ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಇದೀಗ ಗೂಗಲ್ ಮ್ಯಾಪ್ಸ್ ಟು ವೇರ್ ಒಎಸ್ ಸ್ಮಾರ್ಟ್ ವಾಚ್‌ನಲ್ಲಿ ಹೊಚ್ಚ ಹೊಸ ವೈಶಿಷ್ಟ್ಯ ಪರಿಚಯಿಸಿದ್ದು, ಇದರಲ್ಲಿ ಪೋನ್ಲೆಸ್ ನ್ಯಾವಿಗೇಷನ್ ಸಪೋರ್ಟ್ ಎಂಬ ಹೊಸ ಫೀಚರ್ ಅಳವಡಿಸಲಾಗಿದೆ. ಸ್ಯಾಮ್ ಮೊಬೈಲ್ ವರದಿಯ ಪ್ರಕಾರ ಮೊದಲೆಲ್ಲಾ ಸ್ಮಾರ್ಟ್‌ವಾಚ್ ಧರಿಸಿಕೊಂಡು ಗೂಗಲ್ ನಕ್ಷೆಯನ್ನು ಬಳಸುವವರು ಮೊಬೈಲ್ ಮತ್ತು ವಾಚ್ ಅನ್ನು ಎರಡನ್ನು ಸಂಪರ್ಕಿಸಬೇಕಾಗಿತ್ತು.
ಹೊಸ ಫೀಚರ್ಸ್ನಲ್ಲಿ ಏನೇನಿದೆ?; ಆದರೆ, ಈ ಒಂದು ಹೊಸ ವೈಶಿಷ್ಟ್ಯದಲ್ಲಿ ಓಎಸ್ (ಆಪರೇಟಿಂಗ್ ಸಿಸ್ಟಮ್) ಚಾಲಿತ ಸ್ಮಾರ್ಟ್‌ವಾಚ್ ಧರಿಸುವವರು ಗೂಗಲ್ ನಕ್ಷೆಯನ್ನು ಬಳಸುವಾಗ ಟರ್ನ್ ಬೈ ಟರ್ನ್ ನ್ಯಾವಿಗೇಷನ್ಗಾಗಿ ಮೊಬೈಲ್ನ ಅಗತ್ಯವಿರುವುದಿಲ್ಲ. ಸ್ಮಾರ್ಟ್ವಾಚ್ನ ಅತನಿರ್ಮಿತ LTE( ದೀರ್ಘಾವಧಿಯ ವಿಕಸನ) ಸಂಪರ್ಕವನ್ನು ಹೊಂದಿದೆ. ಈ ಹೊಸ ವೈಶಿಷ್ಟ್ಯವನ್ನು ಬಳಕೆದಾರರು ಬಳಸಲು, ಬಳಕೆದಾರರು ಮೊದಲು ತಮ್ಮ ವಾಚ್ನಲ್ಲಿರುವ LTE ಸಕ್ರಿಯನಗೊಳಿಸಿ ವೇರ್ ಓಎಸ್ ಸ್ಮಾರ್ಟ್ ವಾಚ್‌ನಲ್ಲಿ ಗೂಗಲ್ ನಕ್ಷೆಯನ್ನು ತೆರದು ನಂತರ ಸೆಟ್ಟಿಂಗ್ಗಳಿಗೆ ಹೋಗಿ ಲಾಂಚ್ ಮೋಡ್ ಆಯ್ಕೆ ಮಾಡಬೇಕು. ವರದಿಯ ಪ್ರಕಾರ ಲಾಂಚ್ ಮೋಡ್ ಎಂಬುದು ಸ್ಮಾರ್ಟ್ವಾಚ್ನ ಹೊಸ ಮೆನುವಾಗಿದ್ದು, ಸ್ವಯಂ - ಉಡಾವಣೆ ಮತ್ತು ಸೇವಾ ನಿಯಮಗಳ ನಡುವೆ Google Maps Wear OS ಅಪ್ಲಿಕೇಶನ್‌ಗೆ ಸೇರಿಸಲಾಗಿದೆ.
