ನ್ಯೂಯಾರ್ಕ್: ಕಳೆದೆರಡು ವಾರದಿಂದ ಸಂಪರ್ಕ ಕಳೆದುಕೊಂಡಿದ್ದ ವಾಯೇಜರ್ 2 ಬಾಹ್ಯಕಾಶದ ನೌಕೆಯ ಮರು ಸಂಪರ್ಕ ಸಾಧಿಸುವಲ್ಲಿ ನಾಸಾ ಸಫಲವಾಗಿದೆ. ಫೈಟ್ ಕಂಟ್ರೋಲರ್ ತಪ್ಪನ್ನು ಸರಿಪಡಿಸಿದ ಹಿನ್ನೆಲೆ ಇದರ ಮರು ಸಂಪರ್ಕ ಸಾಧ್ಯವಾಗಿದೆ. ಕಳೆದೆರಡು ವಾರಗಳ ಹಿಂದೆ ವಾಯೇಜರ್ ಸಂರ್ಪಕವನ್ನು ಕಳೆದುಕೊಂಡಿತು. 46 ವರ್ಷದ ಈ ಬಾಹ್ಯಕಾಶ ನೌಕೆಗೆ ನಿಯಂತ್ರಕರು ತಪ್ಪು ಸಂದೇಶವನ್ನು ಕಳುಹಿಸಿದ ಪರಿಣಾಮ ಇದರ ಅಂಟೆನಾ ಭೂಮಿಯಿಂದ ದೂರಕ್ಕೆ ತಿರುಗಿತು. ಇದೀಗ ಅದರ ಸಂಪರ್ಕ ಸಾಧಿಸಲಾಗಿದೆ ಎಂದು ನಾಸಾ ತಿಳಿಸಿದೆ.
-
Can you hear me now? 📡
— NASA Voyager (@NASAVoyager) August 4, 2023 " class="align-text-top noRightClick twitterSection" data="
Last night, I reestablished full communications with Earth thanks to some quick thinking and a lot of collaboration. I'm operating normally and remain on my expected trajectory. So glad I can finally phone home.
-V2
More: https://t.co/S3BFRo9Va9
">Can you hear me now? 📡
— NASA Voyager (@NASAVoyager) August 4, 2023
Last night, I reestablished full communications with Earth thanks to some quick thinking and a lot of collaboration. I'm operating normally and remain on my expected trajectory. So glad I can finally phone home.
-V2
More: https://t.co/S3BFRo9Va9Can you hear me now? 📡
— NASA Voyager (@NASAVoyager) August 4, 2023
Last night, I reestablished full communications with Earth thanks to some quick thinking and a lot of collaboration. I'm operating normally and remain on my expected trajectory. So glad I can finally phone home.
-V2
More: https://t.co/S3BFRo9Va9
ಸಂರ್ಪ ಸಾಧಿಸಿದ ವಾಯೇಜರ್ 2: ಬುಧವಾರ ನಾಸಾದ ಡೀಪ್ ಸ್ಪೆಸ್ ನೆಟ್ವರ್ಕ್ ಈ ಅಂಟೆನಾವನ್ನು ಮತ್ತೆ ಗುರಿಯಾಗಿಸಿ, ಹೊಸ ಕಮಾಂಡ್ ಅನ್ನು ಕಳುಹಿಸಿದರು. ಇದಕ್ಕಾಗಿ ಆಸ್ಟ್ರೇಲಿಯಾದಲ್ಲಿ ದೊಡ್ಡದಾದ ರೆಡಿಯೋ ಡಿಶ್ ಅಂಟೇನಾವನ್ನು ಬಳಕೆ ಮಾಡಿ ಅಧಿಕ ಪ್ರಮಾಣದ ಟ್ರಾನ್ಸಿಮಿಟರ್ ಅನ್ನು ನೀಡಲಾಯಿತು. ವಾಯೇಜರ್ 2 ಬಾಹ್ಯಕಾಶ ನೌಕೆಯನ್ನು 2 ಡಿಗ್ರಿಗೆ ಸ್ಥಳಾಂತರಿಸಬೇಕಿತ್ತು. ಈ ಕಮಾಂಡ್ ವಾಯೇಜರ್ 2ಗೆ ತಲುಪಲು 18 ಗಂಟೆ ಬೇಕಾಯಿತು. 19 ಬಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಅಂಟೇನಾದ ಮತ್ತೆ ಕಮಾಂಡ್ ಕೇಳುವಂತೆ ಮಾಡಲು ಮತ್ತೊಂದು 18 ಗಂಟೆ ಬೇಕಾಯಿತು.
ಈ ದೀರ್ಘ ಸಮಯದ ಬಳಿಕ ಶುಕ್ರವಾರ ಬಾಹ್ಯಕಾಶ ನೌಕೆ ಮತ್ತೆ ದತ್ತಾಂಶವನ್ನು ಕಳುಹಿಸಲು ಆರಂಭಿಸಿತು ಎಂದು ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪ್ಯುಲ್ಸನ್ ಲ್ಯಾಬೋರೇಟರಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಪ್ರಾಜೆಕ್ಟ್ ಮ್ಯಾನೇಜರ್ ಸೂಸೆನ್ ಡೊಡ್, ವಾಯೇಜರ್ ಮರು ಸಂಪರ್ಕಕ್ಕೆ ಸಿಕ್ಕಿದೆ ಎಂದಿದ್ದಾರೆ. ಇದನ್ನು ಪ್ರಾಜೆಕ್ಟ್ ಸೈಟಿಂಸ್ಟ್ ಲಿಂಡಾ ಸ್ಪೈಲ್ಕೆರ್ ಕೂಡ ಅನುಮೋದಿಸಿದ್ದಾರೆ.
ಸುದೀರ್ಘ ಕಾಲದಿಂದ ಇರುವ ಬಾಹ್ಯಕಾಶ ನೌಕೆ: ಸೂರ್ಯನ ವ್ಯವಸ್ಥೆಯ ಹೊರಗಿನ ಗ್ರಹಗಳು ಮತ್ತು ನಂತರ ಅದರಾಚೆ ಇರುವ ಇತರ ತಾರಾ ಜಗತ್ತನ್ನು ಅನ್ವೇಷಿಸಿ ಕುರಿತು ಅಧ್ಯಯನಕ್ಕಾಗಿ 1977ರಲ್ಲಿ ಈ ವಾಯೇಜರ್ 2 ಬಾಹ್ಯಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಇದರ ಅವಳಿ ಬಾಹ್ಯಕಾಶವಾದ ವಾಯೇಜರ್1 ಇದೀಗ ಅತಿ ದೂರದಲ್ಲಿರುವ ಬಾಹ್ಯಕಾಶ ನೌಕೆಯಾಗಿದ್ದು, ಇದು 24 ಬಿಲಿಯನ್ ಕಿ.ಮೀ ದೂರದಲ್ಲಿದ್ದು, ಇನ್ನೂ ಸಂಪರ್ಕವನ್ನು ಹೊಂದಿದೆ.
ವಾಯೇಜರ್ 2 ನಾಸಾದಿಂದ ಎರಡು ವಾರಗಳ ಸಂಪರ್ಕ ಸಿಗದೇ ಹೋಗಿರುವುದು ದೀರ್ಘಕಾಲದ ಅವಧಿಯ ಸಂಪರ್ಕ ಕಡಿತವಾಗಿದೆ ಎಂದು ಡೊಡ್ ತಿಳಿಸಿದ್ದಾರೆ. ಇದು ಪ್ಲುಟೊನಿಯಂ ಶಕ್ತಿಯನ್ನು ಹೊಂದಿದ್ದು, ವಾಯೇಜರ್ ಜೀವಂತವಾಗಿದೆ. 2027ಕ್ಕೆ ಇದು ಉಡಾವಣೆಗೊಂಡ 50 ವರ್ಷ ಆಗಲಿದೆ. ಇದು ಭೂಮಿಯಿಂದ 12.5 ಬಿಲಿಯನ್ ಮೈಲಿಗಳ ದೂರದಲ್ಲಿದ್ದು, ಇದು ಬಾಹ್ಯಕಾಶದಲ್ಲಿ 46 ವರ್ಷಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸೌರವ್ಯೂಹದ ಇತರ ಗ್ರಹಗಳ ಕುರಿತು ಮಾಹಿತಿ ಸಂಗ್ರಹಿಸಿ ಅಧ್ಯಯನಕ್ಕಾಗಿ ವಿಜ್ಞಾನಿಗಳಿಗೆ ನೀಡುತ್ತಿದೆ.
ವಾಯೇಜರ್ 1 ಮತ್ತು ವಾಯೇಜರ್ 2 ಎರಡೂ ಬಾಹ್ಯಕಾಶಗಳು ಸುದೀರ್ಘ ಸಮಯದಿಂದ ಚಟುವಟಿಕೆ ನಡೆಸಿದ್ದು, ಇದು ಗಮನಾರ್ಹ ದೀರ್ಘಾಯುಷ್ಯವನ್ನು ಹೊಂದಿದೆ ಎಂದು ಡೊಡ್ ತಿಳಿಸಿದ್ದಾರೆ.
ಇದನ್ನೂ ಓದಿ: 3ನೇ ಎರಡರಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಚಂದ್ರಯಾನ-3