ETV Bharat / science-and-technology

ನಾವು ಇಂದಿಗೂ ಮಾನವನ ದೇಹದಲ್ಲಿ ಪೂರ್ವಜರ ಈ 5 ಕುರುಹುಗಳನ್ನ ಕಾಣಬಹುದು!.. ಹೇಗೆ ಅಂತೀರಾ?

ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ ವಿಭಾಗದ ಆಲಿಸ್ ಕ್ಲೆಮೆಂಟ್ ಅವರು ನಮ್ಮ ಪೂರ್ವಜರ ಕುರುಹುಗಳ ಕೆಲ ಗುಣಲಕ್ಷಣಗಳ ಬಗ್ಗೆ ವಿವರಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿವೆ.

we-can-still-see-these-5-traces-of-ancestor-species-in-all-human-bodies-today
ನಾವು ಇಂದಿಗೂ ಮಾನವನ ದೇಹದಲ್ಲಿ ಪೂರ್ವಜರ ಈ 5 ಕುರುಹುಗಳು ಕಾಣಬಹುದು ಗೊತ್ತಾ?
author img

By

Published : Jan 26, 2023, 9:05 PM IST

ಅಡಿಲೇಡ್ (ಆಸ್ಟ್ರೇಲಿಯಾ): ನಮಗೆ ಕಿರಿಕಿರಿ ಉಂಟು ಮಾಡುವ ಸಂಬಂಧಿಕರೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ನಾವು ಸುಲಭವಾಗಿ ಹೇಳುತ್ತೇವೆ. ಕೆಲವೊಮ್ಮೆ ನಾವು ಈ ಕೆಲ ಜನರೊಂದಿಗೆ ಭೂಮಿಯ ಮೇಲೆ ಹೇಗೆ ಸಂಬಂಧಿಸಿದ್ದೇವೆ ಎಂದೂ ಆಶ್ಚರ್ಯ ಪಡುತ್ತವೆ. ಅದಾಗ್ಯೂ, ವಿಕಸನೀಯ ಪರಿಭಾಷೆಯಲ್ಲಿ ನಾವು ಸಾಕಷ್ಟು ವರ್ಷಗಳ ಹಿಂದಕ್ಕೆ ಹೋದರೆ ನಾವೆಲ್ಲರೂ ಕೂಡ ಪೂರ್ವಜರನ್ನು ಹಂಚಿಕೊಳ್ಳುತ್ತೇವೆ. ಇದರರ್ಥ ನಮ್ಮ ದೇಹದಲ್ಲಿನ ಅನೇಕ ವೈಶಿಷ್ಟ್ಯಗಳು ನಮ್ಮ ಕುಟುಂಬ ವೃಕ್ಷದಲ್ಲಿ ಸಾವಿರಾರು ಅಥವಾ ಲಕ್ಷಾಂತರ ವರ್ಷಗಳ ಹಿಂದೆಯೇ ವಿಸ್ತರಿಸಿಕೊಂಡಿವೆ.

