ETV Bharat / science-and-technology

ಇಸ್ರೋದಿಂದ ಸಣ್ಣ ಉಪಗ್ರಹ ಉಡಾವಣಾ ವಾಹಕ ಎಸ್​ಎಸ್​ಎಲ್​ವಿ-ಡಿ2 ಯಶಸ್ವಿ ಉಡಾವಣೆ - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಪಿಎಸ್​ಎಲ್​ವಿಗಿಂತ ಕಡಿಮೆ ವೆಚ್ಚದಾಯಕವಾದ ಎಸ್​ಎಸ್​ಎಲ್​ವಿ- ಮೂರು ಉಪಗ್ರಹ ಹೊತ್ತೊಯ್ಯದ್ದ ಎಸ್​ಎಸ್​ಎಲ್​ವಿ ಡಿ 2- ಎಸ್​ಎಸ್​ಎಲ್​ವಿ ಡಿ 1 ವೈಫಲ್ಯದ ಬಳಿಕ ಯಶಸ್ವಿ ಉಡಾವಣೆ

ಇಸ್ರೋದಿಂದ ಸಣ್ಣ ಉಪಗ್ರಹ ಉಡಾವಣಾ ವಾಹಕ ಎಸ್​ಎಸ್​ಎಲ್​ವಿ-ಡಿ2 ಯಶಸ್ವಿ ಉಡಾವಣೆ
sslv-d2-successfully-launched-by-isro
author img

By

Published : Feb 10, 2023, 10:41 AM IST

ಶ್ರೀಹರಿಕೋಟಾ(ಆಂಧ್ರಪ್ರದೇಶ) ​: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಣ್ಣ ಉಪಗ್ರಹ ಉಡಾವಣಾ ವಾಹಕ ಎಸ್​ಎಸ್​ಎಲ್​ವಿ-ಡಿ2 ಉಡಾವಣೆ ಆಗಿದೆ. ಶುಕ್ರವಾರ 9.18ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಈ ಉಪಗ್ರಹ ಉಡಾವಣೆಯಾಗಿದ್ದು, ಮಧ್ಯರಾತ್ರಿ 2.48ರಿಂದಲೇ ಆರೂವರೆ ಗಂಟೆಗಳ ಕೌಂಟ್​ಡೌನ್​ ಶುರುವಾಗಿತ್ತು ಎಂದು ಇಸ್ರೋ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಸ್​ಎಸ್​ಎಲ್​ವಿ ರಾಕೆಟ್​ ಮೂರು ಉಪಗ್ರಹಗಳನ್ನು ಹೊತ್ತೊಯ್ದಿದೆ. ಇದರಲ್ಲಿ ಇಸ್ರೋನ ಭೂಮಿ ವಿಕ್ಷಣಾ ಉಪಗ್ರಹ- ಇಒಎಸ್​-07, ಯುಎಸ್‌ನ ಆಂಟಾರಿಸ್‌ಗೆ ಸೇರಿದ ಜಾನಸ್ -1 ಮತ್ತು ಸ್ಪೇಸ್ ಕಿಡ್ಜ್ ಇಂಡಿಯಾ, ಚೆನ್ನೈಗೆ ಸೇರಿದ ಆಜಾದಿ ಸ್ಯಾಟ್ -2 ಉಪಗ್ರಹಗಳಿವೆ.

ಎಸ್​ಎಸ್​ಎಲ್​ವಿ ಡಿ-2 ಒಟ್ಟಾರೆ 175.2 ಕೆಜಿ ತೂಕ ಇದೆ. ಇದರಲ್ಲಿ ಇಒಎಸ್​ 07- 156.3ಕೆಜಿ, ಜಾನುಸ್​-1 - 10.2 ಕೆಜಿ, ಮತ್ತು ಆಜಾದಿ ಸ್ಯಾಟ್​​-2 -8.7 ಕೆಜಿ ತೂಕ ಇದೆ. ಎಸ್​ಎಸ್​ಎಲ್​ವಿ ರಾಕೆಟ್​ ಕಡಿಮೆ ವೆಚ್ಚದ ಬಾಹ್ಯಕಾಶ ಸೌಲಭ್ಯವನ್ನು ಹೊಂದಿದೆ. ಅನೇಕ ಉಪಗ್ರಹಗಳಿಗೆ ಅವಕಾಶ ಕಲ್ಪಿಸುವಲ್ಲಿ ಕಡಿಮೆ ಸಮಯ ಮತ್ತು ಕನಿಷ್ಠ ಉಡಾವಣಾ ಮೂಲಸೌಕರ್ಯವನ್ನು ನೀಡುತ್ತದೆ. ರಾಕೆಟ್​ ಉಡಾವಣೆಗೊಂಡ 13 ನಿಮಿಷಗಳ ನಂತರ ಎಸ್​ಎಸ್​ಎಲ್​ವಿ ರಾಕೆಟ್ ಇಒಎಸ್​-07 ಅನ್ನು ಹೊರಹಾಕುತ್ತದೆ. ಬಳಿಕ ಜಾನಸ್ -1 ಮತ್ತು ಆಜಾದಿ ಸ್ಯಾಟ್​-2 ಉಪಗ್ರಹಗಳನ್ನು 450 ಕಿಮೀ ಎತ್ತರದಲ್ಲಿ ಹೊರಹಾಕುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

