ETV Bharat / science-and-technology

ಜುಲೈನಲ್ಲಿ 72 ಲಕ್ಷ ಖಾತೆಗಳನ್ನು ನಿರ್ಬಂಧಿಸಿದ ವಾಟ್ಸ್​ಆ್ಯಪ್

ವಾಟ್ಸ್​ಆ್ಯಪ್ ಜುಲೈ ತಿಂಗಳಲ್ಲಿ 72 ಲಕ್ಷ ಅಕೌಂಟ್​​ಗಳನ್ನು ಬ್ಯಾನ್ ಮಾಡಿದೆ.

WhatsApp bans over 72L bad accounts in India in July

author img

By ETV Bharat Karnataka Team

Published : Sep 4, 2023, 7:04 PM IST

ನವದೆಹಲಿ: ಹೊಸ ಐಟಿ ನಿಯಮಗಳು 2021 ಕ್ಕೆ ಅನುಗುಣವಾಗಿ ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್ ಜುಲೈ ತಿಂಗಳಲ್ಲಿ ಭಾರತದಲ್ಲಿ 72 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ಖಾತೆಗಳನ್ನು ನಿಷೇಧಿಸಿದೆ. "ಜುಲೈ 1 ರಿಂದ 31ರ ನಡುವೆ 72,28,000 ವಾಟ್ಸ್​ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಇವುಗಳ ಪೈಕಿ 31,08,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ" ಎಂದು ವಾಟ್ಸ್​ಆ್ಯಪ್ ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ತಿಳಿಸಿದೆ.

ದೇಶದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಆಗಿರುವ ವಾಟ್ಸ್​ಆ್ಯಪ್ ಜುಲೈನಲ್ಲಿ ಮತ್ತೊಂದು ದಾಖಲೆಯ 11,067 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು ಇವುಗಳ ಪೈಕಿ 72ರಲ್ಲಿ ಕ್ರಮ ಕೈಗೊಳ್ಳಲಾಗಿದೆ. "ಅಕೌಂಟ್ಸ್ ಆಕ್ಷನ್ಡ್" ಎಂಬುದು ವರದಿಯ ಆಧಾರದ ಮೇಲೆ ವಾಟ್ಸ್​ಆ್ಯಪ್ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು ಸೂಚಿಸುತ್ತದೆ ಮತ್ತು ಕ್ರಮ ತೆಗೆದುಕೊಳ್ಳುವುದು ಖಾತೆಯನ್ನು ನಿಷೇಧಿಸುವುದನ್ನು ಅಥವಾ ಈ ಹಿಂದೆ ನಿಷೇಧಿಸಲಾದ ಖಾತೆಯನ್ನು ಪುನಃಸ್ಥಾಪಿಸುವುದನ್ನು ಸೂಚಿಸುತ್ತದೆ.

"ಈ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಬಂದ ದೂರುಗಳು ಮತ್ತು ಅದರ ಮೇಲೆ ವಾಟ್ಸ್​ಆ್ಯಪ್ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒಳಗೊಂಡಿದೆ, ಜೊತೆಗೆ ನಮ್ಮ ಪ್ಲಾಟ್​ಫಾರ್ಮ್​ನ ದುರುಪಯೋಗವನ್ನು ತಡೆಗಟ್ಟಲು ಆಂತರಿಕ ನಿರ್ಬಂಧ ಕ್ರಮಗಳನ್ನು ಒಳಗೊಂಡಿದೆ" ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಜುಲೈ 1 ಮತ್ತು ಜುಲೈ 31 ರ ನಡುವೆ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ 5 ಆದೇಶಗಳು ಬಂದಿದ್ದು, ಈ ಎಲ್ಲ ಆದೇಶಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಉಲ್ಲೇಖಿಸಿದೆ.

ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು (ಜಿಎಸಿ) ಪ್ರಾರಂಭಿಸಿದೆ. ಇದು ಕಂಟೆಂಟ್​ ಮತ್ತು ಇತರ ವಿಷಯಗಳ ಬಗ್ಗೆ ಬಳಕೆದಾರರ ದೂರುಗಳನ್ನು ಪರಿಶೀಲಿಸುತ್ತದೆ.

ಒಂದು ಸಾಧನದಲ್ಲಿ ಒಂದಕ್ಕಿಂತ ಹೆಚ್ಚು ಅಕೌಂಟ್​ ಲಾಗಿನ್​: ಒಂದೇ ಮೊಬೈಲ್​ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಲಾಗಿನ್ ಮಾಡುವ ವೈಶಿಷ್ಟ್ಯವನ್ನು ವಾಟ್ಸ್​ಆ್ಯಪ್ ಪರಿಶೀಲಿಸುತ್ತಿದೆ. ಇದು ಬಳಕೆದಾರರಿಗೆ ಒಂದೇ ಸಾಧನದಲ್ಲಿ ಅನೇಕ ವಾಟ್ಸ್​ಆ್ಯಪ್ ಖಾತೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಬಳಕೆದಾರರು ವಾಟ್ಸ್​ಆ್ಯಪ್ ಅಪ್ಲಿಕೇಶನ್​ನಲ್ಲಿ ಕೇವಲ ಒಂದು ಖಾತೆಗೆ ಮಾತ್ರ ಲಾಗಿನ್ ಮಾಡಬಹುದಾಗಿದೆ.

ಪ್ರಸ್ತುತ ಒಂದೇ ಸಾಧನದಲ್ಲಿ ಒಂದಕ್ಕಿಂತ ಹೆಚ್ಚು ವಾಟ್ಸ್​ಆ್ಯಪ್ ಖಾತೆಗಳನ್ನು ಬಳಸಲು ಬಯಸಿದರೆ ಕ್ಲೋನ್ ವಾಟ್ಸ್​ಆ್ಯಪ್ ಅಪ್ಲಿಕೇಶನ್​ಗಳನ್ನು ಅವಲಂಬಿಸಬೇಕಿದೆ. ಆದರೆ ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಲಾಗಿನ್ ಮಾಡುವ ಸೌಲಭ್ಯವನ್ನು ವಾಟ್ಸ್​ಆ್ಯಪ್ ತಾನೇ ಪರಿಚಯಿಸಲಿದೆ. ಆರಂಭದಲ್ಲಿ ವಾಟ್ಸ್​ಆ್ಯಪ್ ಮಲ್ಟಿ-ಅಕೌಂಟ್ ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರಿಗಾಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ವಾಟ್ಸ್​ಆ್ಯಪ್ ಪ್ರಸ್ತುತ ಆಂಡ್ರಾಯ್ಡ್ ಬೀಟಾ 2.23.18.21 ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಮತ್ತು ಇದು ಇತ್ತೀಚಿನ ಅಪ್ಡೇಟ್​ ಆಗಿದೆ. ಬಹು-ಖಾತೆ ವೈಶಿಷ್ಟ್ಯವು ಒಂದೇ ಸಾಧನದಲ್ಲಿ ಅನೇಕ ಖಾತೆಗಳನ್ನು ಬಳಸುವ ಪ್ರಕ್ರಿಯೆಯನ್ನು ಸರಳವಾಗಿಸಲಿದೆ.

ಇದನ್ನೂ ಓದಿ : ವಿಂಡೋಸ್​ನಿಂದ 'ವರ್ಡ್​ಪ್ಯಾಡ್​' ತೆಗೆದು ಹಾಕಲಿದೆ ಮೈಕ್ರೊಸಾಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.