ನೀವು ಮೊಬೈಲ್ ಖರೀದಿಸಬೇಕು ಎಂದು ಯೋಚಿಸಿದ್ದೀರಾ? ಹಾಗಾದರೆ ಮುಂದಿನ ತಿಂಗಳಲ್ಲಿ ಹಲವು ಕಂಪನಿಗಳ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ದಾಂಗುಡಿ ಇಡಲಿವೆ. ತಂತ್ರಜ್ಞಾನ ಬದಲಾದಂತೆ ಮೊಬೈಲ್ ಕಂಪನಿಗಳು ಹೊಸ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಏಪ್ರಿಲ್ ತಿಂಗಳಲ್ಲಿ ಹಲವು ಮೊಬೈಲ್ ಕಂಪನಿಗಳು ಉತ್ತಮ ಸಾಮರ್ಥ್ಯ, ಬಜೆಟ್, ಮಧ್ಯಮ ಶ್ರೇಣಿ ಮತ್ತು ಪ್ರೀಮಿಯಂ ಶ್ರೇಣಿಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಯಾಗಲಿವೆ. ಅಂತಹ ಮೊಬೈಲ್ಗಳ ಪಟ್ಟಿ ಇಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ 5ಜಿ(53 Samsung Galaxy M53 5G)
ಸ್ಯಾಮ್‌ಸಂಗ್ ಕಂಪನಿಯು ತನ್ನ ಈ ಹಿಂದಿನ M52 5G ಮಾದರಿಯ ಮುಂದುವರಿದ ಭಾಗವಾಗಿ ಮಧ್ಯಮ ಶ್ರೇಣಿಯಲ್ಲಿ ಇದನ್ನು ಹೊರತರುತ್ತಿದೆ. M53 5G ಮಾದರಿಯು 6.7 ಇಂಚಿನ ಪೂರ್ಣ HD + ಸೂಪರ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ನೀಡುತ್ತದೆ. ಮೀಡಿಯಾಟೆಕ್ ಡೈಮೆನ್ಶನ್ 900 ಪ್ರೊಸೆಸರ್ ಹೊಂದಿರಲಿದೆ. 108 MP ಪ್ರೈಮರಿ ಕ್ಯಾಮೆರಾದ ಜೊತೆಗೆ, 8MP ಅಲ್ಟ್ರಾ-ವೈಡ್ ಆಂಗಲ್, 2MP ಎರಡು ಕ್ಯಾಮೆರಾ ಇರಲಿದ್ದು, 32 MP ಸೆಲ್ಫಿ ಕ್ಯಾಮೆರಾ ಕೂಡ ಇದೆ. Android 12 ಆಧಾರಿತ OneUI 4.1 OS ನೊಂದಿಗೆ ಕಾರ್ಯನಿರ್ವಹಿಸುತ್ತದೆ. 5000 mAh ಬ್ಯಾಟರಿ, 25 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಇದು ಬೆಂಬಲಿಸುತ್ತದೆ. 8GB RAM / 128GB ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಬೆಲೆ ₹ 20,000 ರಿಂದ 25,000 ಇರಲಿದೆ ಎಂದು ಅಂದಾಜಿಸಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ23(Samsung Galaxy M23)
ಈ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ ಜಿ88 ಪ್ರೊಸೆಸರ್, ಆಂಡ್ರಾಯ್ಡ್ 12 OneUI 4.1 OSನಿಂದ ಚಾಲಿತವಾಗಿರಲಿದೆ. 6.6 ಇಂಚಿನ TFT ಡಿಸ್ಪ್ಲೇ, 50 MP ಮುಖ್ಯ ಕ್ಯಾಮೆರಾ, 8MP, 2MP ಜೊತೆಗೆ ಮುಂಭಾಗದಲ್ಲಿ 8 MP ಸೆಲ್ಫಿ ಕ್ಯಾಮೆರಾ ಹೊಂದಿದೆ. 5000 mAh ಬ್ಯಾಟರಿ, ವೇಗದ ಚಾರ್ಜಿಂಗ್ ಇದ್ದು, 15,000 ದಿಂದ 20,000 ವರೆಗೆ ಮೌಲ್ಯ ಇರಲಿದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ.
