ETV Bharat / science-and-technology

ಡೀಪ್‌ಫೇಕ್ ವಿರುದ್ಧ ವಾರದಲ್ಲಿ ಕಠಿಣ ಐಟಿ ನಿಯಮ ಜಾರಿ: ಕೇಂದ್ರ ಸರ್ಕಾರ

ಡೀಪ್​ಫೇಕ್​ ತಂತ್ರಜ್ಞಾನದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಕಠಿಣ ನಿಯಮ ಜಾರಿಗೆ ಒತ್ತಾಯ ಕೇಳಿ ಬಂದಿದೆ.

ಡೀಪ್‌ಫೇಕ್
ಡೀಪ್‌ಫೇಕ್
author img

By ETV Bharat Karnataka Team

Published : Jan 16, 2024, 3:25 PM IST

Updated : Jan 16, 2024, 3:33 PM IST

ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಖಾತೆಯ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​

ನವದೆಹಲಿ: ನಟ, ನಟಿಯರು, ಕ್ರಿಕೆಟ್​ ತಾರೆಯರನ್ನು ಕಾಡುತ್ತಿರುವ ಡೀಫ್​​ಫೇಕ್​ ತಂತ್ರಜ್ಞಾನದ ಬಳಕೆ ಮತ್ತು ಅದರ ನಿಯಂತ್ರಣದ ಮೇಲೆ ಇನ್ನಷ್ಟು ಕಠಿಣ ನಿಯಮಗಳನ್ನು ಮುಂದಿನ 7 ದಿನಗಳಲ್ಲಿ ತರಲಾಗುವುದು ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಖಾತೆಯ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ತಿಳಿಸಿದರು.

ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನದ ನಿಮಿತ್ತ ನೋಯ್ಡಾದ ಬೋಟ್ ತಯಾರಿಕಾ ಘಟಕಕ್ಕೆ ಯುವಕರೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳು ನಿಯಂತ್ರಣ ಹೊಂದುವುದರ ಮೇಲೆ ಹಲವಾರು ನಿಯಮಗಳನ್ನು ಜಾರಿ ಮಾಡಲಾಗಿದೆ. ಆದಾಗ್ಯೂ ಕೆಲ ಮಾಧ್ಯಮಗಳು ನಿಯಮಾನುಸಾರ ನಡೆದುಕೊಳ್ಳುತ್ತಿಲ್ಲ. ಅವುಗಳ ವಿರುದ್ಧ ಕಠಿಣ ನಿಯಮಗಳನ್ನು ಹೇರಲಾಗುವುದು ಎಂದು ಹೇಳಿದರು.

ಐಟಿ ನಿಯಮಗಳಿಗೆ ತಿದ್ದುಪಡಿ: ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವಾದ ಡೀಪ್‌ಫೇಕ್‌ ಕುರಿತು ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸದಿದ್ದರೆ, ಅದರ ವಿರುದ್ಧ ಹೊಸ ಐಟಿ ನಿಯಮಗಳನ್ನು ಅನುಸರಿಸಲಾಗುವುದು ಎಂದು ಸರ್ಕಾರವು ಈ ಹಿಂದೆ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಹೇಳಿತ್ತು ಎಂದರು.

ಈ ನಿಯಮಗಳ ಅನುಸರಣೆಯಲ್ಲಿ ಕೆಲ ಸಾಮಾಜಿಕ ವೇದಿಕೆಗಳು ಎಡವುತ್ತಿವೆ. ಅವುಗಳನ್ನು ಸರಿದಾರಿಗೆ ತರಲು ಹೊಸ ನೀತಿಗಳನ್ನು ಜಾರಿಗೆ ತರಲಾಗುವುದು. ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತಂದು ಕಠಿಣ ಅನುಸರಣೆ ಜಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಮುಂದಿನ ಒಂದು ವಾರದಲ್ಲಿ ತಿದ್ದುಪಡಿಯಾದ ಐಟಿ ನಿಯಮಗಳು ಜಾರಿಯಾಗುವುದನ್ನು ನೀವು ನಿರೀಕ್ಷಿಸಬಹುದು. ಈಗಾಗಲೇ ಸೂಚಿಸಲಾಗಿರುವ ಐಟಿ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಮಾಜಿಕ ವೇದಿಕೆಗಳಿಗೆ ಎಚ್ಚರಿಸಲಾಗುವುದು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಆಯಾ ವೇದಿಕೆಗಳ ಹೊಣೆಯಾಗಿದೆ ಎಂದು ರಾಜೀವ್​ ಚಂದ್ರಶೇಖರ್​ ಹೇಳಿದರು.

ಕ್ರಿಕೆಟ್​ ದಿಗ್ಗಜ ಸಚಿನ್​ಗೆ ಡೀಪ್​​ಫೇಕ್​​ ಕಾಟ: ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರಿಗೆ ಡೀಪ್​ಫೇಕ್​ ತಲೆಬಿಸಿ ತಂದಿದೆ. ಅವರನ್ನೇ ಹೋಲುವಂತೆ ರೂಪಿಸಿ, ಗೇಮಿಂಗ್​ ಆ್ಯಪ್​ನಿಂದ ಹಣ ಮಾಡುವುದು ಹೇಗೆ ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ನಕಲಿಯಾಗಿದೆ ಎಂದು ಸಚಿನ್​ ಅವರೇ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಂತ್ರಜ್ಞಾನದ ದುರ್ಬಳಕೆ ಮಿತಿಮೀರಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕಿದೆ ಎಂದು ಅವರು ಕೋರಿದ್ದರು.

ಇದಕ್ಕೂ ಮೊದಲು ಡೀಪ್​ಫೇಕ್ ಬಳಸಿ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗಿತ್ತು. ನಟಿ ರಶ್ಮಿಕಾ ಮಂದಣ್ಣ ಅವರ ಚಿತ್ರಗಳನ್ನೂ ಅಶ್ಲೀಲವಾಗಿ ರೂಪಿಸಿ ಹರಿಬಿಡಲಾಗಿತ್ತು. ಇದು ದೇಶಾದ್ಯಂತ ಭಾರಿ ಸದ್ದು ಮಾಡಿತ್ತು.

ಇದನ್ನೂ ಓದಿ: ಪುತ್ರಿ ಸಾರಾ ಬಳಿಕ ಸಚಿನ್​ ತೆಂಡೂಲ್ಕರ್​ಗೆ ಡೀಪ್​ಫೇಕ್​ ತಲೆಬಿಸಿ: ನಕಲಿ ವಿಡಿಯೋ ವಿರುದ್ಧ ಆಕ್ರೋಶ

Last Updated : Jan 16, 2024, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.