ETV Bharat / science-and-technology

Truecaller: ಕಾಲ್ ರೆಕಾರ್ಡಿಂಗ್ ಸೌಲಭ್ಯ ಆರಂಭಿಸಿದ ಟ್ರೂಕಾಲರ್; ಇದು ದುಡ್ಡು ಕೊಡುವ ಗ್ರಾಹಕರಿಗೆ ಮಾತ್ರ! - ಪ್ರೀಮಿಯಂ ಬಳಕೆದಾರರಿಗೆ ಕರೆ ರೆಕಾರ್ಡಿಂಗ್

ಕಾಲರ್ ಐಡೆಂಟಿಪೀಕೇಶನ್ ಆ್ಯಪ್ ಟ್ರೂ ಕಾಲರ್ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಆರಂಭಿಸಿದೆ. ಈ ಸೌಲಭ್ಯ ಪಾವತಿಸಿ ಬಳಸುವ ಚಂದಾದಾರರಿಗೆ ಮಾತ್ರ ಲಭ್ಯವಾಗಲಿದೆ.

Truecaller introduces call recording
Truecaller introduces call recording
author img

By

Published : Jun 14, 2023, 7:32 PM IST

ಸ್ಯಾನ್ ಫ್ರಾನ್ಸಿಸ್ಕೋ : ಕಾಲರ್ ಐಡೆಂಟಿಫಿಕೇಶನ್ ಆ್ಯಪ್ ಆಗಿರುವ ಟ್ರೂಕಾಲರ್ ಐಒಎಸ್ ಮತ್ತು ಆಂಡ್ರಾಯ್ಡ್ ಎರಡೂ ಬಳಕೆದಾರರಿಗೆ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ವಾಸ್ತವದಲ್ಲಿ ಎರಡೂ ಆಪರೇಟಿಂಗ್ ಸಿಸ್ಟಮ್‌ಗಳು ಸ್ಥಳೀಯವಾಗಿ ಕರೆಗಳನ್ನು ರೆಕಾರ್ಡಿಂಗ್ ಮಾಡದಂತೆ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುತ್ತವೆ. ಆದರೆ ಟ್ರೂಕಾಲರ್ ಮೀಸಲಾದ ರೆಕಾರ್ಡಿಂಗ್ ಲೈನ್‌ಗೆ ಕರೆ ಮಾಡುವ ಮೂಲಕ ಈ ನಿರ್ಬಂಧವನ್ನು ಬೈಪಾಸ್ ಮಾಡುತ್ತದೆ.

ಆ್ಯಂಡ್ರಾಯ್ಡ್​ನಲ್ಲಿ, ಬಳಕೆದಾರರು Truecaller ನ ಡಯಲರ್‌ನಿಂದ ನೇರವಾಗಿ ಕಾಲ್ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಬಹುದು. ಬಳಕೆದಾರರು ಬೇರೊಂದು ಡಯಲರ್ ಬಳಸುತ್ತಿದ್ದರೆ ಟ್ರೂ ಕಾಲರ್ ಫ್ಲೋಟಿಂಗ್ ರೆಕಾರ್ಡಿಂಗ್ ಬಟನ್ ಅನ್ನು ತೋರಿಸುತ್ತದೆ. ಐಓಎಸ್​ನಲ್ಲಿ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ವಿಲೀನಗೊಳಿಸುವ ಮೂಲಕ ಬಳಕೆದಾರರು ಟ್ರೂ ಕಾಲರ್ ಅಪ್ಲಿಕೇಶನ್ ಮೂಲಕ ರೆಕಾರ್ಡಿಂಗ್ ಲೈನ್‌ಗೆ ಕರೆ ಮಾಡಬೇಕಾಗುತ್ತದೆ.

