ETV Bharat / science-and-technology

'ಬಿಬಿಸಿ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆ' ಕಿಚ್ಚು ಹಚ್ಚಿದ ಟ್ವಿಟರ್​ ಲೇಬಲ್ - ಬಿಬಿಸಿ ಹ್ಯಾಂಡಲ್​ಗೆ ಲೇಬಲ್ ಮಾಡಿರುವ ಎಲೋನ್ ಮಸ್ಕ್

ಬಿಬಿಸಿ ಮಾಧ್ಯಮ ಸಂಸ್ಥೆಯು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆ ಎಂದು ಟ್ವಿಟರ್ ಲೇಬಲ್ ಹಾಕಿದೆ. ಎಲೋನ್ ಮಸ್ಕ್ ಅವರ ಈ ಕ್ರಮದಿಂದ ಭಾರಿ ವಿವಾದ ಉಂಟಾಗಿದೆ.

'ಬಿಬಿಸಿ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆ' ಕಿಚ್ಚು ಹಚ್ಚಿದ ಟ್ವಿಟರ್​ ಲೇಬಲ್
twitter-labels-bbc-as-government-funded-media-twitter-bbc-controversy
author img

By

Published : Apr 10, 2023, 2:11 PM IST

Updated : Apr 10, 2023, 3:06 PM IST

ವಾಷಿಂಗ್ಟನ್​: ಬಿಬಿಸಿಯು ಸರ್ಕಾರದಿಂದ ಹಣಕಾಸು ಅನುದಾನ ಪಡೆಯುವ ಮಾಧ್ಯಮ ಎಂದು ಟ್ವಿಟರ್​ನಲ್ಲಿ ಬಿಬಿಸಿ ಹ್ಯಾಂಡಲ್​ಗೆ ಲೇಬಲ್ ಮಾಡಿರುವ ಎಲೋನ್ ಮಸ್ಕ್ ಅವರ ಕ್ರಮ ವ್ಯಾಪಕ ವಿವಾದ ಸೃಷ್ಟಿಸಿದೆ. ಆದರೆ ಟ್ವಿಟರ್​ನ ಈ ಕ್ರಮಕ್ಕೆ ಬಿಬಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಬಿಬಿಸಿ ಸೇರಿದಂತೆ ಸರ್ಕಾರದಿಂದ ಹಣ ಪಡೆಯುವ ಇನ್ನಿತರ ಮಾಧ್ಯಮ ಸಂಸ್ಥೆಗಳಾದ ಪಿಬಿಎಸ್​, ಎನ್​ಪಿಆರ್ ಮತ್ತು ವಾಯ್ಸ್​ ಆಫ್ ಅಮೆರಿಕಾ ಸಂಸ್ಥೆಗಳ ಟ್ವಿಟರ್​ ಹ್ಯಾಂಡಲ್​ಗಳ ಮೇಲೆ ಕೂಡ ಇದೇ ರೀತಿಯ ಲೇಬಲ್ ಮಾಡಲಾಗಿದೆ.

ಆದಾಗ್ಯೂ ಸರ್ಕಾರಿ ಪ್ರಾಯೋಜಿತ ಇನ್ನಿತರ ಸಂಸ್ಥೆಗಳಾದ ಕೆನಡಾದ ಸಿಬಿಸಿ ಅಥವಾ ಕತಾರ್​ನ ಅಲ್ ಜಜೀರಾ ಸಂಸ್ಥೆಗಳನ್ನು ಈ ವರ್ಗೀಕರಣಕ್ಕೆ ಸೇರಿಸಲಾಗಿಲ್ಲ. @BBC ಹೆಸರಿನ ಖಾತೆ 2.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಇದನ್ನು ಪ್ರಸ್ತುತ ಸರ್ಕಾರಿ ಅನುದಾನಿತ ಎಂದು ಬ್ರಾಂಡ್ ಮಾಡಲಾಗಿದೆ. BBC ನ್ಯೂಸ್ (ವರ್ಲ್ಡ್) ಮತ್ತು BBC ಬ್ರೇಕಿಂಗ್ ನ್ಯೂಸ್ ಸೇರಿದಂತೆ BBC ಯ ಇತರ ಖಾತೆಗಳಿಗೆ ಇದೇ ರಿತಿಯ ಲೇಬಲ್ ಅನ್ನು ನೀಡಲಾಗಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸರ್ಕಾರದ ಅನುದಾನಿತ ಮಾಧ್ಯಮ ಎಂದು ಪರಿಗಣಿಸಲು ಕಾರಣವಾದ ಅಂಶಗಳೇನು ಎಂಬುದಕ್ಕೆ ಟ್ವಿಟರ್ ವ್ಯಾಖ್ಯಾನ ನೀಡಿಲ್ಲ. ಟ್ವಿಟರ್​ನ ಕ್ರಮದ ಬಗ್ಗೆ ಬಿಬಿಸಿ ಪ್ರತಿಕ್ರಿಯೆ ನೀಡಿದ್ದು, ಈ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ನಾವು ಟ್ವಿಟರ್‌ನೊಂದಿಗೆ ಮಾತುಕತೆ ನಡೆಸಿದ್ದೇವೆ. ಬಿಬಿಸಿ ಸ್ವತಂತ್ರವಾಗಿತ್ತು ಮತ್ತು ಯಾವಾಗಲೂ ಸ್ವತಂತ್ರವಾಗಿರುತ್ತದೆ. ನಾವು ಪರವಾನಗಿ ಶುಲ್ಕದ ಮೂಲಕ ಬ್ರಿಟಿಷ್ ಸಾರ್ವಜನಿಕರಿಂದ ಹಣವನ್ನು ಪಡೆಯುತ್ತೇವೆ ಎಂದು ಹೇಳಿದೆ. ಬಿಬಿಸಿಯು ಪ್ರಧಾನವಾಗಿ ಬ್ರಿಟನ್​ನ ಕುಟುಂಬಗಳಿಂದ ಪರವಾನಗಿ ಶುಲ್ಕದ ಮೂಲಕ ಹಣ ಪಡೆಯುತ್ತದೆ. ಇದಕ್ಕಾಗಿ ಬಿಬಿಸಿ ಅಲ್ಲದ ಚಾನಲ್‌ಗಳು ಅಥವಾ ಲೈವ್ ಸೇವೆಗಳನ್ನು ಸಹ ವೀಕ್ಷಿಸುವುದು ಅಗತ್ಯವಾಗುತ್ತದೆ. ವಾಣಿಜ್ಯ ಕಾರ್ಯಾಚರಣೆಗಳ ಮೂಲಕ ಇದಕ್ಕೆ ಪೂರಕವಾದ ಆದಾಯ ಪಡೆದುಕೊಳ್ಳಲಾಗುತ್ತದೆ.

