ETV Bharat / science-and-technology

1 ಮಿಲಿಯನ್ ಇಂಟರ್ನೆಟ್ ಯೂಸರ್ ಟರ್ಮಿನಲ್ಸ್​ ತಯಾರಿಸಿದ ಸ್ಟಾರ್​ಲಿಂಕ್​

author img

By

Published : Sep 26, 2022, 4:29 PM IST

ಏಪ್ರಿಲ್‌ನಲ್ಲಿ ಸ್ಪೇಸ್‌ಎಕ್ಸ್, ಯುಎಸ್​ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ (USAID) ಸಹಭಾಗಿತ್ವದಲ್ಲಿ, ಇತ್ತೀಚೆಗೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ಗೆ 5 000 ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ತಲುಪಿಸಿತ್ತು. ಈ ಟರ್ಮಿನಲ್‌ಗಳು ಸಾರ್ವಜನಿಕ ಅಧಿಕಾರಿಗಳು ಮತ್ತು ಅಗತ್ಯ ನಾಗರಿಕ ಸೇವಾ ಪೂರೈಕೆದಾರರಿಗೆ ಉಕ್ರೇನ್‌ ಒಳಗಡೆ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ಸಂವಹನವನ್ನು ಮುಂದುವರಿಸಲು ಅವಕಾಶ ನೀಡುತ್ತವೆ.

1 ಮಿಲಿಯನ್ ಇಂಟರ್ನೆಟ್ ಯೂಸರ್ ಟರ್ಮಿನಲ್ಸ್​ ತಯಾರಿಸಿದ ಸ್ಟಾರ್​ಲಿಂಕ್​
Starlink now has over 1 mn user terminals manufactured: Musk

ಸ್ಯಾನ್ ಫ್ರಾನ್ಸಿಸ್ಕೊ( ಅಮೆರಿಕ): ಉಪಗ್ರಹ ಇಂಟರ್ನೆಟ್ ಸಿಸ್ಟಮ್‌ಗಾಗಿ ಪ್ರಿ - ಆರ್ಡರ್ಸ್​​ ಬರಲು ಆರಂಭವಾದಾಗಿನಿಂದ ಕಳೆದ ಕೆಲವು ತಿಂಗಳುಗಳಲ್ಲಿ ಸ್ಪೇಸ್‌ಎಕ್ಸ್ 1 ಮಿಲಿಯನ್‌ಗಿಂತಲೂ ಹೆಚ್ಚು ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ತಯಾರಿಸಿದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ. ಈ ಬಗ್ಗೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್​ನಲ್ಲಿ- ಸ್ಟಾರ್ ಲಿಂಕ್ ಈಗ 1 ಮಿಲಿಯನ್ ಬಳಕೆದಾರರ ಟರ್ಮಿನಲ್​​ಗಳನ್ನು ತಯಾರಿಸಿದೆ ಎಂದು ಟೆಸ್ಲಾ ಸಿಇಒ ಪೋಸ್ಟ್ ಮಾಡಿದ್ದಾರೆ.

elon musk
ಎಲೋನ್ ಮಸ್ಕ್

ಏಪ್ರಿಲ್‌ನಲ್ಲಿ ಸ್ಪೇಸ್‌ಎಕ್ಸ್, ಯುಎಸ್​ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ (USAID) ಸಹಭಾಗಿತ್ವದಲ್ಲಿ, ಇತ್ತೀಚೆಗೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ಗೆ 5,000 ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ತಲುಪಿಸಿತ್ತು. ಈ ಟರ್ಮಿನಲ್‌ಗಳು ಸಾರ್ವಜನಿಕ ಅಧಿಕಾರಿಗಳು ಮತ್ತು ಅಗತ್ಯ ನಾಗರಿಕ ಸೇವಾ ಪೂರೈಕೆದಾರರಿಗೆ ಉಕ್ರೇನ್‌ ಒಳಗಡೆ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ಸಂವಹನ ಮುಂದುವರಿಸಲು ಅವಕಾಶ ನೀಡುತ್ತವೆ. ಫೆಬ್ರವರಿ 24 ರಂದು ರಷ್ಯಾದ ಆಕ್ರಮಣದ ದಿನದಂದು ಸೈಬರ್ ದಾಳಿ ನಡೆಸಿ ಉಕ್ರೇನ್‌ನ ಉಪಗ್ರಹ ಇಂಟರ್ನೆಟ್ ಸಂಪರ್ಕವನ್ನು ಶಾಶ್ವತವಾಗಿ ಆಫ್‌ಲೈನ್‌ ಮಾಡಲಾಗಿತ್ತು.

ಹಿಂದಿನ USAID ಪ್ರಕಟಣೆಯ ಪ್ರಕಾರ, ಸ್ಪೇಸ್‌ಎಕ್ಸ್ 3,667 ಉಪಗ್ರಹಗಳನ್ನು ಸುಮಾರು 10 ಮಿಲಿಯನ್ ಡಾಲರ್ ವೆಚ್ಚದಲ್ಲಿ ವಿತರಿಸಿದೆ, USAID ಉಳಿದ 1,333 ಟರ್ಮಿನಲ್‌ಗಳನ್ನು ಖರೀದಿಸಿದೆ. ಏತನ್ಮಧ್ಯೆ, ತನ್ನ ರಾಕೆಟ್ ಕಂಪನಿಯ ಉಪಗ್ರಹ ಇಂಟರ್ನೆಟ್ ವಿಭಾಗವಾದ ಸ್ಟಾರ್‌ಲಿಂಕ್ ಈಗ ಅಂಟಾರ್ಕ್ಟಿಕಾ ಸೇರಿದಂತೆ ಎಲ್ಲ ಖಂಡಗಳಲ್ಲಿ ಸಕ್ರಿಯವಾಗಿದೆ ಎಂದು ಮಸ್ಕ್ ಇತ್ತೀಚೆಗೆ ಹೇಳಿದ್ದಾರೆ. ಅಂಟಾರ್ಕ್ಟಿಕಾದಲ್ಲಿರುವ ಮೆಕ್‌ಮುರ್ಡೊ ನಿಲ್ದಾಣದಲ್ಲಿ ಬೇಸಿಗೆಯಲ್ಲಿ ಸುಮಾರು 1,000 ಜನರು ವಾಸಿಸುತ್ತಿದ್ದಾರೆ ಮತ್ತು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರು ಈಗಾಗಲೇ ಉಪಗ್ರಹ ಇಂಟರ್ನೆಟ್ ಅನ್ನು ಹೊಂದಿದ್ದಾರೆ. ಆದರೆ ಇದು ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹವಲ್ಲಎಂಬುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ: ಹೊಸ ಗೆಳತಿಯನ್ನು ವಿಶ್ವಕ್ಕೆ ಪರಿಚಯಿಸಿದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್; ಗುಟ್ಟಾಗಿ ಉಳಿಯದ ಗುಪ್ತ ಡೇಟಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.