ನವದೆಹಲಿ: ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಬಳಕೆದಾರರ ಸ್ನೇಹಿಯಾಗಿ ಮತ್ತಷ್ಟು ಹತ್ತಿರವಾಗುವ ಪ್ರಯತ್ನದಲ್ಲಿ ವಾಟ್ಸ್ಆ್ಯಪ್ ಸದಾ ಮುಂಚೂಣಿ. ಆಗಿಂದಾಗ್ಗೆ ಹೊಸ ಹೊಸ ವೈಶಿಷ್ಟ್ಯ ಪರಿಚಯಿಸುವ ವಾಟ್ಸ್ಆ್ಯಪ್ ಇದೀಗ ಮತ್ತೊಂದು ಹೊಸತನ ಪರಿಚಯಿಸಲು ಮುಂದಾಗಿದೆ. ಆ್ಯಂಡ್ರಾಯ್ಡ್ ಅಪ್ಲಿಕೇಷನ್ಗಾಗಿ ಹೊಸ ಪರಿಷ್ಕೃತ ಇಂಟರ್ಫೆಸ್ ಅನ್ನು ಪರಿಚಯಿಸಲು ಮುಂದಾಗಿದೆ. ಸದ್ಯ ಇದನ್ನು ಸೀಮಿತ ಸಂಖ್ಯೆಯ ಬೆಟಾ ಟೆಸ್ಟರ್ಗೆ ಒಳಪಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದು ಎಲ್ಲರಿಗೆ ಲಭ್ಯವಾಗಲಿದೆ.
ಹೊಸ ಅನುಭವದ ಪರಿಚಯ: ಈ ಕುರಿತು ತಿಳಿಸಿರುವ ವಾಬೆಟಾಇನ್ಫೋ, ಅಪ್ಡೇಟೆಡ್ ಇಂಟರ್ಫೇಸ್ ಫೀಚರ್ನ ಹೊಸ ಐಕಾನ್ನಿಂದ ಬಳಕೆದಾರರು ದೃಶ್ಯ ಆಕರ್ಷಣೆ ಸುಧಾರಿಸುವ ಆಧುನಿಕ ಅನುಭವ ಪಡೆಯಬಹುದಾಗಿದೆ. ಕಂಪನಿ ಇದಕ್ಕಾಗಿ ಹೊಸ ಥೀಮ್ ಬಣ್ಣವನ್ನು ಹೊಸ ಹಸಿರು ಬಣ್ಣದಲ್ಲಿ ಲೈಟ್ ಮತ್ತು ಡಾರ್ಕ್ ಮೋಡ್ನಲ್ಲಿ ಬಳಕೆ ಮಾಡುತ್ತಿದೆ. ಇದರ ಜೊತೆಗೆ ಹೊಸ ತಾಜಾ ಬಣ್ಣಗಳು ಚಾಟ್ ಬಬಲ್ಸ್ ಮತ್ತು ಫ್ಲೋಟಿಂಗ್ ಆ್ಯಕ್ಷನ್ ಬಟನ್ನಲ್ಲಿ ಪರಿಚಯಿಸಲಿದೆ.
ಹೊಸದಾಗಿ ಮರು ವಿನ್ಯಾಸ ಮಾಡಿದ ಇಂಟರ್ಫೇಸ್ ಮೂಲಕ ವಾಟ್ಸ್ಆ್ಯಪ್ ಬಳಕೆದಾರರಿಗೆ ಆಧುನಿಕ ಮತ್ತು ಕಲಾತ್ಮಕ ಅನುಭವ ನೀಡಲಿದೆ ಎಂದು ವರದಿ ತಿಳಿಸಿದೆ. ವಾಟ್ಸ್ಆ್ಯಪ್ ನಿಧಾನವಾಗಿ ಇಂಟರ್ಫೇಸ್ನಲ್ಲಿ ಈ ಸಣ್ಣ ಬದಲಾವಣೆ ತರಲಿದೆ. ಹೊಸ ಐಕಾನ್ ಅನ್ನು ಹೊಸ ಬಣ್ಣದ ಯೋಜನೆಯಲ್ಲಿ ಅಳವಡಿಕೆ ಮಾಡದೇ ಇದನ್ನು ಬಿಡುಗಡೆ ಮಾಡುವುದಿಲ್ಲ.
ವಾಟ್ಸ್ಆ್ಯಪ್ ಚಾನೆಲ್ನಲ್ಲೂ ಹೊಸ ಅಪ್ಡೇಟ್ : ಸದ್ಯ ಲಭ್ಯವಿರುವ ಸಿಮೀತ ಸಂಖ್ಯೆ ಬೆಟಾ ಟೆಸ್ಟರ್ ಈ ಹೊಸ ಇಂಟರ್ ಫೇಸ್ ಅನ್ನು ಹೊಂದಿದ್ದಾರೆ. ಮುಂದಿನ ಒಂದು ವಾರದಲ್ಲಿ ಇದು ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.
ಈ ಮಧ್ಯೆ, ವಾಟ್ಸ್ಆ್ಯಪ್ ಚಾನೆಲ್ ರಚನೆಕಾರರಿಗೆ ತಿಳಿಸಲು ಫೀಚರ್ ವಿನ್ಯಾಸವನ್ನು ಮುಂದುವರೆಸಿದೆ. ಆ್ಯಂಡ್ರಾಯ್ಸ್ನಲ್ಲಿನ ಚಾನೆಲ್ಸ್ಗಳ ಸ್ಟೇಟಸ್ನಲ್ಲಿ ಮಾಹಿತಿ ನೀಡಲಿದೆ. ಅದರಲ್ಲೂ ವಿಶೇಷ ಮುಚ್ಚಿನ ನಿರ್ಧಿಷ್ಟ ದೇಶದಲ್ಲಿ ಇದು ಬರಲಿದೆ. ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಪ್ರವೇಶ ನಿರ್ಬಂಧಿಸಲು ವೇದಿಕೆಯ ಅಗತ್ಯವಿರುವ ಸ್ಥಳೀಯ ಕಾನೂನುಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮವು ಬರುತ್ತದೆ. ಒಂದು ವೇಳೆ, ಚಾನಲ್ ಲಭ್ಯತೆ ನಿರ್ಬಂಧಕ್ಕೆ ಒಳಗಾದರೆ ಈ ಫೀಚರ್ ವಾಟ್ಸ್ಆ್ಯಪ್ ಅನ್ನು ಚಾನೆಲ್ ಕ್ರಿಯೇಟರ್ ಮೂಲಕ ಅನುಮತಿಸುತ್ತದೆ. ಸದ್ಯ ಇದು ಭಾರತ ಸೇರಿದಂತೆ 150ಕ್ಕೂ ಹೆಚ್ಚು ದೇಶದಲ್ಲಿ ವಾಟ್ಸ್ಆ್ಯಪ್ ಚಾನೆಲ್ ಲಭ್ಯವಿದೆ. (ಐಎಎನ್ಎಸ್)
ಇದನ್ನೂ ಓದಿ: Google New Feature: ಮೀಟ್ ಅಪ್ಲಿಕೇಶನ್ನಲ್ಲಿ ಗ್ರೂಪ್ ಕರೆಗಳಿಗೆ 1080 ಪಿಕ್ಸೆಲ್ಸ್ ಸ್ಟ್ರೀಮಿಂಗ್ ವಿಸ್ತರಣೆ...