ಕರೆಯಲ್ಲಿರುವ ಇತರ ವ್ಯಕ್ತಿಗೆ ಕರೆ ರೆಕಾರ್ಡ್ ಆಗುತ್ತಿದೆ ಎಂಬುದನ್ನು ಸೂಚಿಸಲು ಬೀಪ್ ಶಬ್ದ ಕೇಳುತ್ತದೆ ಎಂದು ವರದಿ ತಿಳಿಸಿದೆ. 2018 ರಲ್ಲಿ ಟ್ರೂ ಕಾಲರ್ ಆ್ಯಂಡ್ರಾಯ್ಡ್​ನಲ್ಲಿ ಪ್ರೀಮಿಯಂ ಬಳಕೆದಾರರಿಗೆ ಕರೆ ರೆಕಾರ್ಡಿಂಗ್ ಅನ್ನು ಪರಿಚಯಿಸಿತು ಮತ್ತು 2021 ರಲ್ಲಿ ಇದನ್ನು ಎಲ್ಲಾ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಲಭ್ಯಗೊಳಿಸಲಾಯಿತು. ಆದಾಗ್ಯೂ 2022 ರಲ್ಲಿ ಗೂಗಲ್ ತನ್ನ Accessibility API ಗೆ ಪ್ರವೇಶವನ್ನು ಸೀಮಿತಗೊಳಿಸಿತು. ಟ್ರೂ ಕಾಲರ್ ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳು ಕರೆಗಳನ್ನು ರೆಕಾರ್ಡ್ ಮಾಡಲು ಇದನ್ನೇ ಬಳಸುತ್ತಿದ್ದವು. ಹೀಗಾಗಿ ಟ್ರೂ ಕಾಲರ್ ತನ್ನ ಅಪ್ಲಿಕೇಶನ್‌ಗಳಿಂದ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ತೆಗೆದುಹಾಕಬೇಕಾಯಿತು.

ಇದಲ್ಲದೆ ಕಂಪನಿಯು ಹೆಚ್ಚುವರಿಯಾಗಿ ಕಾಲ್ ರೆಕಾರ್ಡಿಂಗ್ ಮಾಡಲು ಬಳಕೆದಾರರಿಗೆ transcripts ಗಳನ್ನು ಕೂಡ ಒದಗಿಸಲಿದೆ. ಇದನ್ನು ಮುಂಬರುವ ವಾರಗಳಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿದೆ. ಟ್ರಾನ್ಸ್‌ಕ್ರಿಪ್ಟ್‌ಗಳ ಮೂಲಕ ರೆಕಾರ್ಡ್ ಮಾಡಿದ ಸಂಭಾಷಣೆಗಳಲ್ಲಿ ಮಾಹಿತಿಯನ್ನು ತ್ವರಿತವಾಗಿ ಹುಡುಕಲು ಸಾಧ್ಯವಾಗಲಿದೆ.

ವರದಿಯ ಪ್ರಕಾರ ಟ್ರೂ ಕಾಲರ್ ಸದ್ಯ ಅಮೆರಿಕದಲ್ಲಿ ಕಡಿಮೆ ಸಂಖ್ಯೆಯ ಐಓಎಸ್​ ಬಳಕೆದಾರರೊಂದಿಗೆ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಮತ್ತು ಇಂದು ಕಂಪನಿಯು ಈ ವೈಶಿಷ್ಟ್ಯವನ್ನು ಪ್ರೀಮಿಯಂ ಚಂದಾದಾರಿಕೆಯನ್ನು ಹೊಂದಿರುವ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದೆ. ಈ ಸೌಲಭ್ಯ ಪಡೆಯಲು ಪಾವತಿ ಯೋಜನೆಗಳು ಹೀಗಿವೆ: ಬೇಸಿಕ್ ಜಾಹೀರಾತು ಮುಕ್ತ ಯೋಜನೆ ತಿಂಗಳಿಗೆ 1 ಡಾಲರ್, ಕರೆ ರೆಕಾರ್ಡಿಂಗ್‌ನೊಂದಿಗೆ ಪ್ರೀಮಿಯಂ ಯೋಜನೆ ತಿಂಗಳಿಗೆ 3.99 ಡಾಲರ್ ಮತ್ತು ಕರೆ ಸ್ಕ್ರೀನಿಂಗ್ ಸಹಾಯಕ ಜೊತೆಗೆ ಉನ್ನತ ಶ್ರೇಣಿಯ ಯೋಜನೆ ಪ್ರತಿ ತಿಂಗಳು 4.49 ಡಾಲರ್.

ಕಂಪನಿಯು ತನ್ನ ಅತಿದೊಡ್ಡ ಮಾರುಕಟ್ಟೆಯಾಗಿರುವ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ವೈಶಿಷ್ಟ್ಯವನ್ನು ಹೊರತರುವ ಗುರಿಯನ್ನು ಹೊಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಟ್ರೂಕಾಲರ್ ಅಮೆರಿಕದಲ್ಲಿ ಅರ್ಧ ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಕಂಪನಿಯು ಜಾಗತಿಕವಾಗಿ 350 ಮಿಲಿಯನ್‌ ಹಾಗೂ ಭಾರತದಲ್ಲಿ ಅತಿ ಹೆಚ್ಚು 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಇದನ್ನೂ ಓದಿ : Crude oil: ಕಚ್ಚಾ ತೈಲ ಬೇಡಿಕೆ 2028ಕ್ಕೆ ಗಮನಾರ್ಹ ಕುಸಿತ- IEA ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.