ETV Bharat / science-and-technology

ವಿಜ್ಞಾನ-ನಂಬಿಕೆ ಎರಡೂ ವಿಭಿನ್ನ ವಿಷಯಗಳು; ಇಸ್ರೊ ಅಧ್ಯಕ್ಷ ಸೋಮನಾಥ್ - Science faith are two different things

ವಿಜ್ಞಾನ ಮತ್ತು ನಂಬಿಕೆ ಎರಡೂ ವಿಭಿನ್ನ ವಿಷಯಗಳಾಗಿವೆ ಎಂದು ಇಸ್ರೊ ಅಧ್ಯಕ್ಷ ಎಸ್​. ಸೋಮನಾಥ್ ಹೇಳಿದ್ದಾರೆ.

Science and belief are two different entities

author img

By ETV Bharat Karnataka Team

Published : Aug 27, 2023, 3:56 PM IST

ಚೆನ್ನೈ : ವಿಜ್ಞಾನ ಮತ್ತು ನಂಬಿಕೆ ಎರಡೂ ವಿಭಿನ್ನ ವಿಷಯಗಳಾಗಿದ್ದು, ಎರಡನ್ನೂ ಬೆರೆಸುವ ಅಗತ್ಯವಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ಅವರು ಭಾನುವಾರ ಶ್ರೀ ಪೂರ್ಣಿಮಿಕವು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ ಇಸ್ರೋ ಮುಖ್ಯಸ್ಥರು ತಿರುವನಂತಪುರಂಗೆ ಭೇಟಿ ನೀಡಿದ್ದಾರೆ. ಚಂದ್ರನ ಮೇಲೆ ಲ್ಯಾಂಡರ್​ ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಹೆಸರಿಸುವ ಬಗ್ಗೆ ಯಾವುದೇ ವಿವಾದವಿಲ್ಲ ಮತ್ತು ಈ ಸ್ಥಳಕ್ಕೆ ಹೆಸರಿಡುವ ಹಕ್ಕು ನಮ್ಮ ರಾಷ್ಟ್ರಕ್ಕೆ ಇದೆ ಎಂದು ಎಸ್ ಸೋಮನಾಥ್ ಹೇಳಿದರು. ಇತರ ಹಲವಾರು ದೇಶಗಳು ಚಂದ್ರನ ಮೇಲೆ ತಮ್ಮ ಹೆಸರುಗಳನ್ನು ಇಟ್ಟಿವೆ ಮತ್ತು ಇದು ಯಾವಾಗಲೂ ಸಂಬಂಧಪಟ್ಟ ರಾಷ್ಟ್ರದ ವಿಶೇಷಾಧಿಕಾರವಾಗಿದೆ ಎಂದು ವಿಜ್ಞಾನಿ ಸೋಮನಾಥ್ ಹೇಳಿದರು.

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತವಾಗಿದೆ. ದಕ್ಷಿಣ ಧ್ರುವದಲ್ಲಿ ಚಂದ್ರನ ಮೇಲ್ಮೈ ಪರ್ವತಗಳು ಮತ್ತು ಕಣಿವೆಗಳಿಂದ ತುಂಬಿದ್ದು ತುಂಬಾ ಜಟಿಲವಾಗಿದೆ. ಲೆಕ್ಕಾಚಾರದಲ್ಲಿನ ಸಣ್ಣದೊಂದು ದೋಷ ಕೂಡ ಮಿಷನ್​ನಲ್ಲಿನ ಲ್ಯಾಂಡರ್ ವಿಫಲವಾಗಲು ಕಾರಣವಾಗಬಹುದಾಗಿತ್ತು ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

ಚಂದ್ರನ ಮೇಲ್ಮೈ ಖನಿಜಗಳಿಂದ ಸಮೃದ್ಧವಾಗಿರುವುದರಿಂದ ಇಸ್ರೋ ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದೆ. ರೋವರ್ ಚಂದ್ರನ ಮೇಲ್ಮೈಯಿಂದ ಸರಿಯಾದ ಪ್ರತಿಕ್ರಿಯೆ ನೀಡಿದ ನಂತರ ವಿಜ್ಞಾನಿಗಳು ಅದನ್ನು ವೇಗಗೊಳಿಸಲಿದ್ದಾರೆ ಎಂದು ಅವರು ಹೇಳಿದರು. ರಷ್ಯಾದ ಮಿಷನ್ 2021 ರಲ್ಲಿ ಪೂರ್ಣಗೊಳ್ಳಬೇಕಿತ್ತು ಮತ್ತು ಆ ದೇಶದಲ್ಲಿನ ಯುದ್ಧದಿಂದಾಗಿ ಅದನ್ನು ಮುಂದೂಡಲಾಗಿತ್ತು ಎಂದು ಅವರು ತಿಳಿಸಿದರು.

ಸೂರ್ಯನ ಕಡೆಗಿನ ಯಾತ್ರೆ ಈಗಾಗಲೇ ಸಿದ್ಧವಾಗಿದೆ ಮತ್ತು ಉಡಾವಣಾ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಮಿಷನ್​ನಲ್ಲಿನ ಹಲವಾರು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಏನಾದರೂ ವ್ಯತ್ಯಾಸವಾದರೆ ದಿನಾಂಕವನ್ನು ಮುಂದೂಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಚಂದ್ರನ ಮೇಲ್ಮೈಯಿಂದ ರೋವರ್ ತೆಗೆದುಕೊಳ್ಳುತ್ತಿರುವ ಛಾಯಾಚಿತ್ರಗಳು ಇಸ್ರೋ ಕೇಂದ್ರಗಳಿಗೆ ತಲುಪಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ನಿಟ್ಟಿನಲ್ಲಿ ಇಸ್ರೋ ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾದಂತಹ ಇತರ ದೇಶಗಳ ಗ್ರೌಂಡ್ ಸ್ಟೇಷನ್​ಗಳ ಬೆಂಬಲವನ್ನು ಕೋರುತ್ತಿದೆ ಎಂದು ಸೋಮನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚಂದ್ರನ ಮೇಲ್ಮೈಯಲ್ಲಿ ವಾತಾವರಣವಿಲ್ಲದ ಕಾರಣ, ನೆರಳುಗಳೆಲ್ಲವೂ ಕಪ್ಪಾಗಿವೆ. ಇದರಿಂದ ಸ್ಪಷ್ಟವಾದ ಛಾಯಾಚಿತ್ರಗಳನ್ನು ಸೆರೆಹಿಡಿಯುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಆಗಸ್ಟ್ 23 ರಂದು ಸಂಜೆ 6:04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತದ ಚಂದ್ರಯಾನ -3 ಇತಿಹಾಸ ಸೃಷ್ಟಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ 'ಸಾಫ್ಟ್ ಲ್ಯಾಂಡಿಂಗ್' ಸಾಧಿಸುವುದರೊಂದಿಗೆ ಭಾರತವು ಈ ಸಾಧನೆ ಮಾಡಿದ ಏಕೈಕ ದೇಶವಾಗಿದೆ. (ಮೂಲ: IANS)

ಇದನ್ನೂ ಓದಿ : ನಮ್ಮ ವಿಜ್ಞಾನಿಗಳು ಮಿಲಿಯನೇರ್​ಗಳಲ್ಲ, ಇದು ಸಮರ್ಪಣಾಭಾವದ ಸಾಧನೆ: ಇಸ್ರೊ ಮಾಜಿ ಅಧ್ಯಕ್ಷ ನಾಯರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.