ಸಿಡ್ನಿ(ಆಸ್ಟ್ರೇಲಿಯಾ): ಗೂಗಲ್ ಪ್ಲೇ ಮತ್ತು ಯೂಟ್ಯೂಬ್ನಲ್ಲಿ ಕೆಲವೊಂದನ್ನು ವೀಕ್ಷಿಸಬೇಕಾದರೆ, ನಿಮಗೆ 18 ವರ್ಷ ವಯಸ್ಸಾಗಿರಬೇಕು. ನೀವು 'ನನಗೆ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾಗಿದೆ' ಎಂಬ ಆಯ್ಕೆಯನ್ನು ಒತ್ತಿದ ನಂತರವಷ್ಟೇ ಕೆಲವು 'ವಯಸ್ಕ' ಕಂಟೆಂಟ್ಗಳನ್ನು ನೋಡಲು ಅವಕಾಶವಿರುತ್ತದೆ. ವಯಸ್ಕನಲ್ಲದ ಬಾಲಕ ಕೂಡಾ ತನಗೆ 18 ವರ್ಷ ವಯಸ್ಸಾಗಿದೆ ಎಂಬ ಆಯ್ಕೆಯನ್ನು ಒತ್ತಿ 'ವಯಸ್ಕ' ಕಂಟೆಂಟ್ಗಳನ್ನು ನೋಡುವ ಸಾಧ್ಯತೆ ದಟ್ಟವಾಗಿರುತ್ತದೆ. ಇದನ್ನು ತಡೆಯಲು ಗೂಗಲ್ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಇನ್ಮುಂದೆ ಪಾಸ್ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಇನ್ನಿತರ ಗುರುತಿನ ಚೀಟಿ ಅನ್ನು ಒದಗಿಸಿದ ನಂತರವಷ್ಟೇ 'ವಯಸ್ಕ' ಕಂಟೆಂಟ್ ಅನ್ನು ನೋಡಲು ಬಳಕೆದಾರರಿಗೆ ಅವಕಾಶ ನೀಡಲು ಗೂಗಲ್ ಶೀಘ್ರದಲ್ಲೇ ನಿಯಮ ಜಾರಿಗೊಳಿಸುವುದಾಗಿ ಹೇಳಿಕೊಂಡಿದೆ. ಈ ನಿಯಮ ಜಾರಿಗೊಳ್ಳುವುದು ಭಾರತದಲ್ಲಿ ಅಲ್ಲ ಬದಲಿಗೆ ಆಸ್ಟ್ರೇಲಿಯಾದಲ್ಲಿ.
18 ವರ್ಷ ಮೇಲ್ಪಟ್ಟವರಿಗೆ ಅವರ ನೀಡಿರುವ ಇಮೇಲ್ ಐಡಿಗಳ ಆಧಾರದ ಮೇಲೆ ವಯಸ್ಕ ಕಂಟೆಂಟ್ಗಳನ್ನು ನೋಡಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೂ ಅವರು ವೀಕ್ಷಿಸಲು ಸಾಧ್ಯವಾಗದಿದ್ದರೆ, ಸರ್ಕಾರದಿಂದ ಅನುಮೋದಿಸಲ್ಪಟ್ಟ ಯಾವುದಾದರೂ ಗುರುತಿನ ಚೀಟಿ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಪರಿಶೀಲನೆ ನೀಡಬೇಕಾಗುತ್ತದೆ ಎಂದು ಗೂಗಲ್ ಹೇಳಿದೆ.
ಇದನ್ನೂ ಓದಿ: ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ಹೆಚ್ಚಳ: ಸರ್ಕಾರದಿಂದ ವಿಶೇಷ ಉತ್ತೇಜನ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೂಗಲ್ನ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿಯ ಹಿರಿಯ ವ್ಯವಸ್ಥಾಪಕರಾದ ಸಮಂತಾ ಯಾರ್ಕ್ 'ಮುಂಬರುವ ತಿಂಗಳಿನಿಂದ ಯೂಟ್ಯೂಬ್ ಮತ್ತು ಗೂಗಲ್ ಪ್ಲೆ ವಿಭಾಗದಲ್ಲಿ ಹೊಸ ನೀತಿಯನ್ನು ಪರಿಚಯಿಸುತ್ತಿದ್ದೇವೆ' ಎಂದಿದ್ದಾರೆ.
ಇದು 18 ವರ್ಷದೊಳಗಿನ ಬಳಕೆದಾದರಿಗೆ ಸೂಕ್ತವಲ್ಲದ ಕಂಟೆಂಟ್ಗಳಿಗೆ ಅವಕಾಶ ನೀಡಬಾರದೆಂದು 'ಆಸ್ಟ್ರೇಲಿಯನ್ ಆನ್‌ಲೈನ್ ಸುರಕ್ಷತೆ ಘೋಷಣೆ'ಯಲ್ಲಿ ಉಲ್ಲೇಖಿಸಲಾಗಿದ್ದು, ಇದಕ್ಕಾಗಿ ಸಮಂಜಸ ಕ್ರಮಗಳನ್ನು ತೆಗೆದುಕೊಳ್ಳಲು ಈ ನಿಯಮ ರೂಪಿಸಲಾಗಿದೆ ಎಂದು ಸಮಂತಾ ಯಾರ್ಕ್ ಹೇಳಿದ್ದಾರೆ.