ಹೆಚ್ಚುವರಿಯಾಗಿ, ಲಾಂಚ್ ಮೋಡ್ ಮೆನುವಿನಲ್ಲಿ ನ್ಯಾವಿಗೇಶನ್ ಪ್ರಾರಂಭಿಸಲಾಗುವುದು ಎಂಬ ಹೆಡರ್ ಅಡಿ ಬಳಕೆದಾರರು ಎರಡು ಆಯ್ಕೆಗಳನ್ನು ಸ್ಕ್ರೀನ್ನಲ್ಲಿ ಕಾಣಬಹುದು ಮತ್ತು ಅವರು ವಾಚ್‌ನಲ್ಲಿನ ಅಪ್ಲಿಕೇಶನ್‌ನಿಂದ ನ್ಯಾವಿಗೇಷನ್ ಪ್ರಾರಂಭಿಸಲು ವಾಚ್ ಓನ್ಲಿ ಆಯ್ಕೆ ಮಾಡಿ ಕೊಳ್ಳಬೇಕಾಗುತ್ತದೆ. ಈ ಆಯ್ಕೆಗಳು Bluetooth(ಬ್ಲೂಟೂತ್) Wi-Fi ಸಾಧನಗಳು ಮತ್ತು ಕೇವಲ LTE ಸಾಧನಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಇದು ಸರ್ವರ್ ಸೈಡ್ ರೋಲ್ ಔಟ್ ಆಗಿರುವುದರಿಂದ ಬಳಕೆದಾರರು ಅಪ್ಲಿಕೇಶನ್ ಅಥವಾ ಅವರ ವಾಚ್ ಅನ್ನು ನವೀಕರಿಸುವ ಅಗತ್ಯವಿಲ್ಲ ಎಂದು ವರದಿ ಹೇಳುತ್ತದೆ.
ಇದರರ್ಥ ಬಳಕೆದಾರರು ಈ ವೈಶಿಷ್ಟ್ಯವನ್ನು ತಕ್ಷಣವೇ ಪಡೆಯಲು ಸಾದ್ಯವಿಲ್ಲ , ಇದು ಇನ್ನು ಪ್ರಯೋಗದ ಹಂತದಲ್ಲಿದ್ದು ಈ ಹೋಸ ಫೀಚರ್ ಸ್ಮಾರ್ಟ್ ವಾಚ್‌ನಲ್ಲಿ ಉಪಯೋಗಿಸಲು ಇನ್ನು ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ.
ಅತೀ ಶೀಘ್ರದಲ್ಲೇ ಸ್ಮಾರ್ಟ್ ಫೋನ್ಗಳಿಗೆ ಹೊಸ ಅಪಡೇಟ್: ಕೆಲವು ವರ್ಷಗಳಿಂದ ಆಪರೇಟಿಂಗ್ ಸಿಸ್ಟಮ್ (OS) ಅಪಡೇಟ್ ನೋಟಿಫಿಕೆಷನ್ ಸ್ವೀಕರಿಸಿದ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಫೀಚರ್ಗಳನ್ನು ತರುವುದಾಗಿ ಗೂಗಲ್ ಘೋಷಣೆ ಮಾಡಿದೆ. ಕಂಪನಿಯು 'ವಿಸ್ತರಣೆ ಸಾಫ್ಟ್‌ವೇರ್ ಡೆವಲಪರ್ ಕಿಟ್' (ವಿಸ್ತರಣೆ SDK) ಎಂಬ ಪರಿಕರವನ್ನು ಬಿಡುಗಡೆ ಮಾಡುತ್ತಿದೆ, ಇದು ಕೆಲವು ಆಂಡ್ರಾಯ್ಡ್ 11 ಮತ್ತು 12 ಆವೃತ್ತಿಗಳಲ್ಲಿ ಮಾತ್ರ ಚಾಲನೆಯಲ್ಲಿರುವ ಅಪ್ಲಿಕೇಶನ್ ಆಗಿದ್ದು, ಆಂಡ್ರಾಯ್ಡ್ 13 ನ ಹೊಸ ಫೋಟೋ ಪಿಕ್ಕರ್‌ನಂತಹ ವೈಶಿಷ್ಟ್ಯಗಳನ್ನು ಬಳಸಲು ಡೆವಲಪರ್‌ಗಳಿಗೆ ಅನುಮತಿಸುತ್ತದೆ. ಫೈಲ್ಸ್ಗಳನ್ನು ಸುಲಭವಾಗಿ ಅಳಿಸಿ ಹಾಕಲು ಗೂಗಲ್ (Google) ಡಾಕ್ಸ್ ಕೋಡ್ ಬ್ಲಾಕ್‌ಗಳನ್ನು ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ: ಕರುಳಿನ ಮೈಕ್ರೋ ಬಯೋಮ್ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ..? ಅದು ಹೇಗೆ?