ETV Bharat / science-and-technology

Smartphones & Children: ಮಕ್ಕಳ ಸ್ಮಾರ್ಟ್​ಫೋನ್ ಬಳಕೆಗೆ ಕಡಿವಾಣ; ಚೀನಾ ಸರ್ಕಾರದ ಹೊಸ ನಿಯಮ - Smartphones Children Curb on smartphone use

Smartphones & Children: ಚಿಕ್ಕಮಕ್ಕಳು ಸ್ಮಾರ್ಟ್​ ಫೋನ್ ಬಳಸುವ ಅವಧಿಗೆ ಕಡಿವಾಣ ಹಾಕಲು ಚೀನಾ ಸರ್ಕಾರ ನಿಯಮಗಳನ್ನು ರೂಪಿಸುತ್ತಿದೆ.

china considers limiting kids phone use
china considers limiting kids phone use
author img

By

Published : Aug 3, 2023, 12:40 PM IST

ಹಾಂಗ್ ಕಾಂಗ್ : ಮಕ್ಕಳು ಪ್ರತಿದಿನ ಸ್ಮಾರ್ಟ್​ಫೋನ್ ಬಳಸುವ ಅವಧಿಗೆ ಕಡಿವಾಣ ಹಾಕಲು ಚೀನಾ ಸರ್ಕಾರ ಮುಂದಾಗಿದೆ. ಸ್ಮಾರ್ಟ್​ಫೋನ್​ನಲ್ಲಿ "ಮೈನರ್ ಮೋಡ್" ಮೂಲಕ ಮಕ್ಕಳು ಸ್ಮಾರ್ಟ್‌ಫೋನ್ ಸ್ಕ್ರೀನ್ ನೋಡುವ ಸಮಯವನ್ನು ಅವರ ವಯಸ್ಸಿನ ಆಧಾರದ ಮೇಲೆ ಮಿತಿಗೊಳಿಸುವ ನಿಯಮಗಳನ್ನು ಚೀನಾದ ಸೈಬರ್‌ಸ್ಪೇಸ್ ನಿಯಂತ್ರಕ ಪ್ರಾಧಿಕಾರವು ಪ್ರಸ್ತಾಪಿಸಿದೆ.

ಮಕ್ಕಳ ಮೊಬೈಲ್ ಬಳಕೆ ಸಮಯಕ್ಕೆ ಮಿತಿ ವಿಧಿಸಲು ವಯಸ್ಸಿನ ವರ್ಗೀಕರಣ ವಿನ್ಯಾಸವನ್ನು ಐದು ವಯಸ್ಸಿನ ಮಧ್ಯಂತರಗಳಾಗಿ ವಿಂಗಡಿಸಲಾಗಿದೆ ಎಂದು ಚೀನಾದ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ (CAC) ಬುಧವಾರದಂದು ಘೋಷಿಸಿದೆ.

ಐದು ವಿಭಾಗಗಳಾಗಿ ವಿಂಗಡನೆ:-

1. 3 ವರ್ಷದೊಳಗಿನವರು; 3 ವರ್ಷಕ್ಕಿಂತ ಮೇಲ್ಪಟ್ಟವರು

2. 8 ವರ್ಷಕ್ಕಿಂತ ಕಡಿಮೆ ವಯಸ್ಸಿನವರು; 8 ವರ್ಷಕ್ಕಿಂತ ಮೇಲ್ಪಟ್ಟವರು

3. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು; 12 ವರ್ಷಕ್ಕಿಂತ ಮೇಲ್ಪಟ್ಟವರು.

4. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 16 ವರ್ಷಕ್ಕಿಂತ ಮೇಲ್ಪಟ್ಟವರು

5. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದಿನಕ್ಕೆ 40 ನಿಮಿಷ ಮೊಬೈಲ್​ ಬಳಕೆಗೆ ಅವಕಾಶ: "8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೈನರ್ ಮೋಡ್‌ನಲ್ಲಿ, ಒಟ್ಟು 40 ನಿಮಿಷಗಳಿಗಿಂತ ಹೆಚ್ಚು ಮೊಬೈಲ್ ಬಳಸುವಂತಿಲ್ಲ ಮತ್ತು ಪೋಷಕರು ಬೇಕಾದರೆ ಆ ಮೊಬೈಲ್ ತಮಗಾಗಿ ಬಳಸಬಹುದು" ಎಂದು CAC ಹೇಳಿದೆ. 8 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 16 ವರ್ಷದೊಳಗಿನ ಮಕ್ಕಳು ಒಂದು ಗಂಟೆಯ ಕಾಲ ಮೊಬೈಲ್ ಬಳಸಬಹುದು.

