ETV Bharat / science-and-technology

32 ಜನರೊಂದಿಗೆ ವಿಡಿಯೋ ಕಾಲಿಂಗ್; WhatsApp ಹೊಸ ಫೀಚರ್

ವಾಟ್ಸ್​ ಆ್ಯಪ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿದೆ. ಈಗ 32 ಜನರೊಂದಿಗೆ ಏಕಕಾಲಕ್ಕೆ ವಿಡಿಯೋ ಕಾಲ್ ಮಾಡುವ ಸೌಲಭ್ಯವನ್ನು ವಾಟ್ಸ್​ ಆ್ಯಪ್ ನೀಡಲಿದೆ.

WhatsApp rolling out 32-person video calling feature on Windows beta

author img

By

Published : Jun 29, 2023, 12:26 PM IST

ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ) : 32 ಜನರೊಂದಿಗೆ ವಿಡಿಯೋ ಕಾಲಿಂಗ್ ಮಾಡಬಹುದಾದ ವೈಶಿಷ್ಟ್ಯವನ್ನು ವಾಟ್ಸ್​ಆ್ಯಪ್ ಪರಿಚಯಿಸುತ್ತಿದೆ. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ವಿಂಡೋಸ್ ಬೀಟಾ ಬಳಕೆದಾರರಿಗೆ ವಾಟ್ಸ್​ ಆ್ಯಪ್ ಬಿಡುಗಡೆ ಮಾಡಲಾರಂಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ತಮ್ಮ ಗ್ರೂಪ್​ಗಳಿಗೆ ಕಾಲ್ ಮಾಡುವಂತೆ ಕೇಳಿ ಬೀಟಾ ಯೂಸರ್​ಗಳಿಗೆ ವಾಟ್ಸ್​ ಆ್ಯಪ್ ಮೆಸೇಜ್ ಕಳುಹಿಸುತ್ತಿದೆ.

ಈ ಹಿಂದೆ ವಿಂಡೋಸ್​ ಪ್ಲಾಟ್​ಫಾರ್ಮ್​ನ ವಾಟ್ಸ್​ ಆ್ಯಪ್​​ನಲ್ಲಿ 32 ಜನರೊಂದಿಗೆ ಆಡಿಯೋ ಕಾಲಿಂಗ್ ಮಾಡುವ ವೈಶಿಷ್ಟ್ಯ ಮಾತ್ರ ಇತ್ತು. ಆದರೆ, ಈಗ ಹೊಸ ಅಪ್ಡೇಟ್​ನೊಂದಿಗೆ ಬೀಟಾ ಯೂಸರ್​ಗಳು 32 ಜನರೊಂದಿಗೆ ಏಕಕಾಲಕ್ಕೆ ವಿಡಿಯೋ ಕಾಲ್ ಮಾಡಬಹುದು. ವಿಂಡೋಸ್ ಅಪ್‌ಡೇಟ್‌ಗಾಗಿ ಇತ್ತೀಚಿನ ವಾಟ್ಸ್​ಆ್ಯಪ್​ ಬೀಟಾವನ್ನು ಹೊಂದಿರುವ ಕೆಲ ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವು ಪ್ರಸ್ತುತ ಲಭ್ಯವಿದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ಘೋಷಿಸಿದ್ದರು. ಈ ತಿಂಗಳ ಆರಂಭದಲ್ಲಿ, ವಿಂಡೋಸ್‌ನಲ್ಲಿ ಕೆಲವು ಬೀಟಾ ಪರೀಕ್ಷಕರಿಗೆ ವಿಡಿಯೋ ಕರೆಗಳಿಗಾಗಿ ಸ್ಕ್ರೀನ್- ಶೇರಿಂಗ್ ವೈಶಿಷ್ಟ್ಯವನ್ನು ವಾಟ್ಸ್​ ಆ್ಯಪ್ ಹೊರತರುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ವಿಡಿಯೋ ಕರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೊಂದಿಗೆ ನಿರ್ದಿಷ್ಟ ವಿಂಡೋ ಅಥವಾ ಸಂಪೂರ್ಣ ಸ್ಕ್ರೀನ್ ಹಂಚಿಕೊಳ್ಳುವ ಆಯ್ಕೆಯನ್ನು ಪಡೆಯುತ್ತಾರೆ.