ಒನ್ಪ್ಲಸ್ ನಾರ್ಡ್ 2 ಸಿಇ ಲೈಟ್(OnePlus Nord 2 CE Lite)
ಈ ಫೋನ್ ಸ್ನ್ಯಾಪ್‌ಡ್ರಾಗನ್ 695 ಪ್ರೊಸೆಸರ್, 90 Hz ರಿಫ್ರೆಶ್ ದರ, 6.59 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಎರಡು 2MP ಕ್ಯಾಮೆರಾಗಳ ಜೊತೆಗೆ ಹಿಂಭಾಗದಲ್ಲಿ 64 MP ಪ್ರಾಥಮಿಕ ಕ್ಯಾಮೆರಾ ಮತ್ತು 16 MP ಸೆಲ್ಫಿ ಕ್ಯಾಮೆರಾ ಇದರ ವಿಶೇಷ. 4,500 mAh ಬ್ಯಾಟರಿ, 33 ವ್ಯಾಟ್ ವೇಗದ ಚಾರ್ಜಿಂಗ್ ಇರುವ ಈ ಫೋನ್‌ನ ಬೆಲೆ 15 ಸಾವಿರದಿಂದ 18 ಸಾವಿರದವರೆಗೆ ಇರಲಿದೆ.
ಒನ್ಪ್ಲಸ್ ನಾರ್ಡ್ 3(OnePlus Nord 3)
MediaTek Dimension 8100 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುವ ಇದು 6.7 ಇಂಚಿನ AMOLED ಪರದೆ ಜೊತೆಗೆ 120Hz ರಿಫ್ರೆಶ್ ರೇಟ್, 50 ಎಂಪಿ ಪ್ರೈಮೆರಿ ಕ್ಯಾಮೆರಾದ ಜೊತೆಗೆ 8MP ಮತ್ತು 2MP ಕ್ಯಾಮೆರಾಗಲಿವೆ. ಅಲ್ಲದೇ, 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 4,500 mAh ಬ್ಯಾಟರಿ, 150 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಇದು ಬೆಂಬಲಿಸುತ್ತದೆ. ಈ ಫೋನಿನ ಬೆಲೆ 35 ಸಾವಿರಕ್ಕಿಂತ ಹೆಚ್ಚಿರಲಿದೆ ಎಂದು ಊಹಿಸಲಾಗಿದೆ.
ಒನ್ಪ್ಲಸ್ 10 ಆರ್(OnePlus 10R)
ಈ ಫೋನ್ ಒನ್ಪ್ಲಸ್ನಿಂದ ಬರುತ್ತಿರುವ ಮತ್ತೊಂದು ಹೊಸ ಮಾದರಿಯಾಗಿದೆ. MediaTek Dimension 9000 ಪ್ರೊಸೆಸರ್ ಇರುವ ಇದು 120 Hz ರಿಫ್ರೆಶ್ ದರ, AMOLED ಪರದೆ, 5,000 mAh ಬ್ಯಾಟರಿ, 65 ವ್ಯಾಟ್ ವೇಗದ ಚಾರ್ಜಿಂಗ್ ಇದರ ಬಲ. 32 MP ಸೆಲ್ಫಿ ಕ್ಯಾಮೆರಾ, 64MP ಪ್ರೈಮೆರಿ ಕ್ಯಾಮೆರಾ, 16MP, 5MP ಮತ್ತು 2MP ಕ್ಯಾಮೆರಾಗಳು ಇರಲಿವೆ. ಇದರ ಬೆಲೆ 35,000 ದಿಂದ 40,000 ಇರಲಿದೆ.
