ಸ್ಯಾನ್ ಫ್ರಾನ್ಸಿಸ್ಕೋ: ತಂತ್ರಜ್ಞಾನ ಕ್ಷೇತ್ರದ ಶತಕೊಟ್ಯಧಿಪತಿ ಎಲಾನ್ ಮಸ್ಕ್-ರನ್ ಒಡೆತನದ ಸ್ಪೇಸ್‌ಎಕ್ಸ್, ಸೆಪ್ಟೆಂಬರ್ 15 ರಂದು ತನ್ನ ಮೊದಲ ನಾಗರಿಕ ಅಭಿಯಾನ 'ಇನ್ಸ್‌ಪಿರೇಷನ್ 4' ಆರಂಭಿಸಲು ಸಜ್ಜಾಗಿದೆ.
'Inspiration4 and @SpaceX ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಉಡಾವಣೆಯ ಹಾದಿಯಲ್ಲಿದ್ದೇವೆ" ಎಂದು 'ಇನ್ಸ್‌ಪಿರೇಷನ್ 4' ಮಿಷನ್ ತಂಡ ಟ್ವೀಟ್ ಮಾಡಿದೆ.
ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಸ್ಪೇಸ್‌ಎಕ್ಸ್ ಇನ್ಸ್‌ಪಿರೇಷನ್ 4 ಹೆಸರಿನ ಚಾರಿಟಿ-ಚಾಲಿತ ಮಿಷನ್ ಘೋಷಿಸಿತು. ಇದಕ್ಕೆ ಉದ್ಯಮಿ ಜಾರೆಡ್ ಐಸಾಕ್‌ಮ್ಯಾನ್ ಸೇರಿ ಮೂವರು ನೇತೃತ್ವ ವಹಿಸಲಿದ್ದಾರೆ.
ಗಗನ ಯಾತ್ರಿಗಳು ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಪ್ರತಿ 90 ನಿಮಿಷಗಳಿಗೊಮ್ಮೆ ಕಸ್ಟಮೈಸ್ಡ್ ಫ್ಲೈಟ್ ಪಥದಲ್ಲಿ ಭೂ ಗ್ರಹವನ್ನು ಸುತ್ತುತ್ತಾರೆ. ಮೂರು ದಿನಗಳ ಪ್ರಯಾಣದ ನಂತರ, ಡ್ರ್ಯಾಗನ್ ಫ್ಲೋರಿಡಾ ಕರಾವಳಿಯಲ್ಲಿ ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸುತ್ತದೆ.
ಸೇಂಟ್ ಜೂಡ್ ಮಕ್ಕಳ ಸಂಶೋಧನಾ ಆಸ್ಪತ್ರೆಗೆ ಲಕ್ಷಾಂತರ ಹಣವನ್ನು ಸಂಗ್ರಹಿಸುವ ಪ್ರಯತ್ನದ ಭಾಗವಾಗಿ ಬಿಲಿಯನೇರ್ ಇಸಾಕ್‌ಮ್ಯಾನ್ ಈ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. 'ಇನ್ಸ್‌ಪಿರೇಷನ್ 4' ಸೆಪ್ಟೆಂಬರ್ 15 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ನಾಸಾದ ಪ್ಯಾಡ್ 39 ಎ ನಿಂದ ಉಡಾವಣೆಯಾಗಲಿದೆ. ಉಡಾವಣೆಗೆ ಕೆಲವೇ ದಿನಗಳ ಮೊದಲು ನಿಖರವಾದ ಲಿಫ್ಟಾಫ್ ಸಮಯವನ್ನು ನಿರ್ಧರಿಸಲಾಗುತ್ತದೆ ಎಂದು ವರದಿ ಹೇಳಿದೆ.
ಇಸಾಕ್‌ಮ್ಯಾನ್, ಆರ್ಸೆನ್ಯಾಕ್ಸ್, ಪ್ರೊಕ್ಟರ್ ಮತ್ತು ಸೆಂಬ್ರೋವ್ಸ್ಕಿ ಅವರು ಸೆಪ್ಟೆಂಬರ್ 9 ರಂದು ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಆಗಮಿಸಲಿದ್ದು ಎಂದು ವರದಿ ತಿಳಿಸಿದೆ. ಕಂಪನಿಯ Ax-1 ಮಿಷನ್, 2021 ರ ಅಂತ್ಯದ ವೇಳೆಗೆ ಯೋಜಿಸಲಾಗಿದೆ. ನಾಲ್ಕು ಖಾಸಗಿ ಗಗನಯಾತ್ರಿಗಳ ಸಿಬ್ಬಂದಿಗೆ ಐಎಸ್ಎಸ್ಗೆ ಎಂಟು ದಿನಗಳ ಪ್ರವಾಸಕ್ಕಾಗಿ ತಲಾ 55 ಮಿಲಿಯನ್ ಡಾಲರ್ ಪಾವತಿಸುತ್ತದೆ.
2018ರಲ್ಲಿ, ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಅವರು ಸ್ಪೇಸ್‌ಎಕ್ಸ್‌ನ ಹೊಸ ರಾಕೆಟ್ ಸಿಸ್ಟಮ್ ಸ್ಟಾರ್‌ಶಿಪ್‌ನಲ್ಲಿ ಚಂದ್ರನ ಸುತ್ತ ಸವಾರಿ ಮಾಡುವುದಾಗಿ ಘೋಷಿಸಿದ್ದರು. ಇದು ಅಭಿವೃದ್ಧಿಯಲ್ಲಿದೆ.