ನವದೆಹಲಿ: ಭಾರತದಲ್ಲಿ ಟ್ವಿಟರ್ ವೆರಿಫಿಕೇಶನ್ ಟ್ಯಾಗ್ ಹೊಂದಿರುವ 'ಬ್ಲೂ ಟಿಕ್' ಸೇವೆ ಇಂದಿನಿಂದ ಶುರುವಾಗಿದೆ. ಯುಎಸ್‌ನಲ್ಲಿ ಈ ಸೇವೆಯ ಬೆಲೆ 8 ಡಾಲರ್ ಇದೆ. ಭಾರತದಲ್ಲಿ ಗ್ರಾಹಕರು ಪ್ರತಿ ತಿಂಗಳಿಗೆ 719 ರೂಪಾಯಿ ಪಾವತಿಸಬೇಕು.
ದೇಶದಲ್ಲಿ ಸದ್ಯಕ್ಕೆ ಇದರ ಅಪ್ಡೇಟ್ ಸೇವೆಯು ಐಫೋನ್ಗಳಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ದೊರೆಯುವ ನಿರೀಕ್ಷೆ ಇದೆ. ಟ್ವಿಟರ್ ಬ್ಲೂ ಟಿಕ್‌ಗೆ ಚಂದಾದಾರರಾಗಿರುವ ಬಳಕೆದಾರರು ಯಾವುದೇ ಪರಿಶೀಲನೆಗೆ ಒಳಗಾಗದೇ ಬ್ಲೂಟಿಕ್ ಪಡೆಯಬಹುದು. ಚಂದಾದಾರರು ಅತೀ ವೇಗವಾಗಿ ಹೆಚ್ಚು ಜನರನ್ನು ತಲುಪಬಹುದು, ಜೊತೆಗೆ, ಅತೀ ಹೆಚ್ಚು ಆದ್ಯತೆಯ ಆಯ್ಕೆಯನ್ನೂ ಪಡೆಯುತ್ತಾರೆ ಎಂದು ಮೈಕ್ರೋ-ಬ್ಲಾಗಿಂಗ್ ಫ್ಲಾಟ್ಫಾರ್ಮ್ ಮಾಲೀಕ ಎಲೋನ್ ಮಸ್ಕ್ ಹೇಳಿದ್ದಾರೆ.
ಟ್ವಿಟರನ್ನು ಎಲೋನ್ ಮಸ್ಕ್ ಖರೀದಿಸಿದ ಕೆಲವೇ ದಿನಗಳಲ್ಲಿ ಸಿಇಒ ಪರಾಗ್ ಅಗರ್ವಾಲ್ ಮತ್ತು ಕಾನೂನು ಕಾರ್ಯನಿರ್ವಾಹಕ ವಿಜಯ ಗಡ್ಡೆ ಸೇರಿದಂತೆ ಕಂಪೆನಿಯ ನಾಲ್ಕು ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದರು. ಅಲ್ಲದೇ 200ಕ್ಕೂ ಹೆಚ್ಚು ಭಾರತೀಯ ಉದ್ಯೊಗಿಗಳನ್ನು ಸಾಮೂಹಿಕವಾಗಿ ತೆಗೆದು ಹಾಕಿದ್ದರು.
ಇದನ್ನೂ ಓದಿ:ಆ್ಯಪಲ್ ಐಒಎಸ್ 16 ಬೆಟಾ ಹೊಂದಿರುವ ಏರ್ಟೆಲ್, ಜಿಯೋ ಗ್ರಾಹಕರಿಗೆ 5ಜಿ ಸೇವೆ ಆರಂಭ