ಜೀವಶಾಸ್ತ್ರದಲ್ಲಿ ಹೋಮಾಲಜಿ ಎಂಬ ಪದವು ಪೂರ್ವಜರ ಮೂಲದ ಆಧಾರದ ಮೇಲೆ ದೇಹ ಸಂರಚನೆಯ ಹೋಲಿಕೆಗೆ ಸಂಬಂಧಿಸಿದೆ. ಇದನ್ನು ತಿಳಿಯಬೇಕಾದರೆ ಮಾನವನ ಕೈ, ಬಾವಲಿ ರೆಕ್ಕೆ ಮತ್ತು ತಿಮಿಂಗಿಲ ಫ್ಲಿಪ್ಪರ್‌ನ ಸಾಮ್ಯತೆಗಳ ಬಗ್ಗೆ ಒಮ್ಮೆ ಯೋಚಿಸಿ. ಇವೆಲ್ಲವೂ ವಿಶೇಷ ಕಾರ್ಯಗಳನ್ನು ಹೊಂದಿವೆ. ಆದರೆ, ಮೂಳೆಗಳ ಆಧಾರವಾಗಿರುವ ದೇಹದ ಯೋಜನೆ ಒಂದೇ ಆಗಿರುತ್ತದೆ. ಇದು ಕೀಟಗಳು ಮತ್ತು ಪಕ್ಷಿಗಳಲ್ಲಿನ ರೆಕ್ಕೆಗಳಂತಹ ರಚನೆಗಳಿಂದ ಭಿನ್ನವಾಗಿದೆ. ಅವು ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಡ್ರಾಗನ್‌ ಫ್ಲೈನ ರೆಕ್ಕೆಗಳು ಮತ್ತು ಗಿಳಿಯ ರೆಕ್ಕೆಗಳು ಸ್ವತಂತ್ರವಾಗಿ ಹುಟ್ಟಿಕೊಂಡಿವೆ. ಹಾಗೆ ಇವು ವಿಕಸನೀಯ ಮೂಲವನ್ನು ಹಂಚಿಕೊಳ್ಳುವುದಿಲ್ಲ. ಇಂದು ಮಾನವರಲ್ಲಿ ಕಂಡುಬರುವ ಪುರಾತನ ಗುಣಲಕ್ಷಣಗಳ ಐದು ಉದಾಹರಣೆಗಳು ಹೀಗಿವೆ..

ಒಂದು ಹೆಜ್ಜೆ: ನಮ್ಮನ್ನು ಮನುಷ್ಯರನ್ನಾಗಿ ಮಾಡುವುದು ಯಾವುದು ಎಂಬ ಪ್ರಶ್ನೆ ಶತಮಾನಗಳಿಂದಲೂ ವಿಜ್ಞಾನಿಗಳು ಹಾಗೂ ವಿದ್ವಾಂಸರನ್ನು ಕಾಡುತ್ತಿದೆ. ಇಂದು ಮನುಷ್ಯ ಯಾರು ಮತ್ತು ಯಾರು ಅಲ್ಲ ಎಂದು ಹೇಳುವುದು ತುಲನಾತ್ಮಕವಾಗಿ ಸರಳವಾಗಿದೆ ಎಂದು ತೋರುತ್ತದೆ. ಆದರೆ, ಪಳೆಯುಳಿಕೆ ದಾಖಲೆಯ ಮೂಲಕ ನೋಡಿದಾಗ, ವಿಷಯಗಳು ಬಹಳ ಬೇಗನೆ ಸ್ಪಷ್ಟವಾಗುತ್ತವೆ.

ಮಾನವನ ರಚನೆಯು ಮೂರು ಲಕ್ಷ ವರ್ಷಗಳ ಹಿಂದಿನ ನಮ್ಮ ಸ್ವಂತ ಜಾತಿಗಳಾದ ಹೋಮೋ ಸೇಪಿಯನ್ಸ್‌ನ ಮೂಲದಿಂದ ಪ್ರಾರಂಭವಾಗುತ್ತದೆಯೇ?, ಅಥವಾ ನಾವು ಪೂರ್ವ ಆಫ್ರಿಕಾದ ಲೂಸಿ (ಆಸ್ಟ್ರಲೋಪಿಥೆಕಸ್ ಅಫರೆನ್ಸಿಸ್) ನಂತಹ ಪೂರ್ವಜರ ಮೂವತ್ತು ಲಕ್ಷ ವರ್ಷಗಳ ಹಿಂದಕ್ಕೆ ವಿಸ್ತರಿಸಬೇಕೇ?, ಅಥವಾ ಮಂಗನಿಂದ ಮಾನವ ಎಂಬ ಪರಿಕಲ್ಪನೆಗೆ ಸಂಬಂಧಿಸಿರುವುದೇ?. ಹೀಗೆ ಮೂರು ರೀತಿಯ ತರ್ಕಗಳು ಕಾಡುತ್ತಿವೆ. ಆದರೆ, ಮಾನವನ ಜನ್ಮವನ್ನು ಗುರುತಿಸಲು ನೀವು ಇದರಲ್ಲಿ ಯಾವುದೇ ಗೆರೆಯನ್ನು ಎಳೆದರೂ ಒಂದಂತೂ ಖಚಿತ. ಬೈಪೆಡಲಿಸಂ ಎಂದು ಕರೆಯಲ್ಪಡುವ ಎರಡು ಕಾಲುಗಳ ಮೇಲೆ ನಡೆಯುವ ಕ್ರಿಯೆಯು ನಮ್ಮ ಪೂರ್ವಜರ ಶ್ರೇಷ್ಠ ಹೆಜ್ಜೆಗಳಲ್ಲಿ ಒಂದಾಗಿದೆ.

