ETV Bharat / science-and-technology

Twitter vs Threads: ಟ್ವಿಟರ್‌-ಥ್ರೆಡ್ಸ್‌ ಪೈಪೋಟಿ ಮಧ್ಯೆ ಮಾಜಿ ಸಿಇಒ ಅಗರವಾಲ್, ವಿಜಯಾ ಗದ್ದೆ ಎಲ್ಲಿ? - Twitter Threads rivalry

ಭಾರತೀಯ ಮೂಲದ ಮಾಜಿ ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಟ್ವಿಟರ್​ನ ಕಾನೂನು ವಿಭಾಗದ ಮಾಜಿ ಮುಖ್ಯಸ್ಥೆ ವಿಜಯಾ ಗದ್ದೆ ಹಲವಾರು ತಿಂಗಳುಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಅಚ್ಚರಿ ಮೂಡಿಸಿದೆ.

No trace of Parag Agrawal, Vijaya Gadde amid Twitter-Threads drama

author img

By

Published : Jul 9, 2023, 12:57 PM IST

Updated : Jul 9, 2023, 1:10 PM IST

ನವದೆಹಲಿ : ಮೆಟಾ ಒಡೆತನದ ಟ್ವಿಟರ್ ಮಾದರಿಯ ಆ್ಯಪ್ Threads ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕೊನೆಗೂ ಟ್ವಿಟರ್​ಗೆ ನಿಜವಾದ ಪೈಪೋಟಿ ನೀಡಬಲ್ಲ ಆ್ಯಪ್ ಬಂದಿದೆ ಎಂಬ ಚರ್ಚೆ ಇಂಟರ್​ನೆಟ್​ನಲ್ಲಿ ವ್ಯಾಪಕವಾಗಿದೆ. ಆದರೆ ಮಾಜಿ ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಅವರು ಮೆಟಾದ ಥ್ರೆಡ್ಸ್ ಆ್ಯಪ್​ ಅನ್ನು ತಮ್ಮ ಟ್ವಿಟರ್​ನ ನಕಲು (Twitter clone) ಎಂದು ಟೀಕಿಸಿದ್ದು, ತಾವು ಸ್ಥಾಪಿಸಿದ ಟ್ವಿಟರ್​ನ ಬೆಂಬಲಕ್ಕೆ ನಿಂತಿದ್ದಾರೆ.

ಆದರೆ ಈ ಮಧ್ಯೆ ಭಾರತೀಯ ಮೂಲದ ಮಾಜಿ ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಟ್ವಿಟರ್​ನ ಕಾನೂನು ವಿಭಾಗದ ಮಾಜಿ ಮುಖ್ಯಸ್ಥೆ ವಿಜಯಾ ಗದ್ದೆ (ಇಬ್ಬರೂ ಡಾರ್ಸೆಯಿಂದ ನೇಮಕಗೊಂಡಿದ್ದರು) ಇಬ್ಬರೂ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಅಚ್ಚರಿ ಮೂಡಿಸಿದೆ.

ಕಳೆದ ವರ್ಷ ಟ್ವಿಟರ್ ತೊರೆದಾಗಿನಿಂದ ಇಬ್ಬರೂ ಎಲ್ಲಿಯೂ ಮಾತನಾಡಿಲ್ಲ ಅಥವಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಕ್ಟೋಬರ್‌ನಲ್ಲಿ ಎಲೋನ್ ಮಸ್ಕ್ ಟ್ವಿಟರ್​ ಅನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡ ನಂತರ, ಇಡೀ ಸಂಸ್ಥೆಯಲ್ಲಿ ಮೇಲಿನಿಂದ ಕೆಳಗಿನವರೆಗೆ ಹಲವಾರು ಉದ್ಯೋಗಿಗಳನ್ನು ವಜಾ ಮಾಡಿದ್ದು ಗಮನಾರ್ಹ.

ಅಗರವಾಲ್ ಕಳೆದ ವರ್ಷ ಅಕ್ಟೋಬರ್ 6 ರಂದು ಟ್ವಿಟರ್‌ನಲ್ಲಿ ಕೊನೆಯ ಬಾರಿಗೆ ಸಕ್ರಿಯರಾಗಿದ್ದರು. (ಇವರು 601.9K ಫಾಲೋವರ್ಸ್​ ಹೊಂದಿದ್ದಾರೆ). ಅದರ ನಂತರ ಇವರು ಯಾವುದೇ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ (ಮೆಟಾ ಥ್ರೆಡ್ಸ್​ ಸೇರಿದಂತೆ) ಸಕ್ರಿಯವಾಗಿರುವುದು ಕಂಡುಬಂದಿಲ್ಲ. ಹೀಗಾಗಿ ಇವರು ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಚರ್ಚೆ ಇಂಟರ್​ನೆಟ್​ನಲ್ಲಿ ಶುರುವಾಗಿದೆ.

