ETV Bharat / science-and-technology

ಸ್ಯಾಮ್​ಸಾಂಗ್​ನಿಂದ ವಿಶಿಷ್ಟ ಗೇಮಿಂಗ್​ ಮಾನಿಟರ್​ ಪರಿಚಯ: ಏನಿದರ ವಿಶೇಷತೆ? - ಸ್ಯಾಮ್​ಸಾಂಗ್​ನಿಂದ ವಿಶಿಷ್ಟ ಗೇಮಿಂಗ್​ ಮಾನಿಟರ್​

Odyssey OLED G8 (G85SB) ಎಂಬ ವಿಶೇಷ ಮಾನಿಟರ್​ ಬಗ್ಗೆ ಸ್ಯಾಮ್​ಸಂಗ್​ ಮಾಹಿತಿ ಹಂಚಿಕೊಂಡಿದೆ. ಇದು ತುಂಬಾನೇ ತೆಳುವಾದ ಮಾನಿಟರ್​ ಹೊಂದಿದ್ದು, ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸ್ಯಾಮ್​ಸಾಂಗ್​ನಿಂದ ವಿಶಿಷ್ಟ ಗೇಮಿಂಗ್​ ಮಾನಿಟರ್​

author img

By

Published : Sep 1, 2022, 4:01 PM IST

ಸಿಯೋಲ್ (ದಕ್ಷಿಣ ಕೊರಿಯಾ) : ಬರ್ಲಿನ್‌ನಲ್ಲಿ ಐಎಫ್‌ಎ 2022 ಕ್ಕಿಂತ ಮುಂಚಿತವಾಗಿ ಸ್ಯಾಮ್‌ಸಂಗ್ ಹೊಸ ಸುದ್ದಿ ಹಂಚಿಕೊಂಡಿದೆ. ಈ ಸಂಸ್ಥೆ ಇತ್ತೀಚೆಗೆ ತಂತ್ರಜ್ಞಾನ ಯುಗದಲ್ಲಿ ಹಲವಾರು ರೀತಿಯ ಗ್ರಾಹಕರಿಗೆ ಇಷ್ಟವಾಗುವ ರೀತಿಯ ಸಾಧನಗಳನ್ನು ಪರಿಚಯಿಸಿಕೊಂಡು ಬರುತ್ತಿದೆ. ಈಗ ಹೊಸ ಗೇಮಿಂಗ್ ಮಾನಿಟರ್ ಬಗ್ಗೆ ಘೊಷಣೆ ಮಾಡಲಾಗಿದೆ. ಅದುವೇ Odyssey OLED G8 (G85SB) ಈ ಮಾನಿಟರ್​ ಒಡಿಸ್ಸಿ ಶ್ರೇಣಿಗಳನ್ನು ಇನ್ನೂ ಹೆಚ್ಚಿನದಾಗಿ ವಿಸ್ತರಿಸಲಿದೆಯಂತೆ.

Odyssey OLED G8 ಯು ಈ ಕಂಪನಿಯ ಮೊದಲ OLED ಗೇಮಿಂಗ್ ಮಾನಿಟರ್ ಆಗಿದ್ದು, ಇದು ತುಂಬಾನೆ ತೆಳುವಾದ, 34 - ಇಂಚಿನ ಸುತ್ತಳತೆಯಲ್ಲಿ ಲಭ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.

ಬ್ಯಾಕ್​ಲೈಟ್​ ಬೇಕಿಲ್ಲ: ಈ ಸಾಧನವನ್ನು ಮೊದಲೇ ಹೇಳಿದಂತೆ ಅತ್ಯಂತ ತೆಳುವಾದ ಅಂದರೆ 3.9 ಮಿಮೀ ಅಲ್ಟ್ರಾ - ಸ್ಲಿಮ್ ನಲ್ಲಿ ರೂಪಿಸಲಾಗಿದೆ. ಅಷ್ಟೇ ಅಲ್ಲ ನಯವಾದ ಹಾಗೂ ಲೋಹದ ಬಾರ್ಡರ್​ ಇದರಲ್ಲಿ ಇರಲಿದೆ. ಹೆಚ್ಚಿನ ಬ್ರೈಟ್​ನೆಸ್​ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಿರುವುದರಿಂದ ಇದಕ್ಕೆ ಯಾವುದೇ ಬ್ಯಾಕ್‌ಲೈಟಿಂಗ್ ಅಗತ್ಯವಿಲ್ಲ. ಅಲ್ಟ್ರಾ - ವೈಡ್, ಕ್ಯೂಎಚ್‌ಡಿ ರೆಸಲ್ಯೂಶನ್ ಗೇಮಿಂಗ್ ಮಾನಿಟರ್ 21:9 ಆಕಾರ ಅನುಪಾತವನ್ನು ಹಾಗೂ 100 ಪ್ರತಿಶತದಷ್ಟು ಬಣ್ಣದ ಪರಿಮಾಣವನ್ನು ಹೊಂದಿದೆ.

ಇದರಲ್ಲಿ ಆಡುವ ಆಟಗಾರನಿಗೆ ಸೃಜನಶೀಲತೆ ಹೆಚ್ಚಿಸಲು ಹಲವಾರು ಗೇಮಿಂಗ್ ವೈಶಿಷ್ಟ್ಯಗಳು ಇದರಲ್ಲಿವೆ. ಪರಿಣಾಮ ಇದು ಅತ್ಯುತ್ತಮ ಗೇಮಿಂಗ್, ಮನರಂಜನೆ ಮತ್ತು ಜೀವನಶೈಲಿಯ ವೈಶಿಷ್ಟ್ಯವನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಅನುವು ಮಾಡಿಕೊಡುತ್ತದೆ.

ಓಟಿಟಿ ಲಭ್ಯತೆ: ಇದಷ್ಟೇ ಅಲ್ಲದೆ, ಸ್ಯಾಮ್‌ಸಂಗ್‌ನ ಸ್ಮಾರ್ಟ್ ಹಬ್ ಮೂಲಕ ಸ್ಟ್ರೀಮ್ ಮಾಡುವ ಸಾಮರ್ಥ್ಯದೊಂದಿಗೆ ಸಂಪೂರ್ಣ ಮನರಂಜನಾ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತದೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಇತರ ಪ್ರಮುಖ ಓಟಿಟಿಯಲ್ಲಿನ ಪ್ರದರ್ಶನಗಳನ್ನು ವೀಕ್ಷಿಸಬಹುದಾಗಿದೆ.

ಈ ಸಾಧನವು 2022 ರ ನಾಲ್ಕನೇ ತ್ರೈಮಾಸಿಕದಿಂದ ಜಾಗತಿಕವಾಗಿ ಲಭ್ಯವಿರುತ್ತದೆ ಹಾಗೆ ಇದರ ಅನಾವರಣದ ದಿನಾಂಕಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: WhatsApp ಹೊಸ ಫೀಚರ್‌: ಗ್ರೂಪ್​ ಅಡ್ಮಿನ್​ಗೆ ಇನ್ಮುಂದೆ ಈ ಆಯ್ಕೆ ಸಿಗುತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.