ನಮ್ಮ ಅಸ್ಥಿಪಂಜರದ ಪ್ರತಿಯೊಂದು ಭಾಗವು ನಾಲ್ಕು ಕಾಲುಗಳ ಮೇಲೆ ನಡೆಯುವುದರಿಂದ ನೇರವಾಗಿ ನಿಲ್ಲಲು ಪ್ರಭಾವಿತವಾಗಿದೆ. ಈ ರೂಪಾಂತರಗಳು ಪಾದದ ಮೂಳೆಗಳು, ಸೊಂಟದ ಮೂಳೆಗಳು, ಮೊಣಕಾಲುಗಳು, ಕಾಲುಗಳು ಮತ್ತು ಬೆನ್ನುಮೂಳೆಯ ಜೋಡಣೆ ಮತ್ತು ಗಾತ್ರವನ್ನು ಒಳಗೊಂಡಿವೆ. ಮುಖ್ಯವಾಗಿ, ನಾವು ನೆಟ್ಟಗೆ ನಡೆಯಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ನಮ್ಮ ಮೆದುಳಿನ ಗಾತ್ರದಲ್ಲಿ ತ್ವರಿತ ಹೆಚ್ಚಳವು ಸಂಭವಿಸಿದೆ ಎಂದು ಪಳೆಯುಳಿಕೆ ತಲೆಬುರುಡೆಗಳಿಂದ ನಮಗೆ ತಿಳಿಯುತ್ತದೆ.

ನಮ್ಮ ದೊಡ್ಡ ಮೆದುಳಿನ ಶಿಶುಗಳು ವಿಶಾಲವಾದ ಜನ್ಮ ಕಾಲುವೆಯ ಮೂಲಕ ಹೊಂದಿಕೊಳ್ಳಲು ಅನುವು ಮಾಡಿಕೊಡಲು ಪೆಲ್ವಿಸ್‌ (ಶ್ರೋಣಿಯ)ಗೆ ಬದಲಾವಣೆಗಳು ಬೇಕಾಗುತ್ತವೆ. ನಮ್ಮ ವಿಶಾಲವಾದ ಶ್ರೋಣಿಯ (ಕೆಲವೊಮ್ಮೆ ಇಲಿಯಾಕ್ ಫ್ಲೇರಿಂಗ್ ಎಂದು ಕರೆಯಲ್ಪಡುತ್ತದೆ) ಒಂದು ಏಕರೂಪದ ಲಕ್ಷಣವಾಗಿದೆ. ಇದು ಆರಂಭಿಕ ಪಳೆಯುಳಿಕೆ ಮಾನವರ ಹಲವಾರು ವಂಶಾವಳಿಗಳೊಂದಿಗೆ ಮತ್ತು ಇಂದು ವಾಸಿಸುವ ಎಲ್ಲರೊಂದಿಗೆ ಹಂಚಿಕೊಳ್ಳತ್ತದೆ. ನಮ್ಮ ಮೆದುಳುಗಳು ಕಲೆ, ಸಂಸ್ಕೃತಿ ಮತ್ತು ಭಾಷೆಗೆ ಉತ್ತೇಜನ ನೀಡಿತು. ಇವೇ ನಮ್ಮನ್ನು ಮಾನವನನ್ನಾಗಿ ಮಾಡುವುದನ್ನು ಪರಿಗಣಿಸುವಾಗ ಪ್ರಮುಖ ಪರಿಕಲ್ಪನೆಗಳಾಗಿವೆ.

