ETV Bharat / science-and-technology

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್: ವಿದ್ಯಾರ್ಥಿ ಪ್ರತಿಭೆಗೆ ಮೋದಿ ಫಿದಾ, IPS ತರಬೇತಿ ಸಂಸ್ಥೆ ಜತೆ ಸಂವಹನ ಆಫರ್ - ಎಐಸಿಟಿಇ

ಸಾಮಾನ್ಯ ಜನರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ತಂತ್ರಜ್ಞಾನದ ಆವಿಷ್ಕಾರ, ಆ್ಯಪ್‌ಗಳ ಅಭಿವೃದ್ಧಿಗೆ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌’ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು 2017ರಿಂದ ಕೇಂದ್ರ ಸರ್ಕಾರ ಆಯೋಜಿಸಿಕೊಂಡು ಬರುತ್ತಿದೆ. ಮುಖ್ಯವಾಗಿ ಇದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಇಂದು ಸಂಜೆ ಸಂವಾದ ನಡೆಸಿದರು.

Pm Modi
ಪ್ರಧಾನಿ ಮೋದಿ
author img

By

Published : Aug 1, 2020, 6:37 PM IST

Updated : Feb 16, 2021, 7:31 PM IST

ನವದೆಹಲಿ: ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ ಸ್ಪರ್ಧೆಯ ಅಂತಿಮ ಸುತ್ತಿನಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅಪರಾಧ ಪ್ರಕರಣಗಳನ್ನು ತಗ್ಗಿಸುವಂತಹ ಸಾಧನವೊಂದನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗೆ, ಐಪಿಎಸ್​ ತರಬೇತಿ ನೀಡುವ ಸಂಸ್ಥೆಯೊಂದಿಗೆ ಸಂವಹನ ನಡೆಸುವ ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿದರು.

ಹೈದರಾಬಾದ್‌ನ ಎಂಎಲ್‌ಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ಹಂಚಿಕೊಂಡಿರುವ ವಿಚಾರಗಳಿಂದ ಪ್ರಭಾವಿತರಾದ ಮೋದಿ, ಹೈದರಾಬಾದ್‌ನ ಐಪಿಎಸ್ ತರಬೇತಿ ಸಂಸ್ಥೆಯ ಕೆಲವು ಜನರನ್ನು ನಿಮ್ಮ ತಂಡಕ್ಕೆ ಕರೆ ಮಾಡಿ ಕೇಳಿಕೊಳ್ಳುತ್ತೇನೆ. ಈ ವಿಚಾರಗಳ ಕುರಿತು ಸಂವಾದ ನಡೆಸಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಅವರೊಂದಿಗೆ ಸಂವಹನ ನಡೆಸಲು ವಿದ್ಯಾರ್ಥಿಗಳನ್ನು ಕೇಳಿದರು.

ಎರ್ನಾಕುಲಂನಲ್ಲಿ ಕುಳಿತು ನೀವು ಈಶಾನ್ಯ ಭಾರತೀಯರ ಸಮಸ್ಯೆಗಳನ್ನು ಪರಿಹರಿಸುವ ಉತ್ಪನ್ನಗಳನ್ನು ರಚಿಸುತ್ತಿದ್ದೀರಿ. ಇದು ಏಕ್ ಭಾರತ್ ಶ್ರೇಷ್ಠ ಭಾರತ ಕಲ್ಪನೆಗೆ ಶಕ್ತಿಯನ್ನು ನೀಡುತ್ತದೆ. ಕಡಿಮೆ ಸಂಪರ್ಕದ ಸಮಸ್ಯೆಗಳನ್ನು ಸುಧಾರಿಸಲು ಪರಿಹಾರ ರಚಿಸಿದ ವಿದ್ಯಾರ್ಥಿಯೊಬ್ಬರ ಕುರಿತು ಹೇಳಿದರು.

ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಲು ಶಾಲೆಗಳು, ಪೊಲೀಸ್ ನಿಯಂತ್ರಣ ಕೊಠಡಿ ಜೋಡಿಸುವಂತಹ ರಿಯಲ್​ ಟೈಮ್​ ಟ್ರ್ಯಾಕಿಂಗ್ ಮತ್ತು ಎಚ್ಚರಿಕೆ ವ್ಯವಸ್ಥೆಯನ್ನು ನೀವು ರಚಿಸಬಹುದೇ ಎಂದು ಪ್ರಧಾನಿ ಮೋದಿ, ಅಪರಾಧ ತಗ್ಗಿಸುವ ಪರಿಹಾರ ರಚಿಸಿದ ಎಂಎಲ್ಆರ್ ಸಂಸ್ಥೆಯ ವಿದ್ಯಾರ್ಥಿಯನ್ನು ಕೇಳಿದರು.

