ಕೇಪ್ ಕ್ಯಾನವೆರಲ್(ಅಮೆರಿಕ): ನಾಲ್ವರು ಗಗನಯಾತ್ರಿಗಳನ್ನು ಹೊತ್ತ SpaceX ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ(SPACEX-CREW ARRIVAL). ಇನ್ನು ಇವರು ವಸಂತ ಕಾಲದವರೆಗೂ ಆಕಾಶದಲ್ಲಿ ತೆಲಾಡುತ್ತಾ ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ತೆಲಾಡಲಿದ್ದಾರೆ.
ಹೀಗಾಗಿ ಸದ್ಯಕ್ಕೆ ಈ ನಾಲ್ವರು ಗಗನಯಾನಿಗಳ ಅದ್ಭುತ ತಾಣವೇ ಆಗಲಿದೆ. ನಿನ್ನೆ ನಾಸಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ್ದ ಸ್ಪೇಸ್ ಎಕ್ಸ್ ಕ್ಯಾಪ್ಸುಲ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲು ಸುಮಾರು 21 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಕ್ಯಾಪ್ಸುಲ್ ಯಶಸ್ವಿಯಾನದ ಬಗ್ಗೆ ಈ ಯಾನದ ಕಮಾಂಡರ್ ಆಗಿರುವ ರಾಜಾ ಚಾರಿ ಮಾತನಾಡಿ, ಒಬ್ಬರು ಜರ್ಮನ್ ಮತ್ತು ಮೂವರು ಅಮೆರಿಕ ಗಗನಯಾತ್ರಿಗಳನ್ನ ಹೊತ್ತ ಡ್ರ್ಯಾಗನ್ ಕ್ಯಾಪ್ಸುಲ್ 20 ಮೈಲಿ (30 ಕಿಲೋಮೀಟರ್) ದೂರದಲ್ಲಿರುವ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ಸಂದರ್ಭ ಈ ನಾಲ್ವರು ಗಗನಯಾನಿಗಳ ಬದುಕಲ್ಲಿ ಒಂದು ಭಾವನಾತ್ಮಕ ಕ್ಷಣವನ್ನೇ ಸೃಷ್ಟಿ ಮಾಡಿತು(glorious sight') ಎಂದಿದ್ದಾರೆ.
ಇದನ್ನೂ ಓದಿ:ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಸ್ಪೇಸ್ಎಕ್ಸ್ನ ನಾಲ್ವರು ಗಗನಯಾತ್ರಿಗಳು
"ಬಾಹ್ಯಾಕಾಶದಲ್ಲಿ ತೇಲುತ್ತಿರುವ ಈ ಸಂದರ್ಭದಲ್ಲಿ ಬಾಹ್ಯಾಕಾಶ ವಜ್ರದಂತೆ ಹೊಳೆಯುತ್ತಿದೆ" ಎಂದು ಜರ್ಮನ್ ಗಗನಯಾತ್ರಿ ಮಥಿಯಾಸ್ ಮೌರೆರ್ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ ನಾವು ಈ ಯಾತ್ರೆಯಿಂದ ತುಂಬಾ ಸಂತುಲಿತರಾಗಿದ್ದೇವೆ ಹಾಗೂ ಅಷ್ಟೇ ಉತ್ಸುಕತೆಯಿಂದ ಇದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಡ್ರ್ಯಾಗನ್‌ನ ಹಾರಾಟವು ಸಂಪೂರ್ಣ ಸ್ವಯಂಚಾಲಿತವಾಗಿದೆ. ಅಂದ ಹಾಗೆ ಈ ಬಾಹ್ಯಾಕಾಶಯಾನದ ನೌಕೆಯನ್ನ ಚಾರಿ ಮತ್ತು ಪೈಲಟ್ ಟಾಮ್ ಮಾರ್ಷ್‌ಬರ್ನ್ ನಿರ್ವಹಿಸುತ್ತಿದ್ದು, ಕ್ಯಾಪ್ಸುಲ್ ಸಿಸ್ಟಮ್‌ಗಳನ್ನು ಇವರೇ ಮೇಲ್ವಿಚಾರಣೆ ಮಾಡುತ್ತಾರೆ. ಅಗತ್ಯ ಇದ್ದರೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇವರು ಸಿದ್ಧರಾಗಿದ್ದಾರೆ.
ಇವರು ಮುಂದಿನ ಆರು ತಿಂಗಳುಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ.