ಹೈದರಾಬಾದ್: ರೋಗಲಕ್ಷಣಗಳು ಕಾಣಿಸಿಕೊಳ್ಳುವ ಕೆಲವು ದಿನಗಳ ಮೊದಲೇ ಆನ್-ದಿ-ಸ್ಪಾಟ್ ಲಾಲಾರಸ ಪರೀಕ್ಷೆಯು ಕೋವಿಡ್-19ನ್ನು ಪತ್ತೆ ಮಾಡುತ್ತದೆ.
ರೋಗಲಕ್ಷಣಗಳು ಪತ್ತೆಯಾಗುವ ಮೊದಲು ನಡೆಸಲಾಗುವ ಸಾಮೂಹಿಕ ಪರೀಕ್ಷೆಯು ಕೋವಿಡ್-19 ಪತ್ತೆಹಚ್ಚುವಿಕೆಯನ್ನು ಹೆಚ್ಚಿಸಲು, ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ಸುಧಾರಿಸಲು ಮತ್ತು ರೋಗದ ನಿರ್ವಹಣೆಯಲ್ಲಿ ಪ್ರಮುಖವಾದುದು.
ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ವಿಜ್ಞಾನಿಗಳು (ಯುಟಿಎಸ್) SARS-CoV-2 ವೈರಸ್ ಪತ್ತೆಹಚ್ಚಲು ಸೂಕ್ಷ್ಮವಾದ ಲಾಲಾರಸ ಪರೀಕ್ಷೆಯನ್ನು ವಿನ್ಯಾಸಗೊಳಿಸಲು ಆಪ್ಟಿಕಲ್ ತಂತ್ರಜ್ಞಾನವನ್ನು ಬಳಸಿದ್ದಾರೆ. ಪರೀಕ್ಷೆಯು 15 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡುತ್ತದೆ.
ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಬಳಸಲಾಗುವ ಸಾಧನದಲ್ಲಿ ಇರಿಸಲಾಗಿರುವ ಕಾರ್ಟ್ರಿಡ್ಜ್‌ನಲ್ಲಿ ಲಾಲಾರಸವನ್ನು ಸಂಗ್ರಹಿಸುತ್ತದೆ. ಇದನ್ನು ಮೊದಲು ಪಶ್ಚಿಮ ಆಸ್ಟ್ರೇಲಿಯಾದ ಕಂಪನಿ ಅಲ್ಕೋಲೈಜರ್ ಅಕ್ರಮ ಡ್ರಗ್ ಪರೀಕ್ಷೆಗಾಗಿ ಅಭಿವೃದ್ಧಿಪಡಿಸಿದೆ.
ಕಸ್ಟಮೈಸ್ ಮಾಡಿದ ಐಸ್ಟ್ರಿಪ್ ತಂತ್ರಜ್ಞಾನವು ಲಾಲಾರಸದ ಮಾದರಿಯಲ್ಲಿ ವೈರಲ್ ಲೋಡ್ ಕಡಿಮೆ ಮಟ್ಟದಲ್ಲಿದ್ದರೂ ಅಳೆಯುತ್ತದೆ ಮತ್ತು ಫಲಿತಾಂಶವನ್ನು ಉಪಕರಣದ ಸಣ್ಣ ಪರದೆಯಲ್ಲಿ ತೋರಿಸುತ್ತದೆ.
ಈ ಸಾಧನವು ಜಿಪಿಎಸ್ ಲೊಕೇಶನ್ ತಂತ್ರಜ್ಞಾನ ಮತ್ತು ಸಂಪರ್ಕ ಪತ್ತೆಹಚ್ಚುವಿಕೆಗೆ ಸಹಾಯ ಮಾಡಲು ಕ್ಲೌಡ್ ರಿಪೋರ್ಟಿಂಗ್ ಪರಿಕರಗಳೊಂದಿಗೆ ಇಂಟಿಗ್ರೇಟ್ ಆಗಿವೆ.