ಪೋಕೋ ಎಫ್4 ಜಿಟಿ(Poco F4 GT)
ಗೇಮಿಂಗ್ ಗೀಳು ಇರುವವರಿಗಾಗಿ ಪೋಕೋ ಮಧ್ಯಮ ಶ್ರೇಣಿಯ F4GT ಮಾದರಿ ಮೊಬೈಲ್ ಅನ್ನು ಹೊರ ತರುತ್ತಿದೆ. ಈ ಫೋನ್ MediaTek Dimension 1200 MT6893 ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, 1120 Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ OLED ಡಿಸ್ಪ್ಲೇ ಇದೆ. 4,560 mAh ಬ್ಯಾಟರಿ, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತದೆ. ಈ ಫೋನಿನ ಬೆಲೆ 25 ಸಾವಿರದಿಂದ 30 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ. ಟೆಕ್ ಮೂಲಗಳ ಪ್ರಕಾರ, ಕಂಪನಿಯು ಮತ್ತೊಂದು ಹೊಸ ಮಾದರಿಯನ್ನು Poco F4 Lite ಹೆಸರಿನಲ್ಲಿ 20,000 ಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಿದೆ. ಆದರೆ, ಈ ಫೋನ್‌ನ ವೈಶಿಷ್ಟ್ಯಗಳ ವಿವರಗಳು ಇನ್ನೂ ತಿಳಿದುಬಂದಿಲ್ಲ.
ಮೈಕ್ರೋಮ್ಯಾಕ್ಸ್ ಇನ್ 2ಸಿ(Micromax In 2C)
ಈ ಫೋನ್ Octacore Unisock T610 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.52 ಇಂಚಿನ LCD ಡಿಸ್ಪ್ಲೇ, 13MP ಮುಖ್ಯ ಕ್ಯಾಮೆರಾ ಜೊತೆಗೆ ಎರಡು 2MP ಕ್ಯಾಮೆರಾಗಳನ್ನು ಹೊಂದಿದೆ. ಅಲ್ಲದೇ, 5MP ಸೆಲ್ಫಿ ಕ್ಯಾಮೆರಾವಿದೆ. 5,000 mAh ಬ್ಯಾಟರಿ ಇರಲಿದ್ದು, 8 ಸಾವಿರದಿಂದ 9 ಸಾವಿರಕ್ಕೆ ದೊರೆಯಲಿದೆ.
ಕ್ಸಿಯೋಮಿ 12 ಪ್ರೋ(Xiaomi 12 Pro)
Android 12 OS ನೊಂದಿಗೆ ಕಾರ್ಯನಿರ್ವಹಿಸುವ ಈ ಫೋನ್, ಸ್ನಾಪ್‌ಡ್ರಾಗನ್ 8 ಜನರೇಷನ್ ಒನ್ ಪ್ರೊಸೆಸರ್ ಬಳಸಲಾಗಿದೆ. 6.28 AMOLED ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್, 50 MP ಮುಖ್ಯ ಕ್ಯಾಮೆರಾ, 5 MP ಮತ್ತು 13 MP ಕ್ಯಾಮೆರಾಗಳಿವೆ. 32 MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 4,600 mAh ಬ್ಯಾಟರಿ, 120 ಹೈಪರ್ ಚಾರ್ಜ್, 50 ವ್ಯಾಟ್ ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಮತ್ತು 10 ವ್ಯಾಟ್ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. 8GB / 256GB ಮತ್ತು 12GB / 256GB ರೂಪಾಂತರಗಳಲ್ಲಿ ಲಭ್ಯವಿದೆ.