ತಲೆಯಲ್ಲಿ ಒಂದು ರಂಧ್ರ: ನಿಮ್ಮ ಕಣ್ಣುಗುಡ್ಡೆಗಳು ತಮ್ಮ ಕಕ್ಷೆಗಳಲ್ಲಿ ಕುಳಿತುಕೊಳ್ಳುವುದರ ಜೊತೆಗೆ ನಿಮ್ಮ ತಲೆಬುರುಡೆಯಲ್ಲಿ ನೀವು ಇತರ ದೊಡ್ಡ ರಂಧ್ರಗಳನ್ನು (ಫೆನೆಸ್ಟ್ರೇ ಎಂದು ಕರೆಯಲಾಗುತ್ತದೆ) ಹೊಂದಿರುವುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಮಾನವ ತಲೆಬುರುಡೆಯ ಪ್ರತಿ ಬದಿಯಲ್ಲಿ ಒಂದು ರಂಧ್ರ ಕಂಡುಬರುತ್ತದೆ. ಇದು 300 ಮಿಲಿಯನ್ ವರ್ಷಗಳ ಹಿಂದೆ ನಮ್ಮ ಸಾಮಾನ್ಯ ಪೂರ್ವಜರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ.

10 ಕೈ ಬೆರಳುಗಳು ಮತ್ತು 10 ಕಾಲ್ಬೆರಳುಗಳು: ಪೆಂಟಾ ಡಾಕ್ಟೈಲ್ ಅಂಗ ಎಂದು ಕರೆಯಲ್ಪಡುವ ಮಾನವನ ಕೈ ಅಥವಾ ಪಾದದಲ್ಲಿನ ಐದು ಅಂಕೆಗಳ ಈ ಮಾದರಿಯು ಹೆಚ್ಚಿನ ಉಭಯ ಚರಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಕಂಡುಬರುತ್ತದೆ. ಆದರೆ, ಮೀನುಗಳಿಗೆ ಬೆರಳುಗಳು ಮತ್ತು ಕಾಲ್ಬೆರಳುಗಳಿಲ್ಲ. ಹಾಗಾದರೆ ಇವು ಮೊದಲು ಯಾವಾಗ ವಿಕಸನಗೊಂಡವು?.

ಇತ್ತೀಚಿನ ಅಧ್ಯಯನವು ಮೀನಿನ ರೆಕ್ಕೆಯೊಳಗೆ ಸಂರಕ್ಷಿಸಲ್ಪಟ್ಟ ಮೊದಲ ಕೈ ಮತ್ತು ಕಾಲ್ಬೆರಳ ಅಂಕೆಗಳನ್ನು ವಾಸ್ತವವಾಗಿ ವಿವರಿಸಿದೆ. ಕೆನಡಾದ ಕ್ವಿಬೆಕ್‌ನ ಎಲ್ಪಿಸ್ಟೋಸ್ಟೆಜ್ ಎಂಬ 380 ಮಿಲಿಯನ್ ವರ್ಷಗಳ ಹಳೆಯ ಪಳೆಯುಳಿಕೆ ಬಳಸಿ ಮೀನಿನ ಬೆರಳುಗಳನ್ನು ಕಾಣಬಹುದು. ಇದು ಆಶ್ಚರ್ಯವಾದರೂ, ಬೆರಳುಗಳ ಸಂಖ್ಯೆ ವಿಕಸನದ ಮೊದಲು ಮೀನು ತನ್ನ ಸುತ್ತಲೂ ರೆಕ್ಕೆ ಕಿರಣಗಳನ್ನು ಉಳಿಸಿಕೊಂಡಿದೆ. ಆದ್ದರಿಂದ ಈ ಮೂಳೆಗಳು ಮೀನುಗಳ ಮೇಲೆ ಬಾಹ್ಯವಾಗಿ ಗೋಚರಿಸುವುದಿಲ್ಲ.