ಎನ್​ಪಿಆರ್​ ಮಾಧ್ಯಮ ಸಂಸ್ಥೆಯ ಲೇಬಲ್​ ಅನ್ನು ಸರ್ಕಾರಿ ಸಂಯೋಜಿತ ಮಾಧ್ಯಮ ಎಂದು ಬದಲಾಯಿಸಿದ ನಂತರ ಎಲೋನ್ ಮಸ್ಕ್ ಹಾಗೂ ಅಮೆರಿಕದ ಎನ್​ಪಿಆರ್ ನೆಟ್ವರ್ಕ್ ಒಡೆತನದಲ್ಲಿರುವ ಎನ್​ಪಿಆರ್​ ಮಧ್ಯೆ ವಿವಾದ ಏರ್ಪಟ್ಟಿತ್ತು. ಸರ್ಕಾರಿ ಸಂಯೋಜಿತ ಮಾಧ್ಯಮ ಎಂದು ಹೇಳುವುದರ ಹಿಂದೆ ಅಮೆರಿಕ ಸರ್ಕಾರವು ಎನ್​ಪಿಆರ್​ನ ಸಂಪಾದಕೀಯ ನಿಲುವುಗಳ ಮೇಲೆ ಪ್ರಭಾವ ಬೀರಬಹುದು ಎಂಬ ಅರ್ಥವಿತ್ತು ಹಾಗೂ ಇದನ್ನು ಕ್ರೆಮ್ಲಿನ್​ನಿಂದ ಪ್ರಾಯೋಜಿತವಾದ ರಷ್ಯಾ ಟುಡೇ ಮಾಧ್ಯಮಕ್ಕೆ ಹೋಲಿಸಲಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಬಿಬಿಸಿ ಜೊತೆಗೆ ಇದೇ ರೀತಿಯ ವಿವಾದ ಉಂಟಾಗಿದೆ.

ಲೇಬಲ್ ಹಾಕಿದ ನಂತರ ತಾವು ಆ ಟ್ವಿಟರ್​ ಹ್ಯಾಂಡಲ್​ನಿಂದ ಯಾವುದೇ ಟ್ವೀಟ್ ಮಾಡುವುದಿಲ್ಲ ಎಂದು ಎನ್​ಪಿಆರ್ ಹೇಳಿತ್ತು. ಇದರ ನಂತರ ಲೇಬಲ್ ಅನ್ನು ಸರ್ಕಾರದ ಅನುದಾನಿತ ಮಾಧ್ಯಮ ಎಂದು ಬದಲಾಯಿಸಲಾಗಿತ್ತು. ಟ್ವಿಟರ್‌ನ ಲೇಬಲ್​ಗೆ ಶ್ವೇತಭವನ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಮಾತನಾಡಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಎನ್‌ಪಿಆರ್‌ನ ಪತ್ರಕರ್ತರ ಸ್ವಾತಂತ್ರ್ಯದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ : ಗುಜರಾತ್​ ವಿಧಾನಸಭೆಯಲ್ಲಿ ಬಿಬಿಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ವಾನುಮತದ ನಿರ್ಣಯ

Last Updated : Apr 10, 2023, 3:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.