಿಳಿದಿಲ್ಲ ಮತ್ತು ಈ ಮಹಿಳೆಯರಲ್ಲಿ ಕೆಲವರು 50 ವರ್ಷಕ್ಕಿಂತ ಮೊದಲು ರೋಗ ತಡೆಗಟ್ಟುವ ಶಸ್ತ್ರಚಿಕಿತ್ಸೆಯನ್ನು ಏಕೆ ಮಾಡಿಸಿಕೊಳ್ಳಲಿಲ್ಲ ಎಂಬುದನ್ನು ನಿರ್ಧರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಮೆಟ್ಕಾಫ್ ಹೇಳುತ್ತಾರೆ. ಆದಾಗ್ಯೂ, ಸ್ಕ್ರೀನಿಂಗ್​ನಿಂದ ಮಾತ್ರ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಬಹುದು ಹಾಗೂ ಈ ಮೂಲಕ ಮರಣದ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ. ಇದು ಕ್ಯಾನ್ಸರ್ ಸಂಭವಿಸುವ ಅಪಾಯವನ್ನು ಕಡಿಮೆ ಮಾಡುವುದಿಲ್ಲ.

ಇದನ್ನೂ ಓದಿ : ಡೆಮೆನ್ಶಿಯಾದಂತಹ ಅಪಾಯಕ್ಕೆ ಕಾರಣವಾಗುತ್ತದೆ ಸಾಮಾಜಿಕ ಪ್ರತ್ಯೇಕಿಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.