ಅತ್ಯಂತ ಮುಂಚಿನ ಟೆಟ್ರಾಪಾಡ್‌ಗಳು (ಬೆನ್ನು ಮೂಳೆಯನ್ನು ಹೊಂದಿರುವ ನಾಲ್ಕು ಅಂಗಗಳ ಪ್ರಾಣಿಗಳು ಅಂತಿಮವಾಗಿ ನೀರಿನಿಂದ ಭೂಮಿಯತ್ತ ಚಲಿಸಿದವು) ಬೆರಳುಗಳ ಸಂಖ್ಯೆಯನ್ನು ಪ್ರಯೋಗಿಸಿದವು. ಕೆಲವೊಮ್ಮೆ ಅವುಗಳಲ್ಲಿ ಆರು, ಏಳು ಅಥವಾ ಎಂಟು ಬೆರಳು ಸಹ ಕಂಡುಬರುತ್ತವೆ. ಈ ಟೆಟ್ರಾಪಾಡ್‌ಗಳು ಇನ್ನೂ ನೀರಿನಲ್ಲಿ ವಾಸಿಸುತ್ತಿದ್ದವು. ಟೆಟ್ರಾಪಾಡ್‌ಗಳು ನಿಜವಾಗಿಯೂ ಭೂಮಂಡಲವಾಗುವವರೆಗೆ ಐದು ಬೆರಳು ಅಂಗವು ಹೊಂದಿದ್ದವು.

ಹಲ್ಲುಗಳು: ನೀವು ನಿಮ್ಮ ಹಲ್ಲುಗಳು ಎಷ್ಟು ಹಳೆಯದಾಗಿದೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರಾ?. 2022ರಲ್ಲಿ ಪ್ಯಾಲಿಯಂಟಾಲಜಿಸ್ಟ್‌ಗಳ ತಂಡವು ಚೀನಾದ ಗುಯಿಝೌ ಪ್ರಾಂತ್ಯದಲ್ಲಿ ಸಿಲೂರಿಯನ್ ಯುಗದ ಬಂಡೆಗಳಿಂದ ಪ್ರತ್ಯೇಕವಾದ ಪಳೆಯುಳಿಕೆ ಮೀನು ಹಲ್ಲುಗಳನ್ನು ವಿವರಿಸಿದೆ. ಈ ಗಮನಾರ್ಹ ಆವಿಷ್ಕಾರವು ಹಲ್ಲುಗಳ ಕನಿಷ್ಠ ವಯಸ್ಸನ್ನು ಹಿಂದಿನ ಸಂಶೋಧನೆಗಳಿಂತ ಇನ್ನೂ 14 ಮಿಲಿಯನ್ ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ. ಇದರರ್ಥ ನಮ್ಮ ದಂತಪಂಕ್ತಿಯು ಈಗ 439 ಮಿಲಿಯನ್ ವರ್ಷಗಳ ಹಿಂದಿನ ಇತಿಹಾಸಕ್ಕೆ ಕೊಂಡೊಯ್ದಿದೆ.

