ETV Bharat / science-and-technology

​WhatsApp ಅಪ್‌ಡೇಟ್ ಗೊತ್ತೇ?: ಇನ್ಮುಂದೆ ಚಾಟ್​ಗಳಲ್ಲೇ ತ್ವರಿತ ವಿಡಿಯೋ ಸಂದೇಶ ರವಾನೆ

WhatsApp update: ಮೆಟಾ ಕಂಪನಿ ವಾಟ್ಸ್‌ಆ್ಯಪ್‌​ ಚಾಟ್​ನಲ್ಲಿ ತ್ವರಿತವಾಗಿ ವಿಡಿಯೋ ಸಂದೇಶ ಕಳುಹಿಸುವ ವೈಶಿಷ್ಟ್ಯ ತಂದಿದೆ.

ವಾಟ್ಸಾಪ್​ ಅಪಡೇಟ್​ಗಳು
ವಾಟ್ಸಾಪ್​ ಅಪಡೇಟ್​ಗಳು
author img

By

Published : Jul 28, 2023, 2:17 PM IST

ನವದೆಹಲಿ: ಜನರ ದಿನಚರಿ ಪ್ರಾರಂಭವಾಗುವುದೇ ವಾಟ್ಸ್‌ಆ್ಯಪ್‌​ ಮೂಲಕ ಅನ್ನುವಷ್ಟರ ಮಟ್ಟಿಗೆ ಈ ಆ್ಯಪ್​ ಜನಜೀವನದ ಭಾಗವಾಗಿ ಬಿಟ್ಟಿದೆ. ಜನರ ಆತ್ಮೀಯ ಸ್ನೇಹಿಯಾಗಿರುವ ವಾಟ್ಸ್‌ಆ್ಯಪ್‌​ನಲ್ಲಿ ಮತ್ತೊಂದು ವೈಶಿಷ್ಟ್ಯವನ್ನು ಮೆಟಾ ಕಂಪನಿ ಅಭಿವೃದ್ಧಿಪಡಿಸಿದೆ. ಹೌದು, ಇನ್ನು ಮುಂದೆ ವಾಟ್ಸ್‌ಆ್ಯಪ್‌ ಚಾಟ್‌ಗಳಲ್ಲಿ ವಿಡಿಯೋ ಸಂದೇಶಗಳನ್ನು ತ್ವರಿತವಾಗಿ ರೆಕಾರ್ಡ್ ಮಾಡುವ ಮತ್ತು ಹಂಚಿಕೊಳ್ಳುವ ಸಾಮರ್ಥ್ಯವನ್ನು ಈ ಆ್ಯಪ್​ ಹೊಂದಲಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಗುರುವಾರ ತಿಳಿಸಿದ್ದಾರೆ.

ಮೆಟಾ ಸಂಸ್ಥಾಪಕ ಮತ್ತು CEO ಜುಕರ್‌ಬರ್ಗ್‌ ಮಾಹಿತಿ ನೀಡಿ, "ಇದು ತ್ವರಿತ ಧ್ವನಿ ಸಂದೇಶವನ್ನು ಕಳುಹಿಸುವಷ್ಟು ಸುಲಭವಾಗಿರಲಿದೆ. 60 ಸೆಕೆಂಡುಗಳಲ್ಲಿ ನೀವು ಹೇಳಲು ಮತ್ತು ತೋರಿಸಲು ಬಯಸುವ ಯಾವುದೇ ಚಾಟ್‌ಗಳಿಗೆ ವಿಡಿಯೋ ಸಂದೇಶಗಳನ್ನು ಕಳುಹಿಸಬಹುದು. ಹುಟ್ಟುಹಬ್ಬದ ಶುಭಾಶಯದಿಂದ ಹಿಡಿದು ಎಲ್ಲ ಸಿಹಿ ಸುದ್ದಿಯನ್ನೂ ವಿಡಿಯೋ ಮೂಲಕ ಹಂಚಿಕೊಳ್ಳುವ ಯೋಜನೆಯಾಗಿದೆ" ಎಂದು ತಿಳಿಸಿದ್ದಾರೆ.

