ನವದೆಹಲಿ: 5ಜಿ ತಂತ್ರಜ್ಞಾನ ಇನ್ನೇನು ಗ್ರಾಹಕರ ಮನೆಗೆ ಬರಲು ಸಿದ್ಧವಾಗಿದೆ. ಡಿಜಿಟಲ್ ಇಂಡಿಯಾದ ಪ್ರಯೋಜನಗಳು ಶೀಘ್ರದಲ್ಲೇ ಪ್ರತಿ ಹಳ್ಳಿಗೂ ತಲುಪಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.
75 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದ 'ಟೆಕೇಡ್' 5G ಮತ್ತು ಸೆಮಿಕಂಡಕ್ಟರ್ ಮತ್ತು ಮೊಬೈಲ್ ಫೋನ್ ತಯಾರಿಕೆ ಸ್ಥಳೀಯವಾಗಿ ಆಗಲಿದೆ ಎಂದು ಪ್ರಧಾನಿ ಹೇಳಿದರು. ನಾವು ಡಿಜಿಟಲ್ ಇಂಡಿಯಾ ಮೂಲಕ ಕ್ರಾಂತಿಯನ್ನು ತಳಮಟ್ಟಕ್ಕೆ ತರುತ್ತಿದ್ದೇವೆ. ಶೀಘ್ರದಲ್ಲೇ ದೇಶದಲ್ಲಿ 5G ಯುಗವನ್ನು ಪ್ರಾರಂಭವಾಗಲಿದ್ದು, ಪ್ರತಿ ಗ್ರಾಮವನ್ನು ಡಿಜಿಟಲ್ ಮೂಲಕ ಸಂಪರ್ಕಿಸಲಾಗುವುದು ಎಂದು ಮೋದಿ ಭರವಸೆ ನೀಡಿದರು.
ಸೆಪ್ಟೆಂಬರ್ 29 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಸಮಾರಂಭದಲ್ಲಿ ಪ್ರಧಾನಿಗಳು 5G ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಪ್ರಾರಂಭಿಸುವ ಸಾಧ್ಯತೆಯಿದೆ. ಡಿಜಿಟಲ್ ಪಾವತಿಯಿಂದ ಮೊಬೈಲ್ ಮತ್ತು ಸೆಮಿಕಂಡಕ್ಟರ್ ತಯಾರಿಕೆಯವರೆಗೆ ನಾವು ಬದಲಾವಣೆಯ ಸಮಯದಲ್ಲಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಯಶಸ್ವಿ 5G ಸ್ಪೆಕ್ಟ್ರಮ್ ಹರಾಜಿನ ನಂತರ, ದೇಶವು ಬಹುನಿರೀಕ್ಷಿತ ಹೈಸ್ಪೀಡ್ 5G ಮೊಬೈಲ್ ಸೇವೆಗಳತ್ತ ಚಿತ್ತ ನೆಟ್ಟಿದೆ.
ಇದನ್ನು ಓದಿ:ಶತ್ರುಗಳಿಂದ ಸೈನಿಕರ ರಕ್ಷಣೆ.. ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅಭಿವೃದ್ಧಿಗೊಳಿಸಿದ ಶ್ಯಾಮ್ ಚೌರಾಸಿಯಾ