ಹೈದರಾಬಾದ್: ಖ್ಯಾತ ಡಿಆರ್‌ಡಿಒ ವಿಜ್ಞಾನಿ ಮತ್ತು ನಾಗ್ ಕ್ಷಿಪಣಿ ಕಾರ್ಯಕ್ರಮದ ಮಾಜಿ ಯೋಜನಾ ನಿರ್ದೇಶಕ ಎಸ್.ಎಸ್.ಮಿಶ್ರಾ (72) ಇಂದು ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ.
ಯುದ್ಧ ಟ್ಯಾಂಕ್ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಇರುವ ನಾಗ್ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿತ್ತು. ಕ್ಷಿಪಣಿಯ ಪರೀಕ್ಷೆಯೂ ಯಶಸ್ವಿಯಾಗಿದ್ದು, ಸೇನೆಗೆ ಸೇರಲು ಸಜ್ಜಾಗಿದೆ. ನಾಗ್ ಕ್ಷಿಪಣಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಮಿಶ್ರಾ ಪಾತ್ರ ಬಹಳಷ್ಟಿದೆ.
ಇದನ್ನೂ ಓದಿ: ದೇಶದ ಜನರಿಗೆ 'ಕೊರೊನಾ ವ್ಯಾಕ್ಸಿನ್' ಉಚಿತವಾಗಿ ಸಿಗಲಿ: ಟ್ವೀಟ್ ಮೂಲಕ ಕೇಜ್ರಿವಾಲ್ ಮನವಿ!
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.