ಬೆನ್ನು ಮೂಳೆ: ಬೆನ್ನು ಮೂಳೆ ಬೆಳೆಸುವುದು ಎಂದರೆ ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಹಾಗೆ ಮಾಡಿದ ಮೊದಲ ಪ್ರಾಣಿ 500 ದಶಲಕ್ಷ ವರ್ಷಗಳ ಹಿಂದೆ ಅಪಾಯಕಾರಿ ಪ್ರಾಚೀನ ಸಮುದ್ರಗಳಲ್ಲಿ ಸಾಹಸ ತೋರಿದೆ. ಮೊದಲನೆಯದಾಗಿ ಈ ವರ್ಮ್ ತರಹದ ಪ್ರಾಣಿಗಳು ದೇಹದ ಹಿಂಭಾಗದಲ್ಲಿ ಚಲಿಸುವ ಕಾರ್ಟಿಲೆಜ್‌ನಿಂದ ನಿರ್ಮಿಸಲಾದ ನೊಟೊಕಾರ್ಡ್ ರಾಡ್​ ಅನ್ನು ವಿಕಸನಗೊಳಿಸಿದವು. ಇದು ವಿಭಜಿತ ಸ್ನಾಯುವಿನ ಬ್ಲಾಕ್​ಗಳ ಲಗತ್ತನ್ನು ಮತ್ತು ಗುದದ ಆಚೆಗೆ ವಿಸ್ತರಿಸಿರುವ ಉದ್ದನೆಯ ಬಾಲವನ್ನು ಸಕ್ರಿಯಗೊಳಿಸಿತು.

ನೋಟೋಕಾರ್ಡ್ ಹೊಂದಿರುವ ಎಲ್ಲ ಪ್ರಾಣಿಗಳನ್ನು ಕಾರ್ಡೇಟ್‌ಗಳು ಎಂದು ಕರೆಯಲಾಗುತ್ತದೆ. 65 ಸಾವಿರಕ್ಕಿಂತ ಹೆಚ್ಚು ಜೀವಂತ ಜಾತಿಗಳನ್ನು ಒಳಗೊಂಡಿರುವ ಸಮುದ್ರದ ಸ್ಕ್ವಿರ್ಟ್‌ಗಳಿಂದ ಸಮುದ್ರ ಗಲ್‌ಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ಮೊದಲ ಕಾರ್ಡೇಟ್‌ಗಳ (chordates) ಕಲ್ಪನೆಯನ್ನು ನಾವು ಪಡೆಯಬೇಕಾದರೆ ಇಂದು ನಾವು ಲ್ಯಾನ್ಸ್ಲೆಟ್ (Lancelets) (ಆಂಫಿಯಾಕ್ಸಸ್ ಅಥವಾ ಬ್ರಾಂಚಿಯಾಸ್ಟೊಮಾ ಎಂದು ಕರೆಯಲಾಗುತ್ತದೆ) ನಂತಹ ಪ್ರಾಣಿಗಳನ್ನು ನೋಡಬಹುದು. ಲ್ಯಾನ್ಸ್ಲೆಟ್​ಗಳು ರೆಕ್ಕೆಗಳಿಲ್ಲದ ಸಣ್ಣ, ಪ್ರಾಚೀನ ಮೀನುಗಳಂತೆ ಕಾಣುತ್ತವೆ. ಇವು ತಮ್ಮ ದೇಹವನ್ನು ಅಕ್ಕ ಪಕ್ಕಕ್ಕೆ ತಿರುಗಿಸುವ ಮೂಲಕ ಈಜುತ್ತವೆ. ನಂತರದಲ್ಲಿ ತಲೆಗಳನ್ನು ಹೊಂದಿದ (ಕ್ರೇನಿಯೇಟ್‌ಗಳು) ಪ್ರಾಣಿಗಳು ಬರುತ್ತವೆ. ಇದರ ಬಳಿಕ ಬೆನ್ನುಮೂಳೆ ಹೊಂದಿದ ಕಶೇರುಕಗಳು ಪ್ರಾಣಿಗಳು ಬರುತ್ತವೆ. ಇಂತಹ ಪಳೆಯುಳಿಕೆಗಳನ್ನು ನಾವು ಹೊಂದಿದ್ದೇವೆ.

ಇದನ್ನೂ ಓದಿ: ಕರುಳಿನ ಮೈಕ್ರೋ ಬಯೋಮ್ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ..? ಅದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.