ETV Bharat / science-and-technology

ಟ್ವಿಟರ್ ಖಾತೆ ಸಸ್ಪೆಂಡ್ ಆಗುವುದೇಕೆ? ಸಸ್ಪೆಂಡ್​ ಆಗದಿರಲು ಏನು ಮಾಡಬೇಕು? - ಬೆದರಿಸುವ ಅಥವಾ ಕಿರುಕುಳ ನೀಡುವ ಟ್ವೀಟ್‌

ಟ್ವಿಟರ್​ ಖಾತೆಗಳು ಅಮಾನತಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಟ್ವಿಟರ್​ ಕಂಪನಿ ತಾನು ರೂಪಿಸಿದ ನಿಯಮಗಳನ್ನು ಬಳಕೆದಾರರು ಉಲ್ಲಂಘಿಸಿದಲ್ಲಿ ಅಂಥ ಖಾತೆಗಳನ್ನು ಅಮಾನತು ಮಾಡುತ್ತದೆ. ಯಾವೆಲ್ಲ ಕಾರಣಗಳಿಗಾಗಿ ಖಾತೆ ಅಮಾನತಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಒಳಿತು.

ಟ್ವಿಟರ್ ಖಾತೆ ಸಸ್ಪೆಂಡ್ ಆಗುವುದೇಕೆ? ಸಸ್ಪೆಂಡ್​ ಆಗದಿರಲು ಏನು ಮಾಡಬೇಕು?
why-twitter-account-gets-suspended-what-should-be-done-to-avoid-suspension
author img

By

Published : Jan 6, 2023, 6:14 PM IST

ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ. ಅದರಲ್ಲೂ ಟ್ವಿಟರ್ ಇದರಲ್ಲಿ ಮುಂಚೂಣಿಯಲ್ಲಿದೆ. ಆದರೆ, ಕೆಲವೊಮ್ಮೆ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗೇಕೆ? ಇದಕ್ಕೆ ಕಾರಣವಾಗುವ ಅಂಶಗಳೇನು?

ನಿಯಮ ಉಲ್ಲಂಘಿಸಿದರೆ ಹುಷಾರ್!: ನೆಟಿಜನ್‌ಗಳು ಟ್ವಿಟರ್‌ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ಆದರೆ, ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಇದೇ ಚರ್ಚೆಯ ವಿಷಯವಾಗಿದೆ. ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಈ ಕಂಪನಿಯನ್ನು ಖರೀದಿಸಲು ಮುಂದಾದಾಗಿನಿಂದ ಅದರ ಮಾಲೀಕತ್ವದ ನಿರ್ಧಾರದವರೆಗೆ ಎಲ್ಲವೂ ಸುದ್ದಿಯಲ್ಲಿದೆ. ಮತ್ತೊಂದೆಡೆ ಟ್ವಿಟರ್ ಖಾತೆಗಳನ್ನು ಅಮಾನತು ಮಾಡುವುದು ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಇದೆಲ್ಲ ಏಕೆ ನಡೆಯುತ್ತಿದೆ? ಇದಕ್ಕೆ ಕಾರಣವೇನು?

ಒಂದು ಕಾಲದಲ್ಲಿ ಸೆಲೆಬ್ರಿಟಿಗಳು ಮಾತ್ರ ಬಳಸುತ್ತಿದ್ದ ಟ್ವಿಟರ್ ಈಗ ಎಲ್ಲರಿಗೂ ಲಭ್ಯವಿದೆ. ಟ್ವಿಟರ್​​ನಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ, ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಜನರು ಈ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಖಾತೆಯನ್ನು ಹೊಂದಿದ್ದಾರೆ. ಆದರೆ, ಕೆಲವೊಮ್ಮೆ ಕೆಲವೊಬ್ಬರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್, ಬಾಲಿವುಡ್ ನಟಿ ಕಂಗನಾ ರಣಾವತ್​, ಕೆಲವು ಬಿಜೆಪಿ ನಾಯಕರು ಮತ್ತು ಇತ್ತೀಚೆಗೆ 'ಕಾಂತಾರ' ನಟ ಕಿಶೋರ್ ಅವರ ಖಾತೆಗಳನ್ನು ಅಮಾನತುಗೊಳಿಸಲಾಗಿದೆ.

ಯಾರೋ ಒಬ್ಬರ ಟ್ವಿಟರ್ ಖಾತೆ ಅಮಾನತಾಗಿದೆ ಎಂದರೆ.. ಅವರು Twitter ನ ನೀತಿಯನ್ನು ಉಲ್ಲಂಘಿಸಿದ್ದಾರೆ ಅಥವಾ ಅವರ ಅಕೌಂಟ್​ನಿಂದ ಭದ್ರತಾ ಉಲ್ಲಂಘನೆ ನಡೆದಿದೆ ಎಂದು ಅರ್ಥ. ನಿಜವಾಗಿಯೂ ಖಾತೆ ಅಮಾನತಿಗೆ ಕಾರಣವಾಗುವ ಅಂಶಗಳು ಹೀಗಿವೆ. ಅಮಾನತುಗೊಂಡಿರುವ ಬಹುತೇಕ ಖಾತೆಗಳು ನಕಲಿ ಅಥವಾ ಸ್ಪ್ಯಾಮ್ ಆಗಿರುತ್ತವೆ. ಇಂತಹ ಖಾತೆಗಳು ಟ್ವಿಟರ್ ಬಳಕೆದಾರರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಬಹುದು. ಅದಕ್ಕಾಗಿಯೇ ಕಂಪನಿಯು ಅಂಥ ಖಾತೆಗಳನ್ನು ಅಮಾನತುಗೊಳಿಸುತ್ತದೆ. ಖಾತೆ ಹ್ಯಾಕ್ ಆಗಿದ್ದರೆ ಅಥವಾ ವೈಯಕ್ತಿಕ ವಿವರಗಳು ಸೋರಿಕೆಯಾದಲ್ಲಿ ಬಳಕೆದಾರರ ಸುರಕ್ಷತಾ ಕಾರಣಗಳಿಗಾಗಿ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ. ಸುರಕ್ಷತೆಯನ್ನು ಖಾತ್ರಿಪಡಿಸಿದ ನಂತರ ಖಾತೆಯನ್ನು ಮರುಸ್ಥಾಪಿಸಲಾಗುತ್ತದೆ.

