ETV Bharat / science-and-technology

ಗೂಗಲ್​ ಸರ್ಚ್​ ಇಂಜಿನ್​ ಪ್ರಾಬಲ್ಯಕ್ಕೆ ಸರಿಯಲ್ಲದ ತಂತ್ರಜ್ಞಾನದ ಬಳಕೆಗಳೇ ಕಾರಣ ಎಂದ ಸತ್ಯ ನಾದೆಲ್ಲಾ - ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ

ಎಲ್ಲಾ ಸೆಲ್​ ಫೋನ್​ ಮತ್ತು ವೆಬ್​ ಬ್ರೌಸರ್​​ಗಳಲ್ಲಿ ಗೂಗಲ್​ ಡಿಫಾಲ್ಟ್​ ಆಗಿ ಅಳವಡಿಸಿರುವುದು ಕೂಡ, ಬಿಂಗ್​ ವಿಫಲವಾಗಲು ಕಾರಣ ಎಂದು ಸತ್ಯ ನಾದೆಲ್ಲ ಹೇಳಿದ್ದಾರೆ.

use-of-unfair-technologies-is-the-reason-for-the-dominance-of-google-search-engine

author img

By ETV Bharat Karnataka Team

Published : Oct 3, 2023, 11:30 AM IST

Updated : Oct 3, 2023, 3:01 PM IST

ವಾಷಿಂಗ್ಟನ್​: ಗೂಗಲ್​ ಸರ್ಚ್​ ಇಂಜಿನ್​ ಯಶಸ್ಸಿನ ಕುರಿತು ಮಾತನಾಡಿರುವ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ, ಗೂಗಲ್​ ತನ್ನ ಡೊಮೈನ್​ಗೆ ಬಳಕೆ ಮಾಡಿದ ಅನ್ಯಾಯದ ತಂತ್ರಜ್ಞಾನಗಳೇ ಕಾರಣ. ಇದರಿಂದ ತಮ್ಮ ಪ್ರತಿಸ್ಪರ್ಧಿ ಕಂಪನಿಗಳ ವಿರುದ್ಧದ ತಮ್ಮ ಪ್ರೋಗ್ರಾಂ ಬಿಂಗ್ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್​ ಡಿಸಿಯ ಕೋರ್ಟ್​ರೂಮ್​ನಲ್ಲಿ ಸರ್ಕಾರದ ಲ್ಯಾಂಡ್​ಮಾರ್ಕ್​ ಆಗಿರುವ ಆ್ಯಂಟಿಟ್ರಸ್ಟ್​​ ವಿಚಾರಣೆ ವೇಳೆ ಅವರು ಮಾತನಾಡಿದರು. 1990ರಲ್ಲಿ ಆರಂಭವಾದ ಮೈಕ್ರೋಸಾಫ್ಟ್​​ ಸರ್ಚ್​ ಇಂಜಿನ್ ಹೊಸತನ ತಡೆಯಲು ಮತ್ತು ಗ್ರಾಹಕರ ವೆಚ್ಚ ಸ್ಪರ್ಧೆ ಭರಿಸಲು ಇಂಜಿನ್​ ತನ್ನ ಪ್ರಾಬಲ್ಯ ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪ ಹಲವು ಬಾರಿ ಕೇಳಿ ಬಂದಿದೆ.

ಈ ಆರೋಪದ ಕುರಿತು ಮಾತನಾಡಿರುವ ನಾದೆಲ್ಲಾ, ಸ್ಮಾರ್ಟ್​​ಫೋನ್​ ಮತ್ತು ಕಂಪ್ಯೂಟರ್​ನಲ್ಲಿ ಡಿಫಾಲ್ಟ್​​ ಬ್ರೌಸರ್​​ ಒಪ್ಪಂದದಿಂದ ಗೂಗಲ್​ ಪ್ರಾಬಲ್ಯ ಮೆರೆದಿದೆ. ಗೂಗಲ್​ನೊಂದಿಗೆ ಸ್ಪರ್ಧೆ ಮಾಡುವ ಮಾರುಕಟ್ಟೆಯನ್ನು ಕೃತಕ ಬುದ್ದಿಮತ್ತೆ ಮತ್ತು ಅಮೆಜಾನ್​ ಅಥವಾ ಸಾಮಾಜಿಕ ಮಾಧ್ಯಮಗಳು ಸಂಪೂರ್ಣವಾಗಿ ಬದಲಾಯಿಸಿದೆ ಎಂದರು.

ಸೆಲ್​​ ಫೋನ್​ ಮತ್ತು ಕಂಪ್ಯೂಟರ್​ನಲ್ಲಿ ಡಿಫಾಲ್ಟ್​​ ಬ್ರೌಸರ್​ ಆಯ್ಕೆ ಬದಲಾಯಿಸಲು ಬಳಕೆದಾರರು ಮುಂದಾಗುವುದಿಲ್ಲ. ಅನೇಕ ಪರ್ಯಾಯ ಸರ್ಚ್​ ಇಂಜಿನ್​ ಇದೆ. ಆದರೆ, ಗೂಗಲ್​​ ಡಿಫಾಲ್ಟ್​ ಆಗಿದೆ ಎಂದು ಸಮಾಜಾಯಿಷಿ ನೀಡಿದರು. ಗೂಗಲ್​ ಡಿಫಾಲ್ಟ್​ ಬ್ರೌಸರ್​ ಆಗಿದ್ದರೂ, ಅನೇಕ ಬಿಂಗ್​ ಬಳಕೆದಾರರು ಗೂಗಲ್​ಗೆ ಮತ್ತೆ ಮರಳಿದ್ದಾರೆ. ತನ್ನ ಪ್ರತಿಸ್ಪರ್ಧಿ ಬಿಂಗ್​​ ತಡೆಯಲು ಮೈಕ್ರೋಸಾಫ್ಟ್​​ ತಪ್ಪು ಹೆಜ್ಜೆಯನ್ನು ಇಟ್ಟಿದೆ ಎಂದು ಜಾನ್​ ಸ್ಕಿಮಿಡಲಿನ್​ ಪ್ರಶ್ನಿಸಿದರು.