ನಿಗದಿತ ಸಮಯಕ್ಕಿಂತ ಹೆಚ್ಚಿಗೆ ನೋಡಿದರೆ, ಅಲರ್ಟ್ ಗೆ ಸೂಚನೆ:​​ ಇದಲ್ಲದೇ, 16 ವರ್ಷಕ್ಕಿಂತ ಮೇಲ್ಪಟ್ಟ ಆದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರಿಗೆ ಸ್ಕ್ರೀನ್ ಸಮಯವನ್ನು ಎರಡು ಗಂಟೆಗಳವರೆಗೆ ಸೀಮಿತಗೊಳಿಸಲಾಗಿದೆ. ಅಪ್ರಾಪ್ತ ಬಳಕೆದಾರರು 30 ನಿಮಿಷಗಳಿಗಿಂತ ಹೆಚ್ಚು ಕಾಲ ಮೊಬೈಲ್ ಅನ್ನು ನಿರಂತರವಾಗಿ ಬಳಸಿದರೆ, ಮೊಬೈಲ್​ನಲ್ಲಿ ಅಳವಡಿಸಲಾದ ಮೊಬೈಲ್ ಸ್ಮಾರ್ಟ್ ಟರ್ಮಿನಲ್ ಸ್ಕ್ರೀನ್ ನೋಡುವುದನ್ನು ಇನ್ನು ನಿಲ್ಲಿಸುವಂತೆ ಜ್ಞಾಪಿಸಬೇಕೆಂದು CAC ತಿಳಿಸಿದೆ.

ಸ್ಮಾರ್ಟ್ ಟರ್ಮಿನಲ್‌ಗಳ ಮೂಲಕ ನಿಯಂತ್ರಣಕ್ಕೆ ವ್ಯವಸ್ಥೆ: ಅಲ್ಲದೆ, ಮೈನರ್ ಮೋಡ್‌ನಲ್ಲಿ ಅಪ್ರಾಪ್ತ ವಯಸ್ಕರಿಗೆ ರಾತ್ರಿ 10 ರಿಂದ ಬೆಳಗಿನ 6 ಗಂಟೆಯವರೆಗೆ ಸ್ಕ್ರೀನ್ ಬಳಸಲು ಸಾಧ್ಯವಾಗದಂತೆ ಮೊಬೈಲ್ ಸ್ಮಾರ್ಟ್ ಟರ್ಮಿನಲ್‌ಗಳು ನಿಯಂತ್ರಿಸುತ್ತವೆ. "ಮೊಬೈಲ್ ಇಂಟರ್ನೆಟ್ ಮಾಹಿತಿ ಸೇವಾ ಪೂರೈಕೆದಾರರು ತಮ್ಮ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ಮೈನರ್ ಮೋಡ್ ಅಡಿಯಲ್ಲಿ, ಸಣ್ಣ ವಯಸ್ಸಿನ ಬಳಕೆದಾರರಿಗೆ ಚಟವನ್ನು ಪ್ರೇರೇಪಿಸುವ ಅಥವಾ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾದ ಸಂಬಂಧಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಯಾವುದೇ ವಿಷಯ ಇರಕೂಡದು" ಎಂದು CAC ವಿವರಿಸಿದೆ.

ಪೋಷಕರು ಅನುಮೋದಿಸಿದ ಮತ್ತು ವಿನಾಯಿತಿ ಪಡೆದ ಸಂದರ್ಭಗಳನ್ನು ಹೊರತುಪಡಿಸಿ, ಬಾಹ್ಯ ಲಿಂಕ್‌ಗಳ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಬೇಕು ಎಂದು ನಿಯಂತ್ರಕ ಪ್ರಾಧಿಕಾರ ತಿಳಿಸಿದೆ.

5 ಅಥವಾ 10 ವರ್ಷಗಳ ಹಿಂದಿನ ಸಮಯಕ್ಕೆ ಹೋಲಿಸಿದರೆ ಇತ್ತೀಚೆಗೆ ಅತ್ಯಧಿಕ ಮಕ್ಕಳು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಪ್ಯೂ ರಿಸರ್ಚ್ ಸೆಂಟರ್‌ನ 2020 ರ ಸಮೀಕ್ಷೆಯ ಪ್ರಕಾರ ಶೇಕಡಾ 60 ರಷ್ಟು ಮಕ್ಕಳು 5 ವರ್ಷಕ್ಕಿಂತ ಮುಂಚೆಯೇ ಸ್ಮಾರ್ಟ್‌ಫೋನ್‌ಗಳನ್ನು ಬಳಸಲು ಆರಂಭಿಸುತ್ತಿದ್ದಾರೆ. ಈ ವಯೋಮಾನದ ಮಕ್ಕಳ ಪೈಕಿ ಶೇಕಡಾ 31 ರಷ್ಟು ಮಕ್ಕಳು 2 ವರ್ಷ ವಯಸ್ಸಿಗೂ ಮುಂಚೆಯೇ ಮೊಬೈಲ್ ಜೊತೆ ಆಟವಾಡಲು ಆರಂಭಿಸುತ್ತಿದ್ದಾರೆ. ಹೀಗಾಗಿ ಚೀನಾ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ಮುಂದಾಗಿದೆ.

ಇದನ್ನೂ ಓದಿ : ಜೂನ್​ನಲ್ಲಿ 66 ಲಕ್ಷ ಖಾತೆಗಳನ್ನು ರದ್ದುಗೊಳಿಸಿದ WhatsApp

ETV Bharat Logo

Copyright © 2024 Ushodaya Enterprises Pvt. Ltd., All Rights Reserved.