ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಮೆಟಾ - ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಆಂಡ್ರೈಡ್ನಲ್ಲಿ ತನ್ನ ವ್ಯಾಪಾರ ಅಪ್ಲಿಕೇಶನ್‌ಗೆ ಗುಂಪುಗಳನ್ನು ರಚಿಸಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. Wabatinfo ವರದಿಯ ಪ್ರಕಾರ, ಕಳೆದ ವರ್ಷ ಪರಿಚಯಿಸಲಾದ ವ್ಯಾಪಾರಿ ಟ್ಯಾಬ್ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವ ಸಾಧ್ಯತೆಯಿಲ್ಲ. ಬದಲಾಗಿ, ಇದು ಅಪ್ಲಿಕೇಶನ್ ಮೆನುವಿನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರ್ಪಡೆ ಮಾಡಬಹುದು ಎಂದು ವರದಿಯಾಗಿದೆ.
ಮತ್ತಷ್ಟು ನವೀಕರಣಗಳ ಅಭಿವೃದ್ಧಿಯಲ್ಲಿ ಮೆಟಾ: ಬಳಕೆದಾರರು ಮೆನುವಿನಲ್ಲಿ 'ಕಮ್ಯೂನಿಟಿಸ್ಗಳನ್ನು' ತೆರೆದಾಗ, ಅದರ ಎಲ್ಲ ಉಪ ಗುಂಪುಗಳು ಮತ್ತು ಸಮುದಾಯ ಪ್ರಕಟಣೆ ಗುಂಪುಗಳನ್ನು ಒಳಗೊಂಡಂತೆ ಅವರು ಹಿಂದೆ ರಚಿಸಿದ ಮತ್ತು ಸೇರಿರುವ ಎಲ್ಲಾ ಗ್ರೂಪ್ಗಳ ಪಟ್ಟಿಯನ್ನು ಅಲ್ಲಿ ಕಾಣಬಹುದಾಗಿದೆ. ಹೆಚ್ಚುವರಿಯಾಗಿ, ವಾಟ್ಸ್ಆ್ಯಪ್ ಬಿಸಿನೆಸ್ ನಲ್ಲಿ ಹೊಸ ಗುಂಪನ್ನು ರಚಿಸಲು ಸಾಧ್ಯವಾಗಲಿದೆ. WhatsApp ಬ್ಯುಸಿನೆಸ್‌ನಲ್ಲಿ ಗ್ರೂಪ್ಗಳನ್ನು ರಚಿಸುವ, ನಿರ್ವಹಿಸುವ ಮತ್ತು ಬಳಸುವ ಸಾಮರ್ಥ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮೆಟಾ ನಿರ್ಧರಿಸಿದೆ. ಮತ್ತು ಅದಿನ್ನು ಅಭಿವೃದ್ಧಿ ಹಂತದಲ್ಲಿದೆ. ಆದ್ದರಿಂದ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲು ಇನ್ನೂ ಸಿದ್ಧವಾಗಿಲ್ಲ ಎಂದು ವರದಿ ಹೇಳಲಾಗುತ್ತಿದೆ.
