ನವದೆಹಲಿ: ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಸುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಜನರು ಕೂಡ ಇದರತ್ತ ಒಲವು ತೋರುತ್ತಿದ್ದಾರೆ. ಸುಲಭವಾಗಿ ಬ್ಯಾಟರಿ ಬದಲಾಯಿಸಿ ಸಂಚರಿಸುವ ಈ ವಾಹನಗಳು ಜನಪ್ರಿಯವಾಗುತ್ತಿದ್ದಂತೆ ಭಾರತದ ಹವಾಮಾನ ಅದಕ್ಕೆ ತೊಡಕಾಗಿ ಪರಿಣಮಿಸಿದೆ. ಈ ಬಾರಿ ಭಾರತದಲ್ಲಿ ಬೇಸಿಗೆಯ ಬಿಸಿ ಏರಿದ್ದು, ಜನರು ಶಾಖದ ಅಲೆಯಿಂದ ತತ್ತರಿಸುತ್ತಿದ್ದಾರೆ. ಈ ನಡುವೆ ಉತ್ತರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ವಿನಿಮಯ ಸ್ಟೇಷನ್ ಕೇಂದ್ರಗಳಲ್ಲಿ ಅಗ್ನಿ ಪ್ರಮಾದಗಳು ಕಾಣಿಸಿಕೊಳ್ಳುತ್ತಿರುವ ಘಟನೆ ವರದಿಯಾಗುತ್ತಿವೆ.
ಮಾಧ್ಯಮವೊಂದರ ವರದಿ ಪ್ರಕಾರ, ಈ ವಾರದ ಆರಂಭದಲ್ಲಿ ನವದೆಹಲಿ ಜನಕ್ಪುರಿ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ವಾಹನ ಸ್ಟಾರ್ಟ್ಅಪ್ಗೆ ಸೇರಿದ ಬ್ಯಾಟರಿ ಸ್ಟೇಷನ್ ಬೆಂಕಿಗೆ ಆಹುತಿ ಆಗಿದೆ. ಈ ಬ್ಯಾಟರಿ ಸ್ಮಾರ್ಟ್ ಚಾಲಿತ ಸೌಲಭ್ಯವೂ ಎಲೆಕ್ಟ್ರಿಕ್ ವಾಹನಗಳಿಗೆ ಪವರ್ ನೀಡುವ ಉದ್ದೇಶದಿಂದ 50 ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಎಂದು ವರದಿ ಆಗಿದೆ.
ಹಲವು ಪ್ರಕರಣ: ಕಳೆದ ಜನವರಿಯಲ್ಲಿ ಲಕ್ನೋನಲ್ಲಿನ ಬದಾಶಾ ನಗರದ ಬ್ಯಾಟರಿ ವಿನಿಮಯ ಕೇಂದ್ರದಲ್ಲೂ ಬೆಂಕಿ ಕಾಣಿಸಿಕೊಂಡು, ಇದಕ್ಕೆ ಓರ್ವ ಬಲಿಯಾಗಿದ್ದ. ಕಳೆದ ವರ್ಷ ಮೇ ಅಲ್ಲಿ ಕೂಡ ನೋಯ್ಡಾದ ಸಣ್ಣ ಬ್ಯಾಟರಿ ಸ್ಮಾರ್ಟ್ ಅಂಗಡಿ ಬೆಂಕಿಗೆ ಆಹುತಿ ಆಗಿತ್ತು. ಇದಾದ ಎರಡು ತಿಂಗಳ ಬಳಿಕ ದೆಹಲಿಯ ಸೀತಾಪುರಿ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಎಂದು ಕೆನ್ ವರದಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಇವಿ ಸ್ಮಾರ್ಟ್ಅಪ್, ಹೆಚ್ಚಿನ ಬಿಸಿಲಿನ ಹಿನ್ನಲೆಯಲ್ಲಿ ಎರಡು ಬ್ಯಾಟರಿ ಪ್ಯಾಕ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿದೆ. ಈ ಎರಡು ಬ್ಯಾಟರಿಗಳು ತಾಪಮಾನದ ಪರಿಣಾಮವಾಗಿ ಎರಡು ನಿಮಿಷದಲ್ಲೇ ಅಗ್ನಿ ಹೊತ್ತಿಕೊಂಡಿದೆ. ಈ ಸಂಬಂಧ ನಮ್ಮ ಕೆಳ ಸಿಬ್ಬಂದಿಗೆ ತಿಳಿಸಲಾಗಿದ್ದು, ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಲಾಗಿದೆ. ತಕ್ಷಣವೇ ಅವರಿಗೆ ಮುಖ್ಯ ವಿದ್ಯುತ್ ಕಂಟ್ರೋಲ್ ಅನ್ನು ಸ್ವಿಚ್ ಆಫ್ ಮಾಡುವಂತೆ ಮತ್ತು ಫೋಮ್ ಎಕ್ಸ್ಟಿಗ್ವಿಶರ್ ನಿಯೋಜಿಸುವಂತೆ ಸೂಚಿಸಿದ್ದೆವು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಎಲ್ಲ ಬ್ಯಾಟರಿಗಳಿಗೆ ಬೆಂಕಿ ಹರಡಿದೆ. ಈ ಹಿನ್ನೆಲೆ ತಕ್ಷಣಕ್ಕೆ ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದೆವು.
ತಾಪಮಾನ ಹೆಚ್ಚಿದಂತೆ ಬ್ಯಾಟರಿಗಳು ಬೆಂಕಿಗೆ ಆಹುತಿ ಆಗುತ್ತಿರುವುದು ಅನೇಕ ಇವಿ ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೇಸಿಗೆಯಲ್ಲಿ ಅನೇಕ ಇವಿಗಳು ಬೆಂಕಿಗೆ ಆಹುತಿ ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಸಾವಿಗೂ ಕಾರಣವಾಗುತ್ತಿದೆ. ಈ ಹಿನ್ನೆಲೆ ಸರ್ಕಾರ ಕೂಡ ಕಟ್ಟು ನಿಟ್ಟಿನ ತನಿಖೆಗೆ ಮುಂದಾಗಿದೆ.
ಭಾರತದ ಇವಿ ಮಾರುಕಟ್ಟೆ: ಭಾರತದಲ್ಲಿ ಇವಿ ಮಾರುಕಟ್ಟೆ ವಿಸ್ತಾರವಾಗುತ್ತಿದ್ದಂತೆ ಬ್ಯಾಟರಿ ಸ್ಮಾರ್ಟ್ಗಳು ಯೋಜನೆಗಳನ್ನು ಆರಂಭಿಸಲಾಗಿದೆ. ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳ ಬ್ಯಾಟರಿ ವಿನಿಮಿಯ ಕೇಂದ್ರದ ನೆಟ್ವರ್ಕ್ ವೇಗವಾಗಿ ಬೆಳೆಯುತ್ತದೆ. ದಿ ಟೈಗರ್ ಗ್ಲೋಬಲ್ ಬೆಂಬಲಿತ ಈ ಸ್ಟಾರ್ಟ್ ಅಪ್ ಸರಣಿ ಉದ್ಯಮವನ್ನು ಐಐಟಿ ಕಾನ್ಫುರ ಪದವೀಧರ ಪುಲ್ಕಿಟ್ ಕುರನಾ ಮತ್ತು ಸಿದ್ಧಾರ್ಥ್ ಸಿಕ್ಕಾ ಆರಂಭಿಸಿದರು. 2025ರ ಹೊತ್ತಿಗೆ 17 ಬಿಲಿಯನ್ ವಿನಿಯಯ ಮಾರುಕಟ್ಟೆ ಗುರಿಯನ್ನು ಇವರು ಹೊಂದಿದ್ದಾರೆ
ಇದನ್ನೂ ಓದಿ: ನಿರೀಕ್ಷೆ ಮೀರಿ ಬೆಳೆದ ಚೀನಾ ಆರ್ಥಿಕತೆ: ಕೊರೊನಾ ಬಿಕ್ಕಟ್ಟಿನಿಂದ ಹೊರಬಂದ ಡ್ರ್ಯಾಗನ್