ETV Bharat / science-and-technology

ಶಿಕ್ಷಣಕ್ಕೆ ಚಾಟ್​ಜಿಪಿಟಿ ಪೂರಕ, ಆದರೆ ಸ್ವಂತ ಆಲೋಚನೆ ಬದಲಿಸಕೂಡದು: ವಿದ್ಯಾರ್ಥಿಗಳ ಅಭಿಪ್ರಾಯ

ಶಿಕ್ಷಣದಲ್ಲಿ ಚಾಟ್​ ಜಿಪಿಟಿಯಂಥ ಚಾಟ್​ ಬಾಟ್​ ಬಳಕೆಯ ಬಗ್ಗೆ ವಿದ್ಯಾರ್ಥಿಗಳು ಒಲವು ಹೊಂದಿದ್ದಾರೆ ಎಂದು ಲಂಡನ್​ನಲ್ಲಿ ನಡೆದ ಸಂಶೋಧನೆಯೊಂದು ಹೇಳಿದೆ.

ಶಿಕ್ಷಣಕ್ಕೆ ಚಾಟ್​ಜಿಪಿಟಿ ಪೂರಕ, ಆದರೆ ಸ್ವಂತ ಆಲೋಚನೆ ಬದಲಿಸಕೂಡದು: ವಿದ್ಯಾರ್ಥಿಗಳ ಅಭಿಪ್ರಾಯ
Students are positive on ChatGPT, but uncertain on cheating
author img

By

Published : May 15, 2023, 5:47 PM IST

ಲಂಡನ್ : ಶೈಕ್ಷಣಿಕ ವಲಯದಲ್ಲಿ ಚಾಟ್ ಜಿಪಿಟಿ ಮಾದರಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಸಾಫ್ಟ್​ವೇರ್​ಗಳನ್ನು ಬಳಸುವ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಒಲವು ಹೊಂದಿದ್ದಾರೆ. ಆದರೆ, ಇದನ್ನು ಬಳಸಿ ನಕಲು ಮಾಡುವುದನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ. ಉನ್ನತ ಶಿಕ್ಷಣದಲ್ಲಿ ಎಐ ಬಗ್ಗೆ ವಿದ್ಯಾರ್ಥಿಗಳ ವರ್ತನೆಗಳನ್ನು ಪರೀಕ್ಷಿಸಲು ಯುರೋಪ್​ನಲ್ಲಿ ನಡೆಸಲಾದ ಬೃಹತ್ ಪ್ರಮಾಣದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಅಧ್ಯಯನಕ್ಕಾಗಿ ಸ್ವೀಡನ್‌ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು 6,000 ವಿದ್ಯಾರ್ಥಿಗಳ ಸಮೀಕ್ಷೆಯನ್ನು ನಡೆಸಿದರು. ಸುಮಾರು 56 ಪ್ರತಿಶತ ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಚಾಟ್‌ಬಾಟ್‌ಗಳನ್ನು ಬಳಸುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ ಮತ್ತು 35 ಪ್ರತಿಶತ ಜನರು ನಿಯಮಿತವಾಗಿ ಚಾಟ್ ಜಿಪಿಟಿ ಬಳಸುತ್ತಾರೆ. ಆದಾಗ್ಯೂ, ಪರೀಕ್ಷೆಗಳಲ್ಲಿ ಉತ್ತರ ಬರೆಯಲು ಚಾಟ್‌ಬಾಟ್‌ಗಳನ್ನು ಬಳಸುವುದು ವಂಚನೆ ಎಂದು 62 ಪ್ರತಿಶತ ವಿದ್ಯಾರ್ಥಿಗಳು ನಂಬಿದ್ದಾರೆ.

ಚಾಟ್‌ಬಾಟ್‌ಗಳು ಮತ್ತು AI ಭಾಷಾ ಪರಿಕರಗಳು ವಿದ್ಯಾರ್ಥಿಗಳಾಗಿ ತಮ್ಮನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತವೆ ಮತ್ತು ಅಂಥ ಸಾಧನಗಳು ತಮ್ಮ ಶೈಕ್ಷಣಿಕ ಬರವಣಿಗೆ ಮತ್ತು ಒಟ್ಟಾರೆ ಭಾಷಾ ಕೌಶಲ್ಯಗಳನ್ನು ಸುಧಾರಿಸುತ್ತವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳು (95 ಪ್ರತಿಶತ) ಚಾಟ್​ ಜಿಪಿಟಿಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದವರಾಗಿದ್ದಾರೆ ಮತ್ತು 35 ಪ್ರತಿಶತದಷ್ಟು ಜನರು ಚಾಟ್‌ಬಾಟ್ ಅನ್ನು ನಿಯಮಿತವಾಗಿ ಬಳಸುತ್ತಾರೆ.