ಇದನ್ನು ಓದಿ: ರಸಗೊಬ್ಬರ ಇಂಗಾಲದ ಹೊರಸೂಸುವಿಕೆಯನ್ನು ಶೇ 80 ರಷ್ಟು ಕಡಿಮೆ ಮಾಡಬಹುದು:ಹೊಸ ಅಧ್ಯಯನ
ಹೊಸ ನವೀಕರಣಗಳಲ್ಲಿ ಏನೇನಿವೆ?: ಕಳೆದ ವರ್ಷ ನವೆಂಬರ್‌ನಲ್ಲಿ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಉತ್ತಮ ವಾಣಿಜ್ಯ ಅನುಭವಕ್ಕಾಗಿ ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಲಾಗಿತ್ತು. ಮತ್ತು ಅವರ ನೆಚ್ಚಿನ ಬ್ರ್ಯಾಂಡ್‌ಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಹೊಸದನ್ನು ಅನ್ವೇಷಿಸಲು ಸಹಾಯ ಮಾಡಿದೆ ಎಂದು ಭಾವಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಶೀಘ್ರದಲ್ಲೇ ಗ್ರೂಪ್ ಚಾಟ್‌ನಲ್ಲಿ ಕರೆಗಳನ್ನು ನಿಗದಿಪಡಿಸುವ ಸೌಲಭ್ಯವೂ ಲಭ್ಯವಾಗಲಿದೆ ಎಂದು ಮೆಟಾ ಹೇಳಿಕೊಂಡಿದೆ. ಹೊಸ ವೈಶಿಷ್ಟ್ಯದೊಂದಿಗೆ, ಸಂಪರ್ಕಗಳ ಪಟ್ಟಿಯೊಳಗೆ ಸಂಪರ್ಕದ ಸೆಲ್ ಅನ್ನು ಟ್ಯಾಪ್ ಮಾಡುವ ಮೂಲಕ ಕರೆ ಮಾಡುವ ಶಾರ್ಟ್‌ಕಟ್‌ಗಳನ್ನು ರಚಿಸಲು ಸಾಧ್ಯವಾಗುವಂತೆ ಹೊಸ ವೈಶಿಷ್ಠ್ಯದಲ್ಲಿ ವಿನ್ಯಾಸಗೊಳಿಸಲಾಗಿದೆ.
ಒಂದೇ ವ್ಯಕ್ತಿಗೆ ಪುನರಾವರ್ತಿತ ಕರೆಗಳನ್ನು ಮಾಡುವ ಬಳಕೆದಾರರಿಗೆ ಈ ವೈಶಿಷ್ಟ್ಯವು ಸಹಾಯಕವಾಗಿರುತ್ತದೆ ಮತ್ತು ಅದೇ ಪ್ರಕ್ರಿಯೆಯ ಮೂಲಕ ಮತ್ತೆ ಮತ್ತೆ ಹೋಗಲು ಬಯಸುವುದಿಲ್ಲ ಅಂದರೆ ಅಪ್ಲಿಕೇಶನ್ ಅನ್ನು ತೆರೆಯುವುದು ಮತ್ತು ಪ್ರತಿ ಬಾರಿ ಸಂಪರ್ಕವನ್ನು ಹುಡುಕುವುದು ಇತ್ಯಾದಿ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. WhatsApp ಒಳಗಿನ ಅಪ್ಲಿಕೇಶನ್ ಬ್ಯಾನರ್ ವೈಶಿಷ್ಟ್ಯದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.
ಮತ್ತು ಈ ವೈಶಿಷ್ಠ್ಯ ಬಳಕೆದಾರರು ತಮ್ಮ ಡಾಕ್ಯುಮೆಂಟ್‌ಗಳ ಮೂಲಕ ಬ್ರೌಸ್ ಮಾಡಲು ಸಹ ಅನುಮತಿಸುತ್ತದೆ. ಅಪ್ಲಿಕೇಶನ್‌ನ ಮುಂಬರುವ ನವೀಕರಣಗಳಲ್ಲಿ ಬಳಸಲು ಹೊಸ ಬ್ಯಾನರ್ ವೈಶಿಷ್ಟ್ಯವು ಲಭ್ಯವಿರುತ್ತದೆ. WhatsApp ಬಳಕೆದಾರರು 2 GB ವರೆಗಿನ ಡಾಕ್ಯುಮೆಂಟ್‌ಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಲು ಇನ್ಮುಂದೆ ಸಾಧ್ಯವಾಗಲಿದೆ.
ಇದನ್ನು ಓದಿ: ಸ್ತನ್ಯಪಾನ ದುರ್ಬಲಗೊಳಿಸಲು ಹಾಲಿನ ಕಂಪನಿಗಳು ಈ ನೀತಿ ಅನುಸರಿಸುತ್ತಿವೆ - ಲ್ಯಾನ್ಸೆಟ್ ವರದಿ!