ಬಿಂಗ್​, ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದಾಗಿ ಅದು ಮಾರುಕಟ್ಟೆ ಶೇರ್​ ಅನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಗೂಗಲ್​​ ಚಾಟ್​ಜಿಪಿಟಿಯಂತಹ ಕೃತಕ ಬುದ್ದಿಮತ್ತೆಯ ಚಾಟ್​​ಬೂಟ್​ಗಳು ಸರ್ಚ್​ ಎಂಜಿನ್​ ಮಾರುಕಟ್ಟೆಯನ್ನು ಹೆಚ್ಚಿಸಿದೆ. ಆ್ಯಪ್​ ಸ್ಟೋರ್​​ ಡೌನ್​ಲೋಡ್​​ಗಳು ಆಸಕ್ತಿಕರವಾಗಿದೆ ಆದರೂ ಇಲ್ಲ... ಎಂದ ಅವರು ಕೃತಕ ಬುದ್ದಿಮತ್ತೆ ಜೊತೆಗೆ ಮೈಕ್ರೋಸಾಫ್ಟ್​​ ಸರ್ಚ್​ ಇಂಜಿನ್​ ಅನ್ನು ವೃದ್ಧಿಪಡಿಸಿದೆ ಎಂದರು.

ಕಳೆದ 25 ವರ್ಷಗಳಿಂದ ನಾದೆಲ್ಲಾ ಈ ಪ್ರಕರಣವನ್ನು ಅಮೆರಿಕದ ಆ್ಯಂಟಿಟ್ರಸ್ಟ್​​ ವಿಚಾರಣೆಗೆ ಸ್ಥಳಾಂತರಿಸಿದರಿಂದ ನಾಲ್ಕನೆ ವಾರದ ಟೆಸ್ಟಿಮೊನಿಗೆ ಸತ್ಯ ನಾದೆಲ್ಲಾ ಅವರನ್ನು ಸಾಕ್ಷಿಗೆ ಕರೆಯಲಾಯಿತು. ಈ ಪ್ರಕರಣ ಮುಂದಿನ ವರ್ಷದಕ್ಕೆ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಆ್ಯಂಟಿಟ್ರಸ್ಟ್​ ಪ್ರಕರಣದಲ್ಲಿ ನ್ಯಾಯಾಂಗ ವಿಭಾಗದಲ್ಲಿ ಗೂಗಲ್​ ಅನ್ನು ಆ್ಯಪಲ್​ ಮತ್ತು ಇತರೆ ಸಾಧನಗಳಲ್ಲಿ ಗೂಗಲ್​ ಸರ್ಚ್​ ಎಂಜಿನ್​ ಅನ್ನು ಬಳಕೆ ಮಾಡುವ ಮೇಲೆ ನಿಂತಿದೆ.

1990ರಲ್ಲಿ ಮೈಕ್ರೋಸಾಫ್ಟ್​​ ಇತರೆ ಟೆಕ್​ ಕಂಪನಿಗಳು ಮಾಡಿದ ವಿಂಡೋ ಸಾಫ್ಟ್​​ವೇರ್​ನ ವಾಲ್​ ಅಪ್ಲಿಕೇಷನ್​ ಬಳಕೆ ಮಾಡಿದ ಆರೋಪವನ್ನು ಎದುರಿಸಿತು. ಗೂಗಲ್​ ಸ್ಮಾರ್ಟ್​​ ಫೋನ್​ ಮತ್ತು ವೆಬ್​ ಬ್ರೌಸರ್​ನಲ್ಲಿ ಆನ್​ಲೈನ್​ ಮಾಹಿತಿ ಹುಡುಕಲು ಸರ್ಚ್​ ಇಂಜಿನ್​​ ಆಗಿ ಇರಿಸಲು ಪ್ರತಿ ವರ್ಷ ಬಿಲಿಯಂತರ ಡಾಲರ್​ ಅನ್ನು ಇರಿಸುತ್ತಿದೆ ಎಂದು ಆರೋಪವನ್ನು ಎದುರಿಸುತ್ತಿದೆ.

ಇದನ್ನೂ ಓದಿ: ಎಲ್ಲರ ನೆಚ್ಚಿನ ಸರ್ಚ್‌ ಎಂಜಿನ್‌ ಗೂಗಲ್‌ಗೆ 25ನೇ ಹುಟ್ಟುಹಬ್ಬ! ಇಂದಿನ ವಿಶೇಷ ಡೂಡಲ್​​ ನೋಡಿ..

Last Updated : Oct 3, 2023, 3:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.