ಇದೇ ವಿಚಾರ ಕುರಿತಾಗಿ ಶನಿವಾರ ಟ್ವೀಟ್ ಮಾಡಿರುವ ಏಂಜೆಲ್ ಹೂಡಿಕೆದಾರ ಅಲೆಕ್ಸ್ ಕೊಹೆನ್, ಪರಾಗ್ ಅಗರವಾಲ್ ಕೇವಲ 11 ತಿಂಗಳು ಟ್ವಿಟರ್‌ನ ಸಿಇಒ ಆಗಿದ್ದರು ಮತ್ತು ಅದಕ್ಕಾಗಿ 60 ಮಿಲಿಯನ್​ ಡಾಲರ್ ಪಡೆದುಕೊಂಡರು. ಅಷ್ಟೊಂದು ಹಣ ಪಡೆದ ನಂತರ ಈಗ ನಡೆಯುತ್ತಿರುವುದನ್ನು ಎಲ್ಲೋ ಕುಳಿತು ಮೌನವಾಗಿ ನೋಡುತ್ತಿದ್ದಾರೆ ಎಂಬುದನ್ನು ಈಗಲೂ ನಂಬಲಾಗುತ್ತಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ, ಹಸ್ಲ್ ಫಂಡ್‌ನಲ್ಲಿ ತನ್ನನ್ನು ತಾನು 'ಮಿನಿವ್ಯಾನ್ ಉತ್ಸಾಹಿ' ಎಂದು ಕರೆದುಕೊಳ್ಳುವ ಎರಿಕ್ ಬಾನ್- ಖಂಡಿತವಾಗಿಯೂ ಅವರಿಗೆ ಯಾವುದೇ ಹಣ ಪಾವತಿಯಾಗಿಲ್ಲ ಎಂದು ಹೇಳಿದ್ದಾರೆ.

ಅಗರವಾಲ್, ಗದ್ದೆ ಮತ್ತು ಮಾಜಿ ಟ್ವಿಟರ್ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಈ ವರ್ಷದ ಏಪ್ರಿಲ್‌ನಲ್ಲಿ ಕೊನೆಯದಾಗಿ ಸುದ್ದಿಯಲ್ಲಿದ್ದರು. ಎಲೋನ್ ಮಸ್ಕ್ ನಡೆಸುತ್ತಿರುವ ಟ್ವಿಟರ್‌ ತಮಗೆ ನೀಡಬೇಕಿರುವ 1 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದೆ ಎಂದು ಇವರು ಮೊಕದ್ದಮೆ ಹೂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಮಸ್ಕ್ ಟ್ವಿಟರ್​ನ ಒಡೆತನ ಪಡೆದ ಮೇಲೆ ಅಗರವಾಲ್, ಗದ್ದೆ ಮತ್ತು ಸೆಗಲ್ ಅವರನ್ನು ಕಂಪನಿಯಿಂದ ಹೊರ ಹಾಕಿದ್ದರು.

ಯುಎಸ್‌ನ ಡೆಲವೇರ್ ಚಾನ್ಸೆರಿ ನ್ಯಾಯಾಲಯದಲ್ಲಿ ದಾಖಲಾದ ಮೊಕದ್ದಮೆಯ ಪ್ರಕಾರ, ಕಂಪನಿಯಲ್ಲಿದ್ದಾಗ ತಾವು ಕಂಪನಿಗೆ ನೀಡಿದ ಕಾನೂನು ಸೇವೆಗಳ ಶುಲ್ಕವಾಗಿ ಟ್ವಿಟರ್ ತಮಗೆ 1 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಮೊತ್ತ ಪಾವತಿಸಬೇಕಿದೆ ಎಂದು ಹೇಳಿದ್ದಾರೆ. ಅಗರವಾಲ್ ಮತ್ತು ಸೆಗಲ್ ಅವರನ್ನು ಸೆಪ್ಟೆಂಬರ್‌ನಲ್ಲಿ ಸೆಕ್ಯುರಿಟೀಸ್ ಕ್ಲಾಸ್ ಆಕ್ಷನ್‌ನಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಆಗ ಇಬ್ಬರೂ ಇನ್ನೂ ಟ್ವಿಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಸೆಕ್ಯುರಿಟೀಸ್ ಕ್ಲಾಸ್ ಆಕ್ಷನ್‌ನಲ್ಲಿ ಗದ್ದೆ ಅವರನ್ನು ಪ್ರತಿವಾದಿಯನ್ನಾಗಿ ಹೆಸರಿಸಲಾಯಿತು. ಆ ಕ್ರಮದಲ್ಲಿ ಫಿರ್ಯಾದುದಾರರು ಮೊಕದ್ದಮೆಯ ಪ್ರಕಾರ ತಿದ್ದುಪಡಿ ಮಾಡಿದ ಕ್ಲಾಸ್ ಆಕ್ಷನ್ ದೂರನ್ನು ಸಲ್ಲಿಸಿದರು. ವರದಿಗಳ ಪ್ರಕಾರ, ಈ ಮೂವರು ಉನ್ನತ ಅಧಿಕಾರಿಗಳು ಟ್ವಿಟ್ಟರ್ ಅನ್ನು ತೊರೆದಾಗ ಸುಮಾರು 90 ರಿಂದ 100 ಮಿಲಿಯನ್ ಡಾಲರ್ ನಿರ್ಗಮನ ಪ್ಯಾಕೇಜ್ ಹೊಂದಿದ್ದರು.

ಇದನ್ನೂ ಓದಿ : Social Mediaದಲ್ಲಿ ಬೇಕಾಬಿಟ್ಟಿ ಸಲಹೆಗಳಿಗೆ ಕಡಿವಾಣ; ಇನ್​​ಫ್ಲುಯೆನ್ಸರ್​ಗಳಿಗೂ ಬರ್ತಿದೆ ಮಾರ್ಗಸೂಚಿ

Last Updated : Jul 9, 2023, 1:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.