  • sometimes you just have to see it to believe it 👀 now you can capture the moment right when it happens with a Video Message. pic.twitter.com/QiDTRhRRJ6

    — WhatsApp (@WhatsApp) July 27, 2023 " class="align-text-top noRightClick twitterSection" data=" ">

ಬಳಕೆ ಹೇಗೆ? ವಾಟ್ಸ್‌ಆ್ಯಪ್‌​ನಲ್ಲಿ ಚಾಟ್​ ಓಪನ್​ ಮಾಡಿ, ಅದರಲ್ಲಿ ವಿಡಿಯೋ ಮೋಡ್‌ಗೆ ಬದಲಾಯಿಸಲು ಟ್ಯಾಪ್ ಮಾಡಿ. ವಿಡಿಯೋವನ್ನು ರೆಕಾರ್ಡ್ ಮಾಡಲು ಹಿಡಿದುಕೊಳ್ಳಿ. ಹ್ಯಾಂಡ್ಸ್-ಫ್ರೀ ವಿಡಿಯೋವನ್ನು ಲಾಕ್ ಮಾಡಲು ಮತ್ತು ರೆಕಾರ್ಡ್ ಮಾಡಲು ನೀವು ಮೇಲಕ್ಕೆ ಸ್ವೈಪ್ ಮಾಡಬಹುದು. ಚಾಟ್‌ನಲ್ಲಿ ತೆರೆದಾಗ ವಿಡಿಯೋಗಳು ಮ್ಯೂಟ್‌ನಲ್ಲಿ ಸ್ವಯಂಚಾಲಿತವಾಗಿ ಪ್ಲೇ ಆಗುತ್ತವೆ. ಮತ್ತು ವಿಡಿಯೋವನ್ನು ಟ್ಯಾಪ್ ಮಾಡುವುದರಿಂದ ಧ್ವನಿ ಪ್ರಾರಂಭವಾಗುತ್ತದೆ.

ನಿಮ್ಮ ಸಂದೇಶಗಳನ್ನು ಸುರಕ್ಷಿತವಾಗಿರಿಸಲು ವಿಡಿಯೋ ಸಂದೇಶಗಳನ್ನು ಈ ಮೊದಲಿರುವ ಮೆಸೇಜ್​ನಂತೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಸೆಕ್ಯೂರ್​ ಮಾಡಲಾಗಿದೆ. ಈ ವೈಶಿಷ್ಟ್ಯ ಮುಂಬರುವ ವಾರಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ವಾಟ್ಸ್‌ಆ್ಯಪ್‌​ ಕಂಪನಿ ಹೇಳಿದೆ. ವಾಟ್ಸ್‌ಆ್ಯಪ್‌​ ವಿಡಿಯೋಗಳನ್ನು ಕಳುಹಿಸುವ ಆಯ್ಕೆಯನ್ನು ಬಹಳ ಹಿಂದೆಯೇ ನೀಡಿದೆ. ಆದರೆ ಹೊಸ ವಿಡಿಯೋ ಸಂದೇಶದ ವೈಶಿಷ್ಟ್ಯವು ಪ್ರಕ್ರಿಯೆಯಲ್ಲಿ ಒಂದೆರಡು ಹಂತಗಳನ್ನು ತೆಗೆದುಹಾಕಲಿದ್ದು, ಇದು ತ್ವರಿತವಾಗಿ ಕಾರ್ಯ ನಿರ್ವಹಿಸಲಿದೆ. ವಿಡಿಯೋ ಸಂದೇಶದ ವೈಶಿಷ್ಟ್ಯವು iOS ಮತ್ತು Android ಮೊಬೈಲ್​ಗಳಲ್ಲಿ ಬರಲಿದೆ.

