ETV Bharat / science-and-technology

ಸ್ಪೈಯಿಂಗ್ ಆ್ಯಪ್ LetMeSpy ಸರ್ವರ್​ಗಳು ಹ್ಯಾಕ್​, ಡೇಟಾ ಡಿಲೀಟ್​; ಕಂಪನಿಯೇ ಸ್ಥಗಿತ

author img

By

Published : Aug 6, 2023, 6:03 PM IST

LetMeSpy: ಗೂಢಚಾರಿಕೆ ಆ್ಯಪ್ ಆಗಿರುವ ಲೆಟ್​ ಮಿ ಸ್ಪೈ ಸರ್ವರ್​ ಹ್ಯಾಕ್ ಆಗಿದ್ದು, ಇನ್ನು ಮುಂದೆ ತನ್ನ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಕಂಪನಿ ಹೇಳಿದೆ.

Spyware maker LetMeSpy ceases operations

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸ್ಪೈವೇರ್ ಸಾಫ್ಟ್‌ವೇರ್​ (ಗೂಢಚಾರಿಕೆ ಸಾಫ್ಟ್‌ವೇರ್​) ತಯಾರಕ ಕಂಪನಿ ಲೆಟ್ ಮಿ ಸ್ಪೈ (LetMeSpy) ತನ್ನ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಹ್ಯಾಕರ್​ಗಳು ಕಂಪನಿಯ ಸರ್ವರ್​ಗಳನ್ನು ಹ್ಯಾಕ್ ಮಾಡಿ ಸರ್ವರ್​ನಲ್ಲಿದ್ದ ಸಂಪೂರ್ಣ ಡೇಟಾವನ್ನು ಡಿಲೀಟ್​ ಮಾಡಿದ ನಂತರ ಲೆಟ್ ಮಿ ಸ್ಪೈ ಕಂಪನಿಯನ್ನೇ ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಈ ಬಗ್ಗೆ ತನ್ನ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಿರುವ ಕಂಪನಿ, ಆಗಸ್ಟ್ ಅಂತ್ಯದ ವೇಳೆಗೆ ಸಂಪೂರ್ಣ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಬಳಕೆದಾರರು ಇನ್ನು ಮುಂದೆ ತನ್ನ ಸೇವೆಗಳಿಗೆ ಲಾಗಿನ್ ಆಗದಂತೆ ಅಥವಾ ಹೊಸ ಅಕೌಂಟ್​ ರಚಿಸದಂತೆ ಬ್ಲಾಕ್ ಮಾಡುತ್ತಿದೆ.

"ಜೂನ್ 21, 2023ರಂದು ನಡೆದ ಡೇಟಾ ಸುರಕ್ಷತೆಯ ಧಕ್ಕೆಯ ಘಟನೆಯಿಂದಾಗಿ, ಭದ್ರತಾ ಕಾರಣಗಳಿಗಾಗಿ ಬಳಕೆದಾರರ ಖಾತೆಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆ ದಿನಾಂಕದ ನಂತರ, ಲೆಟ್ ಮಿ ಸ್ಪೈ ಸೇವೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಜೊತೆಗೆ ಬಳಕೆದಾರರ ಖಾತೆಗಳಿಗೆ ಲಾಗ್ ಇನ್ ಮಾಡುವ ಮತ್ತು ಸೈಟ್​ನಲ್ಲಿ ಹೊಸ ಬಳಕೆದಾರ ಖಾತೆಗಳನ್ನು ನೋಂದಾಯಿಸುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ." ಎಂದು ಕಂಪನಿ ಹೇಳಿದೆ.

ಸದ್ಯ ಕಾರ್ಯನಿರ್ವಹಿಸದ ಲೆಟ್​ ಮಿ ಸ್ಪೈ ಲಾಗಿನ್ ಪುಟದಲ್ಲಿನ ಪ್ರತ್ಯೇಕ ಸೂಚನೆಯ ಪ್ರಕಾರ, ಕಂಪನಿಯ ಸರ್ವರ್​ಗಳನ್ನು ಹ್ಯಾಕ್ ಮಾಡಿರುವ ಹ್ಯಾಕರ್ ಅದರಲ್ಲಿನ ಡೇಟಾವನ್ನು ಸಹ ಅಳಿಸಿದ್ದಾರೆ ಎಂದು ಹೇಳಲಾಗಿದೆ.