ಜನಾಂಗ, ರಾಷ್ಟ್ರೀಯತೆ, ಪ್ರದೇಶ, ಜಾತಿ, ಲಿಂಗ, ವಯಸ್ಸು, ಅಂಗವೈಕಲ್ಯ ಅಥವಾ ಗಂಭೀರ ಕಾಯಿಲೆಗಳನ್ನು ಬಹಿರಂಗಪಡಿಸುವ ಮೂಲಕ ಇತರರನ್ನು ಅವಮಾನಿಸುವ ಅಥವಾ ಬೆದರಿಸುವ ಅಥವಾ ಕಿರುಕುಳ ನೀಡುವ ಟ್ವೀಟ್‌ ಮಾಡಿದಲ್ಲಿ ಅಂಥ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ. ಅಲ್ಲದೆ, ಬೇರೊಬ್ಬರ ಹೆಸರಿನಲ್ಲಿ ಖಾತೆಯನ್ನು ತೆರೆಯುವುದು, ಅವರನ್ನು ನಕಲು ಮಾಡುವುದು ಅಥವಾ ಅವರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಖಾತೆ ಅಮಾನತಿಗೆ ಕಾರಣವಾಗುತ್ತದೆ.

ಹಿಂಸಾತ್ಮಕ ವಿಡಿಯೋ ಹಂಚಿಕೊಂಡರೆ ಸಸ್ಪೆಂಡ್​ ಆಗಬಹುದು: ಟ್ವಿಟರ್‌ನಲ್ಲಿ ಹಿಂಸಾತ್ಮಕ ಮತ್ತು ಆಕ್ಷೇಪಾರ್ಹ ವಿಡಿಯೊಗಳನ್ನು ಹಂಚಿಕೊಂಡರೆ ಖಾತೆ ಅಮಾನತಾಗಬಹುದು. ಆತ್ಮಹತ್ಯೆಯ ವಿಷಯ ಮತ್ತು ಸ್ವಯಂ ಹಾನಿಯ ವಿಡಿಯೊಗಳನ್ನು ಹಂಚಿಕೊಳ್ಳುವ ಖಾತೆಗಳನ್ನು ಟ್ವಿಟರ್ ಅಮಾನತುಗೊಳಿಸುತ್ತದೆ. ಅಕ್ರಮ ವಸ್ತುಗಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳಿಗೆ ಟ್ವಿಟರ್​​ ಅನ್ನು ಬಳಸಿದಲ್ಲಿ ಅಂಥ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ. ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ರೀತಿಯ ಭಯೋತ್ಪಾದನೆ ಮತ್ತು ಉಗ್ರವಾದವನ್ನು ಉತ್ತೇಜಿಸಿದರೆ ಅಂಥ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಯಾವುದೇ ವಿಷಯವನ್ನು ಟ್ವಿಟರ್​​ನಲ್ಲಿ ಹಂಚಿಕೊಳ್ಳುವಂತಿಲ್ಲ.​ ಅಂಥ ವಿಷಯಗಳನ್ನು ಪೋಸ್ಟ್ ಮಾಡಿದರೆ ಅಥವಾ ಹಂಚಿಕೊಂಡರೆ ಅಂಥ ಖಾತೆಗಳನ್ನು ಅಮಾನತುಗೊಳಿಸಲಾಗುತ್ತದೆ. ಬಳಕೆದಾರರ ಚಟುವಟಿಕೆಯನ್ನು ನಿಯಮಿತವಾಗಿ ಗಮನಿಸುವ ಟ್ವಿಟರ್, ಕಂಪನಿಯ ನೀತಿ ನಿಯಮಾವಳಿ ಉಲ್ಲಂಘಿಸುವವರ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲದೆ, ಬಳಕೆದಾರರು ಅಂಥ ಖಾತೆಯನ್ನು ರಿಪೋರ್ಟ್ ಮಾಡಿದರೆ, ಅದನ್ನು ಪರಿಶೀಲಿಸುತ್ತದೆ ಮತ್ತು ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಟ್ವಿಟರ್ ಬಳಸುವಾಗ ಮೇಲಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: ಟ್ವಿಟರ್​ ಸರ್ಚ್​​​ ವ್ಯವಸ್ಥೆಯಲ್ಲಿ ಮತ್ತಷ್ಟಯ ಸುಧಾರಣೆ.. ಚಂದಾದಾರರಿಗೆ ಮೊದಲ ಆದ್ಯತೆ...!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.