ನಿಮ್ಮೊಂದಿಗೆ ಸಂವಹನ ನಡೆಸುವಂತೆ ನಾನು ಐಪಿಎಸ್ ತರಬೇತಿ ನೀಡುವ ಸಂಸ್ಥೆಯನ್ನು ಕೇಳುತ್ತೇನೆ. ಈ ಆ ಬಳಿಕ ನೀವು ಈ ಜನರೊಂದಿಗೆ ನಿಮ್ಮ ಪ್ರೆಸಂಟೇಷನ್​ ನೀಡಿ. ನೀವು ನಿಮ್ಮ ಸುತ್ತಲ್ಲಿನ ಜನರೊಂದಿಗೆ ಸಂವಹನ ನಡೆಸಬೇಕು. ಇದು ನಿಮ್ಮ ಉತ್ಪನ್ನ ಬಳಕೆದಾರರನ್ನು ಸ್ನೇಹಪರವಾಗಿಸಲು ಮತ್ತು ಅದನ್ನು ಉತ್ತಮವಾಗಿ ತಲುಪಲು ನೆರವಾಗುತ್ತದೆ ಎಂದು ಪೊಲೀಸರಿಗೆ ನೆರವಾಗುವಂತಹ ಉತ್ಪನ್ನಗಳನ್ನು ರಚಿಸಿದ ಎಂಎಲ್ಆರ್ ಇನ್​ಸ್ಟಿಟ್ಯೂಟ್​ ವಿದ್ಯಾರ್ಥಿಗೆ ಮೋದಿ ಸಲಹೆ ಕೊಟ್ಟರು.

ಕಾರ್ಪೊರೇಟ್‌ಗಳ ಕಾರ್ಯಕ್ಷಮತೆ ವೃದ್ಧಿಸುವಂತೆ ಮಾಡಲು ವಿದ್ಯಾರ್ಥಿಗಳ ತಂಡವು ಡೇಟಾ-ಚಾಲಿತ ಪರಿಹಾರ ಅಭಿವೃದ್ಧಿಪಡಿಸಿತ್ತು. ತಮ್ಮ ಉತ್ಪನ್ನದ ಬಗ್ಗೆ ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಂಡು ಸಶಕ್ತಗೊಳಿಸುವವರು ಇದ್ದಾರಾ? ಎಂದು ವಿದ್ಯಾರ್ಥಿಗಳು ಕೇಳಿದರು. ಇದಕ್ಕೆ ಸರ್ಕಾರದಲ್ಲೂ ಅರ್ಜಿಗಳಿವೆಯೇ? ಎಂದು ಪ್ರಧಾನಿ ವಿಚಾರಿಸಿದರು.

ಈ ಸ್ಪರ್ಧೆಯನ್ನು ನಡೆಸುವುದು ನೀವು ಪರಿಹರಿಸಿದ ಮೊದಲ ಸವಾಲು. ನೀವು ಎದುರಿಸುತ್ತಿರುವ ಸವಾಲುಗಳು, ಅವುಗಳ ಬಗ್ಗೆ ತಿಳಿದುಕೊಳ್ಳಲು ನನಗೆ ಕುತೂಹಲವಿದೆ. ಪ್ರತಿಯೊಂದು ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳುವುದು ಮತ್ತು ಅವುಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಯೋಚಿಸುವುದು ಅತ್ಯಗತ್ಯವಾಗಿದೆ. ನಮ್ಮ ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ನಾವೀನ್ಯತೆಗೆ ಶಕ್ತಿ ಇದೆ ಎಂದರು.

ನಮ್ಮ ಸೌಲಭ್ಯಗಳ ಪರಿಣಾಮಕಾರಿ, ಸಂವಾದಾತ್ಮಕ ಮತ್ತು ಜನರಿಗೆ ಸ್ನೇಹಪರವಾಗಿಸಲು ಕೃತಕ ಬುದ್ಧಿಮತ್ತೆ ಒಂದು ದೊಡ್ಡ ಅನುಕೂಲಕಾರ ಅಸ್ತ್ರ ಆಗಬಲ್ಲದು. ಭಾರತದಲ್ಲಿ ಮಹಿಳೆಯರ ನೈರ್ಮಲ್ಯದ ಬಗೆಗಿನ ಜಾಗೃತಿಯು ನಿಜವಾಗಿಯೂ ತಡವಾಗಿದೆ. ಕಳೆದ ಆರು ವರ್ಷಗಳಲ್ಲಿ ಮಹಿಳೆಯರು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸರ್ಕಾರವು ಮಹಿಳೆಯರಿಗೆ ಕೈಗೆಟುಕುವ ಜೈವಿಕ ವಿಘಟನೀಯ ಪ್ಯಾಡ್‌ಗಳನ್ನು ಒದಗಿಸುತ್ತಿದೆ. ಮಹಿಳೆಯರಿಗೆ ಮರುಬಳಕೆ ಮಾಡಬಹುದಾದ ಮುಟ್ಟಿನ ನೈರ್ಮಲ್ಯ ಉತ್ಪನ್ನದ ಕುರಿತು ಪ್ರಧಾನಿ ಮೋದಿ ಹೇಳಿದರು.

Last Updated : Feb 16, 2021, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.