ಸ್ಯಾನ್ ಫ್ರಾನ್ಸಿಸ್ಕೋ: ಮೆಟಾ ಒಡೆತನದ ವಾಟ್ಸಾಪ್ ಹೊಸ ಹೊಸ ಅಪ್ಡೇಟ್ಗಳ ಮೂಲಕ ಬಳಕೆದಾರರ ಗಮನ ಸೆಳೆಯುತ್ತಿದೆ. ಇದೀಗ WhatsApp statusನಲ್ಲಿ ಎಮೋಜಿಗಳ ಮೂಲಕ ಇನ್‌ಸ್ಟಂಟ್ ಆಗಿ ಪ್ರತಿಕ್ರಿಯಿಸುವ ಆಯ್ಕೆಯನ್ನು ತರಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ಮುಂದೆ ವಾಟ್ಸಾಪ್ನಲ್ಲಿ ಸ್ಟೇಟಸ್ ಅಪ್‌ಡೇಟ್ ವೀಕ್ಷಿಸುವಾಗ ಎಮೋಜಿ ಮೂಲಕವೇ ನಾವು ಪ್ರತಿಕ್ರಿಯಿಸಬಹುದು. ಪ್ರಸ್ತುತ ಆವೃತ್ತಿಯಲ್ಲಿ ಇಷ್ಟ, ಪ್ರೀತಿ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸುವ ಆರು ಎಮೋಜಿಗಳನ್ನು ತರಲಾಗುತ್ತಿದೆ. ಇನ್ಸ್ಸ್ಟಾಗ್ರಾಮ್ ಸ್ಟೋರಿಗಳಿಗೆ ಎಮೋಜಿಗಳ ಮೂಲಕ ರಿಪ್ಲೈ ಮಾಡಬಹುದಾದ ಆಯ್ಕೆಯ ರೀತಿಯಲ್ಲೇ ಇದೂ ಕೂಡ ಇರಲಿದೆ ಎನ್ನಲಾಗಿದೆ.
ಹೊಸ ಅವೃತ್ತಿಯಲ್ಲಿ ನಿಮ್ಮ ಸ್ಟೇಟಸ್ಗೆ ಯಾರು ಯಾವ ಎಮೋಜಿಯನ್ನು ನೀಡಿದ್ದಾರೆ ಎಂದು ನೋಡಬಹುದು. ಈ ಆಯ್ಕೆಯು ಸದ್ಯ ಅಭಿವೃದ್ಧಿ ಹಂತದಲ್ಲಿದೆ. ಆದ್ದರಿಂದ ಇದನ್ನು ಇನ್ನೂ ಹೊರತಂದಿಲ್ಲ. ಪ್ರತಿಯೊಬ್ಬರನ್ನು ತಲುಪಲು ಇನ್ನೂ ಏಳು ದಿನಗಳು ಬೇಕಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: 850 ಪಾಯಿಂಟ್ ಕುಸಿದ ಮುಂಬೈ ಷೇರು ಸೂಚ್ಯಂಕ; ದೈತ್ಯ ಕಂಪನಿಗಳಿಗೆ ನಷ್ಟ