ಹ್ಯಾಕಿಂಗ್​​ ಘಟನೆಯಲ್ಲಿ ಲೆಟ್​ ಮಿ ಸ್ಪೈ ವೆಬ್​ಸೈಟ್​​ನ ಡೇಟಾಬೇಸ್​ಗೆ ಪ್ರವೇಶ ಪಡೆಯಲಾಗಿದೆ, ಡೇಟಾ ಡೌನ್​ಲೋಡ್ ಮಾಡಲಾಗಿದೆ ಮತ್ತು ಡೇಟಾವನ್ನು ಅಳಿಸಲಾಗಿದೆ. ಬಳಕೆದಾರರ ಲಾಗಿನ್ ಇಮೇಲ್ ಐಡಿ, ಅವರ ಫೋನ್ ಕರೆಗಳ ಲಾಗ್​ಗಳು, ಎಸ್​ಎಂಎಸ್​ಗಳು ಮತ್ತು ಲೊಕೇಶನ್​​ ಡೇಟಾ ಹೀಗೆ ಎಲ್ಲ ಡೇಟಾಗೆ ಅನಧಿಕೃತವಾಗಿ ಹ್ಯಾಕರ್​ಗಳು ಪ್ರವೇಶ ಪಡೆದಿದ್ದಾರೆ ಎಂದು ಕಂಪನಿ ತಿಳಿಸಿದೆ.

ಲೆಟ್​ ಮಿ ಸ್ಪೈ ಎಂಬುದು ಒಬ್ಬರಿಗೆ ಗೊತ್ತಾಗದಂತೆ ಅವರ ಮೊಬೈಲ್​ನಲ್ಲಿ ಇನ್​ಸ್ಟಾಲ್ ಮಾಡಿ, ಅವರ ಫೋನ್​ನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ಗಮನಿಸಲು ಸಹಾಯ ಮಾಡುವ ಗೂಢಚಾರಿಕೆ ಆ್ಯಪ್ ಆಗಿದೆ. ಬಳಕೆದಾರರು ತಮ್ಮ ಯೂಸರ್​ ಅಕೌಂಟ್​ನಲ್ಲಿನ ಮಾಹಿತಿ ಪಡೆಯಲು ಬಯಸಿದರೆ ಅಂಥವರು ಸೆಪ್ಟೆಂಬರ್ 30, 2023ರೊಳಗೆ ವೈಯಕ್ತಿಕವಾಗಿ ಕಂಪನಿಯೊಂದಿಗೆ ಸಂಪರ್ಕ ಸಾಧಿಸಬೇಕೆಂದು ಕಂಪನಿ ಹೇಳಿದೆ.

ಮೊಬೈಲ್ ಸ್ಪೈವೇರ್ ಎಂಬುದು ಸ್ಮಾರ್ಟ್​​ಫೋನ್​ನಲ್ಲಿ ಇನ್​ಸ್ಟಾಲ್ ಮಾಡಬಹುದಾದ ಸಾಫ್ಟ್​ವೇರ್​ ಅಥವಾ ಅಪ್ಲಿಕೇಶನ್ ಆಗಿದ್ದು, ಇದು ಫೋ ನ್​ನಲ್ಲಿನ ಚಟುವಟಿಕೆಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಬೇರೊಬ್ಬರಿಗೆ ಅನುವು ಮಾಡಿಕೊಡುತ್ತದೆ. ಸ್ಪೈವೇರ್ ಪ್ರಕಾರವನ್ನು ಅವಲಂಬಿಸಿ ಇದು ಫೋನ್ ನಂಬರ್, ಕರೆ ದಿನಾಂಕ ಮತ್ತು ಸಮಯ, ಕಾಲ್ ಹಿಸ್ಟರಿ, SMS, ಕಾಂಟ್ಯಾಕ್ಟ್​​ಗಳು, ಇಂಟರ್ನೆಟ್ ಬ್ರೌಸಿಂಗ್, ಫೋನ್ ಲೊಕೇಶನ್, ಫೋನ್​ನಲ್ಲಿ ತೆಗೆದ ಫೋಟೋಗಳು, ಇಮೇಲ್ ಮುಂತಾದವುಗಳನ್ನು ಬೇರೊಬ್ಬರಿಗೆ ರವಾನಿಸುತ್ತದೆ.

ಇದನ್ನೂ ಓದಿ : Zuck vs Musk fight: ಜುಕರ್​ಬರ್ಗ್​ ವಿರುದ್ಧ ಕೇಜ್​ ಫೈಟ್​​ ಟ್ವಿಟರ್​ನಲ್ಲಿ ನೇರಪ್ರಸಾರ; ಮಸ್ಕ್​​ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.