ಪಿನ್​ ಮೆಸೇಜ್​ಗಳಿಗೆ ಟೈಮರ್ ಸೆಟಿಂಗ್: ವಾಟ್ಸ್​ ಆ್ಯಪ್ ಮತ್ತೊಂದು ವೈಶಿಷ್ಟ್ಯವನ್ನು ಬಳಕೆದಾರರಿಗಾಗಿ ಹೊರತಂದಿದೆ. ಸಂಭಾಷಣೆಗಳಲ್ಲಿನ ಪಿನ್ಡ್​ ಮೆಸೇಜುಗಳಿಗೆ ಟೈಮರ್ ಸೆಟ್ ಮಾಡಬಹುದಾದ ವೈಶಿಷ್ಟ್ಯ ಇದಾಗಿದೆ. ಚಾಟ್​ ಒಂದರಲ್ಲಿ ಪಿನ್ ಆಗಿರುವ ಮೆಸೇಜು ಹಾಗೆ ಎಷ್ಟು ಅವಧಿಯವರೆಗೆ ಇರಬೇಕು ಎಂಬುದನ್ನು ನೀವು ಈಗ ಸೆಟ್ ಮಾಡಬಹುದು. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ಆ್ಯಂಡ್ರಾಯ್ಡ್​ ವಾಟ್ಸ್​ ಆ್ಯಪ್ ಬೀಟಾ ಟೆಸ್ಟರ್​ಗಳಿಗೆ ನೀಡಲಾಗುತ್ತಿದೆ.

ಮೆಸೇಜ್ ಪಿನ್ ಅವಧಿ ವೈಶಿಷ್ಟ್ಯವು ಸಮಯ ಮುಗಿದ ನಂತರ ಪಿನ್ ಆಗಿರುವ ಮೆಸೇಜನ್ನು ತಾನಾಗಿಯೇ ಅನ್​ಪಿನ್ ಮಾಡಲಿದೆ. ಸದ್ಯಕ್ಕೆ ಬಳಕೆದಾರರು 24 ಗಂಟೆ, 7 ದಿನ ಮತ್ತು 30 ದಿನ ಹೀಗೆ ಮೂರು ಅವಧಿಗಾಗಿ ಅನ್ ಪಿನ್ ಸಮಯ ಸೆಟ್ ಮಾಡಬಹುದು. ಬರುವ ದಿನಗಳಲ್ಲಿ ಇದಕ್ಕೆ ಮತ್ತಷ್ಟು ಆಯ್ಕೆಗಳನ್ನು ವಾಟ್ಸ್​ ಆ್ಯಪ್ ಸೇರಿಸಲಿದೆ ಎಂದು ವರದಿಯಾಗಿದೆ.

ಪಿಂಕ್ ವಾಟ್ಸ್​ ಆ್ಯಪ್ ವಂಚನೆ: 'ವಾಟ್ಸ್​ ಆ್ಯಪ್ ಪಿಂಕ್' ಎಂಬ ಅಪ್‌ಡೇಟ್‌ ಬಂದಿದೆ ಎಂಬ ಸಂದೇಶಗಳು ಹಲವಾರು ಬಳಕೆದಾರರಿಗೆ ಬರುತ್ತಿವೆ. ಆದರೆ ವಾಸ್ತವದಲ್ಲಿ ಇದು ವಾಟ್ಸ್​ ಆ್ಯಪ್ ಅಲ್ಲವೇ ಅಲ್ಲ.. ವಾಟ್ಸ್​ ಆ್ಯಪ್ ಅನ್ನೇ ಹೋಲುವ ನಕಲಿ ಆ್ಯಪ್ ಇದಾಗಿದೆ. ವಾಟ್ಸ್​ ಪಿಂಕ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡುವಂತೆ ಮತ್ತು ಡೌನ್ಲೋಡ್ ಮಾಡುವಂತೆ ಬಳಕೆದಾರರಿಗೆ ಆಮಿಷ ಒಡ್ಡಲಾಗುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಂಡರೆ ಅದರ ಮೂಲಕ ಹ್ಯಾಕರ್​ಗಳು ಬಳಕೆದಾರರ ಪೋನ್​ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ. ಹೀಗಾಗಿ ಪಿಂಕ್ ವಾಟ್ಸ್​ ಆ್ಯಪ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಮುಂಬೈ ಪೊಲೀಸರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : AIನಿಂದ ಉದ್ಯೋಗ ನಷ್ಟ ತಾತ್ಕಾಲಿಕ, ಹೊಸ ಉದ್ಯೋಗ ಸೃಷ್ಟಿ ಖಚಿತ: ಮಾಜಿ ಎಸ್​ಬಿಐ ಅಧ್ಯಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.