ಮೆಸೇಜ್​ ಎಡಿಟ್​​ ಆಯ್ಕೆ: ಜೂನ್​ ತಿಂಗಳಲ್ಲಿ ಮೆಟಾ ಕಂಪನಿ ಸಂದೇಶ ಎಡಿಟ್‌ ಆಯ್ಕೆಯನ್ನು ಅಪ್ಲಿಕೇಶನ್ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಕೆಲವು ಬೀಟಾ ಪರೀಕ್ಷಕರಿಗೆ Message Editing Feature ಅನ್ನು ಪ್ರಸ್ತುತ ಪಡಿಸಿತ್ತು. ಇದರ ಸಹಾಯದಿಂದ ಬಳಕೆದಾರರು ಕಳುಹಿಸಿದ ಸಂದೇಶವನ್ನು ಎಡಿಟ್​ ಮಾಡಬಹುದಾಗಿದೆ. ಈ ವೈಶಿಷ್ಟ್ಯವನ್ನು ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ತರಲಾಗಿದೆ. ಮುಂಬರುವ ಅಪ್​ಡೇಟ್​ಗಳೊಂದಿಗೆ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ. ಇದರ ಉಪಯೋಗ, ಸಂದೇಶ ಮೆನುವಿನಲ್ಲಿ, ಜನರು ಈಗ ಪ್ರತ್ಯುತ್ತರ, ನಕಲು, ಫಾರ್ವರ್ಡ್, ಸ್ಟಾರ್, ಎಡಿಟ್, ಡಿಲಿಟ್​, ಆಯ್ಕೆ ಮತ್ತು ಮಾಹಿತಿಯ ಆಯ್ಕೆಗಳನ್ನು ಪಡೆಯುತ್ತಾರೆ.

ಎಡಿಟಿಂಗ್​ ಬಟನ್ ಕ್ಲಿಕ್ ಮಾಡುವ ಮೂಲಕ ಸಂದೇಶವನ್ನು ಎಡಿಟ್​ ಮಾಡಬಹುದು. ಎಮೋಜಿಗಳ ಲಿಸ್ಟ್​ ಸಹ ಈ ಆಯ್ಕೆಗಳ ಕೆಳಗೆ ಘೋಚರಿಸುತ್ತದೆ.ಆತುರದಲ್ಲಿ ತಪ್ಪು ಸಂದೇಶಗಳನ್ನು ಬರೆಯುವವರಿಗೆ WhatsApp ಸಂದೇಶ ಎಡಿಟ್ ವೈಶಿಷ್ಟ್ಯವು ತುಂಬಾ ಉಪಯುಕ್ತ ವೈಶಿಷ್ಟ್ಯವಾಗಿದೆ. ಈ ಎಡಿಟಿಂಗ್​ ಸಹಾಯದಿಂದ ನೀವು ಸಂದೇಶವನ್ನು ಅಳಿಸದೆಯೇ ಅವುಗಳನ್ನು ಸರಿಪಡಿಸಬಹುದು. ಆದ್ರೆ ಈ ಎಡಿಟ್​ ಮಾಡುವುದಕ್ಕೆ ಕೇವಲ 15 ನಿಮಿಷಗಳು ಮಾತ್ರ ಸಮಯ ಇರುತ್ತದೆ. ಅಂದರೆ ಜನರು ಸಂದೇಶವನ್ನು ಕಳುಹಿಸಿದ 15 ನಿಮಿಷಗಳಲ್ಲಿ ಆ ಸಂದೇಶವನ್ನು ಎಡಿಟ್​ ಮಾಡಬಹುದಾಗಿದೆ.

ಇದನ್ನೂ ಓದಿ: META ಆದಾಯ ಇಷ್ಟೊಂದಾ! Facebook ಬಳಕೆದಾರರ ಸಂಖ್ಯೆ ಶೇ 3ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.