  • #WATCH | Andhra Pradesh: ISRO launches Small Satellite Launch Vehicle-SSLV-D2- from Satish Dhawan Space Centre at Sriharikota to put three satellites EOS-07, Janus-1 & AzaadiSAT-2 satellites into a 450 km circular orbit pic.twitter.com/kab5kequYF

    — ANI (@ANI) February 10, 2023 " class="align-text-top noRightClick twitterSection" data=" ">

ವಿಫಲವಾಗಿದ್ದ ಮೊದಲ ಎಸ್​ಎಸ್​ಎಲ್​ವಿ ಡಿ-1: ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕವಾಗಿದ್ದ ಎಸ್​ಎಸ್​ಎಲ್​ವಿ-ಡಿ-1 ರಾಕೆಟ್​ ಉಡಾವಣೆ ವೈಫಲ್ಯದ ಕುರಿತು ತಿಳಿಸಿದ ಇಸ್ರೋ, ರಾಕೆಟ್​ ಮೇಲಿನ ಭಾಗ ಉಪಗ್ರಹವನ್ನು ಅಸ್ಥಿರ ಕಕ್ಷೆಗೆ ತಳ್ಳಿದ ಹಿನ್ನೆಲೆ ಇದು ವಿಫಲವಾಯಿತು. ಎರಡನೇ ಹಂತದಲ್ಲಿ ಪ್ರತ್ಯೇಕಿಕರಣದಲ್ಲಿ ವೈಬ್ರೆಷನ್​ ಉಂಟಾಯಿತು. ರಾಕೆಟ್‌ನ ಸಾಫ್ಟ್‌ವೇರ್ ಉಪಗ್ರಹಗಳ ನಿರ್ವಹಿಸಲು ಸಮರ್ಥವಾಗಿದ್ದರೂ, ತಪ್ಪಾದ ಕಕ್ಷೆಗೆ ಸೇರಿಸಲಾಯಿತು. ಉಪಗ್ರಹಗಳು ಸ್ಥಿರ ಕಕ್ಷೆಯಲ್ಲಿ ಇರಲು ಅಗತ್ಯವಾದ ವೇಗವನ್ನು ಸಹ ಹೊಂದಿರಲಿಲ್ಲ. ಇದೀಗ ಈ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡನೇ ಸಣ್ಣ ಉಪಗ್ರಹ ಉಡಾವಣಾ ವಾಹಕ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಣ್ಣ ಉಪಗ್ರಹ ಉಡಾವಣೆ ಏಕೆ? ಸಣ್ಣ ಮತ್ತು ಸೂಕ್ಷ್ಮ ಉಪಗ್ರಹ ವಾಣಿಜ್ಯ ಮಾರುಕಟ್ಟೆಯನ್ನು ಸೆರೆಹಿಡಿಯಲು ಅಭಿವೃದ್ಧಿಪಡಿಸಲಾಗಿದೆ. ಇಸ್ರೋದ ಪಿಎಸ್‌ಎಲ್‌ವಿ ಉಡಾವಣೆ ಕಾರ್ಯಕ್ಕೆ ಸುಮಾರು 600 ಜನರು, ಆರು ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಬೇಕು. ಆದರೆ, ಇದು ಕೆಲವೇ ದಿನದಲ್ಲಿ ಸಣ್ಣ ತಂಡದಿಂದ ಈ ರಾಕೆಟ್​ ಜೋಡಣೆ ನಡೆಯಲಿದೆ. ಭೂಮಿಯ ಮೇಲ್ಬಾಗದಲ್ಲಿನ 500 ಕಿ.ಮೀ ಎತ್ತರಕ್ಕೆ ಉಪಗ್ರಹಗಳನ್ನು ಸುರಕ್ಷಿತವಾಗಿ ಒಯ್ದು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಈ ಸಣ್ಣ ಉಪಗ್ರಹ ಉಡಾವಣಾ ವಾಹಕಕ್ಕೆ ಇದೆ.

ಏನಿದು ಜಾನಸ್​-1: ಜಾನಸ್-1 ಎಂಬುದು ಅಮೆರಿಕ ಮೂಲದ ಆಂತಾರಿಸ್ ಮತ್ತು ಅದರ ಭಾರತೀಯ ಪಾಲುದಾರರಾದ ಎಕ್ಸ್‌ಡಿಲಿಂಕ್ಸ್ ಮತ್ತು ಅನಂತ್ ಟೆಕ್ನಾಲಜೀಸ್ ನಿರ್ಮಿಸಿದ ತಂತ್ರಜ್ಞಾನ ಪ್ರದರ್ಶಕ ಉಪಗ್ರಹವಾಗಿದೆ.

ಏನಿದು ಆಜಾದಿ ಸ್ಯಾಟ್: ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಸೇರಿ ಈ ಪೇಲೋಡ್‌ಗಳನ್ನು ನಿರ್ಮಿಸಿರುವುದು ವಿಶೇಷ. ಸ್ಪೇಸ್​ಕಿಡ್ಸ್ ​ಇಂಡಿಯಾದಿಂದ ಇದೇ ರೀತಿಯ ಉಪಗ್ರಹವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್ಎಸ್​ಎಲ್​ವಿ ಡಿ.1 ನಲ್ಲಿ ಉಡಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ಗಗನಯಾನ್ ಮಿಷನ್: ಸಿಬ್ಬಂದಿ ಮಾಡ್ಯೂಲ್ ಚೇತರಿಕೆ ಪ್ರಯೋಗ ನಡೆಸಿದ ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.