ವಿವೋಟಿ1 ಪ್ರೋ 5ಜಿ(Vivo T1 Pro 5G)
ವೀವೋದ ಮಧ್ಯಮ ಶ್ರೇಣಿಯ ಫೋನ್ ಇದಾಗಿದ್ದು, MediaTek Dimension 810 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.58 ಇಂಚಿನ LCD ಪರದೆ ಹೊಂದಿದೆ. 50 MP ಮುಖ್ಯ ಕ್ಯಾಮೆರಾ, 8 MP, 2 MP ಕ್ಯಾಮೆರಾಗಳು ಹಾಗೂ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇರಲಿದೆ. 5,000 mAh ಬ್ಯಾಟರಿ ಇರುವ ಈ ಫೋನ್ 6GB RAM /128GB ರೂಪಾಂತರದಲ್ಲಿ ಲಭ್ಯವಿದೆ. ಇದರ ಬೆಲೆ 15 ಸಾವಿರದಿಂದ 20 ಸಾವಿರದವರೆಗೆ ಇರಲಿದೆ.
ರಿಯಲ್ಮಿ ಜಿಟಿ 2 ಪ್ರೋ(Realme GT 2 Pro)
ಈ ಫೋನ್ Android 12 OS, ಸ್ನಾಪ್‌ಡ್ರಾಗನ್ 8 ಜನರೇಷನ್ ಒನ್ ಪ್ರೊಸೆಸರ್, 6.7 ಇಂಚಿನ 2k ಸೂಪರ್ ರಿಯಾಲಿಟಿ ಡಿಸ್ಪ್ಲೇ ಹೊಂದಿದೆ. 50 MPಯ ಎರಡು ಪ್ರಾಥಮಿಕ ಕ್ಯಾಮೆರಾಗಳ ಜೊತೆಗೆ, 32 MP ಸೆಲ್ಫಿ ಕ್ಯಾಮೆರಾ ಇದೆ. 5,000 mAh ಬ್ಯಾಟರಿ, 65 ವ್ಯಾಟ್ ಸೂಪರ್ ಡಾರ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 8GB RAM / 128GB ROM ಮತ್ತು 12GB / 256 GB ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 40 ಸಾವಿರದಿಂದ 50 ಸಾವಿರದವರೆಗೆ ಇರಲಿದೆ.
ಮೋಟೋ ಎಸ್30(Moto S30)
ಈ ಫೋನ್ ಎರಡು ಮಾದರಿಗಳಲ್ಲಿ ಲಭ್ಯವಿದೆ. ಒಂದು ಮಾದರಿಯು ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಇದ್ದರೆ, ಇನ್ನೊಂದು ಸ್ನ್ಯಾಪ್‌ಡ್ರಾಗನ್ 888 ಪ್ಲಸ್ ಪ್ರೊಸೆಸರ್ ಹೊಂದಿದೆ. 6.8 ಇಂಚಿನ ಡಿಸ್ಪ್ಲೇ, 144 Hz ರಿಫ್ರೆಶ್ ದರ, 108MP ಪ್ರೈಮೆರಿ ಕ್ಯಾಮೆರಾ, 13 MP, 2 MP ಕ್ಯಾಮೆರಾವಲ್ಲದೇ, 16MP ಸೆಲ್ಫಿ ಕ್ಯಾಮೆರಾ ಇದರ ವಿಶೇಷ. 5,000 mAh ಬ್ಯಾಟರಿ, ಟರ್ಬೊ ಪವರ್ ಚಾರ್ಜಿಂಗ್ ಸಾಮರ್ಥ್ಯವಿದ್ದು, 6GB RAM / 128GB ಮತ್ತು 8GB / 128GB ರೂಪಾಂತರಗಳೊಂದಿಗೆ ಬರಲಿದೆ. ಈ ಫೋನಿನ ಬೆಲೆ 20 ಸಾವಿರದಿಂದ 25 ಸಾವಿರ ಇರಲಿದೆ.
ಇದನ್ನೂ ಓದಿ: ವಿಶ್ವದ ಅತಿ ವೇಗದ ಡೆಸ್ಕ್ಟಾಪ್ ಪ್ರೊಸೆಸರ್ ಶೀಘ್ರದಲ್ಲೇ ಮಾರುಕಟ್ಟೆಗೆ: ಇಂಟೆಲ್