AI ಬಗ್ಗೆ ಅವರ ಸಕಾರಾತ್ಮಕ ಮನೋಭಾವದ ಹೊರತಾಗಿಯೂ, ತಾವು ಇರುವ ಕಲಿಕೆಯ ಪರಿಸರದಲ್ಲಿ AI ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಇವರಿಗೆ ಸ್ಪಷ್ಟವಾದ ಮಾರ್ಗದರ್ಶನದ ಕೊರತೆ ಇದೆ. ಅಲ್ಲದೆ ವಂಚನೆಯ ಗಡಿ ಯಾವುದು ಎಂಬುದನ್ನು ತಿಳಿಯುವುದು ಕೂಡ ಅವರಿಗೆ ಕಷ್ಟ. ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯು AI ಅನ್ನು ಜವಾಬ್ದಾರಿಯುತವಾಗಿ ಬಳಸುವ ವಿಷಯದಲ್ಲಿ ಯಾವುದೇ ನಿಯಮಗಳು ಅಥವಾ ಮಾರ್ಗಸೂಚಿಗಳನ್ನು ಹೊಂದಿದೆಯೇ ಎಂಬುದು ತಿಳಿದಿಲ್ಲ ಮತ್ತು ಸಹಜವಾಗಿಯೇ ಇದು ಕಳವಳದ ವಿಷಯವಾಗಿದೆ. ಅದೇ ಸಮಯದಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಎಐ ಮೇಲೆ ನಿಷೇಧ ಹೇರಿದ್ದರ ಬಗ್ಗೆ ವಿದ್ಯಾರ್ಥಿಗಳು ವಿರೋಧ ಹೊಂದಿದ್ದಾರೆ. ಚಾಟ್‌ಬಾಟ್‌ಗಳನ್ನು ಕಲಿಕೆಗೆ ಪೂರಕವಾಗಿ ಬಳಸಬೇಕು, ಆದರೆ ಅವು ವಿದ್ಯಾರ್ಥಿಗಳ ಸ್ವಂತ ವಿಮರ್ಶಾತ್ಮಕ ಚಿಂತನೆಯನ್ನು ಬದಲಿಸಬಾರದು ಎಂಬುದು ಪ್ರಬಲವಾದ ಮನೋಭಾವವಾಗಿದೆ.

ಒಬ್ಬ ವಿದ್ಯಾರ್ಥಿಯು ಹೇಳಿದಂತೆ- ಎಐ ಏನು ಮಾಡುತ್ತದೆಯೋ ಅದೆಲ್ಲವನ್ನು ನಿಮಗೆ ಮಾಡಲು ಸಾಧ್ಯವಾಗಬೇಕು. ಆದರೆ ಅದನ್ನು ಮಾಡಲು ಎಐ ನಿಮಗೆ ಕೇವಲ ಸಹಾಯ ಮಾಡಬೇಕು. ಕ್ಯಾಲ್ಕುಲೇಟರ್ ಮೇಲಿನ ಪ್ಲಸ್ ಚಿಹ್ನೆ ಏನು ಮಾಡುತ್ತದೆ ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ನೀವು ಕ್ಯಾಲ್ಕುಲೇಟರ್ ಅನ್ನು ಉಪಯೋಗಿಸಬಾರದು ಎಂಬುದು ವಿದ್ಯಾರ್ಥಿಯ ಅಭಿಪ್ರಾಯವಾಗಿದೆ. ವಿವಿಧ ಅಂಗವೈಕಲ್ಯ ಹೊಂದಿರುವ ಜನರಿಗೆ ಎಐ ಪರಿಣಾಮಕಾರಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಸಮೀಕ್ಷೆಯಲ್ಲಿ ಹೊರಹೊಮ್ಮಿದ ಮತ್ತೊಂದು ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ : ಭಾರತದಲ್ಲಿ ಸಗಟು ಹಣದುಬ್ಬರ ಮೈನಸ್​ 0.92ಕ್ಕೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.