ETV Bharat / science-and-technology

ಸ್ಯಾಮ್​ಸಂಗ್ Galaxy Z Fold 5, Flip 5 ಜುಲೈನಲ್ಲಿ ಬಿಡುಗಡೆ ಸಾಧ್ಯತೆ - ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಬಹಿರಂಗ

ಸ್ಯಾಮ್​ಸಂಗ್ ತನ್ನ ಹೊಸ ಸಾಧನಗಳನ್ನು ಜುಲೈನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

Samsung may reveal Galaxy Z Fold 5, Flip 5 in July

author img

By

Published : May 17, 2023, 6:09 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ಝಡ್ ಫೋಲ್ಡ್ 5 (Galaxy Z Fold 5), ಫ್ಲಿಪ್ 5 (Flip 5) ಮತ್ತು ಟ್ಯಾಬ್ ಎಸ್9 (Tab S9) ಸಾಧನಗಳನ್ನು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತನ್ನ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಬಹಿರಂಗಪಡಿಸಲಿದೆ ಎಂದು ವರದಿಯಾಗಿದೆ. ಕಂಪನಿಯು ಜುಲೈ 26 ರಂದು ಅನ್​ಪ್ಯಾಕ್ಡ್​ ಈವೆಂಟ್ ಅನ್ನು ನಡೆಸುವ ನಿರೀಕ್ಷೆಯಿದೆ ಮತ್ತು ಹೊಸ ಡಿವೈಸ್​​ಗಳು ಆಗಸ್ಟ್ 11 ರಂದು ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು ಎಂದು ವರದಿ ಮಾಡಿದೆ.

ಗ್ಯಾಲಕ್ಸಿ ಝಡ್ ಫೋಲ್ಡ್ 5 ಸ್ಮಾರ್ಟ್​ಫೋನ್ ತೆಳುವಾದ ವಿನ್ಯಾಸ ಹೊಂದಿರಲಿದ್ದು, 6.2 ಇಂಚು ಕವರ್ ಡಿಸ್​ಪ್ಲೇ ಮತ್ತು 7.6 ಇಂಚು ಇನ್ನರ್ ಡಿಸ್​ಪ್ಲೇ ಇರಲಿದೆ. ಗ್ಯಾಲಕ್ಸಿ S9 ಅಲ್ಟ್ರಾ 16GB RAM ಮತ್ತು 512GB ಮೆಮೊರಿ ಮತ್ತು ಟ್ಯಾಬ್​ S9 12GB RAM ಮಾದರಿಗಳಲ್ಲಿ ಲಭ್ಯವಾಗಲಿವೆ. ಮೇಲಾಗಿ ಗ್ಯಾಲಕ್ಸಿ ಝಡ್ ಫೋಲ್ಡ್ 5 ಮತ್ತು ಫ್ಲಿಪ್ 5 ಎರಡೂ ಹೊಸ ವಾಟರ್ ಡ್ರಾಪ್ ಹಿಂಜ್‌ ವಿನ್ಯಾಸ ಹೊಂದಿರಲಿವೆ. ಗ್ಯಾಲಕ್ಸಿ ಎಸ್​24 ಅಲ್ಟ್ರಾ ದ ಬ್ಯಾಟರಿ ಲೈಫ್ ಹೆಚ್ಚಿಸಲು ಸ್ಯಾಮ್​ಸಂಗ್ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗುವ ತಂತ್ರಜ್ಞಾನವನ್ನು ಉಪಯೋಗಿಸಲಿದೆ ಎಂದು ಹೇಳಲಾಗಿದೆ.

ಏಸಸ್​ ಹೊಸ ಲ್ಯಾಪ್​ಟಾಪ್ ಶ್ರೇಣಿ ಬಿಡುಗಡೆ: ರಿಪಬ್ಲಿಕ್ ಆಫ್ ಗೇಮರ್ಸ್ (ROG) ಮತ್ತು TUF ಸರಣಿಯ ಲ್ಯಾಪ್‌ಟಾಪ್ ಶ್ರೇಣಿಯ ಅಡಿ ಐದು ಹೊಸ ಮೋಡ್‌ಗಳನ್ನು ಪ್ರಾರಂಭಿಸುವುದರೊಂದಿಗೆ ಏಸಸ್ (Asus) ತನ್ನ ಗೇಮಿಂಗ್ ಲ್ಯಾಪ್‌ಟಾಪ್ ಶ್ರೇಣಿಯನ್ನು ವಿಸ್ತರಿಸಿದೆ. ಹೊಸ ಲ್ಯಾಪ್​ಟಾಪ್ ಶ್ರೇಣಿಯು ಫ್ಲೋ Z13 ಅಕ್ರೋನಿಮ್ ಆವೃತ್ತಿ, TUF A16 ಅಡ್ವಾಂಟೇಜ್ ಆವೃತ್ತಿ, ಜೆಫೈರಸ್ G16, ಸ್ಟ್ರಿಕ್ಸ್ G16 ಮತ್ತು ಸ್ಟ್ರಿಕ್ಸ್ G18 ಅನ್ನು ಒಳಗೊಂಡಿದೆ. ಈ ಹೊಸ ಲ್ಯಾಪ್‌ಟಾಪ್‌ಗಳು ಇತ್ತೀಚಿನ ಪೀಳಿಗೆಯ ಇಂಟೆಲ್ ಮತ್ತು ಎಎಮ್‌ಡಿ ಪ್ರೊಸೆಸರ್‌ಗಳು, ಎನ್‌ವಿಡಿಯಾದಿಂದ ಇತ್ತೀಚಿನ ಆರ್‌ಟಿಎಕ್ಸ್ 40 ಸರಣಿಯ ಗ್ರಾಫಿಕ್ಸ್, ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್, ಗೇಮಿಂಗ್ ವೈಶಿಷ್ಟ್ಯಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರಲಿವೆ.

ಇವುಗಳಲ್ಲದೇ, ಏಸಸ್ ತನ್ನ ಫ್ಲೋ X/Z, TUF A15/17, TUF F15/F17, Zephyrus G14 ಮತ್ತು Strix G17 ಲ್ಯಾಪ್​ಟಾಪ್​ಗಳನ್ನು ಇತ್ತೀಚಿನ ಪೀಳಿಗೆಯ ಪ್ರೊಸೆಸರ್‌ಗಳು ಮತ್ತು ಗ್ರಾಫಿಕ್ಸ್‌ನೊಂದಿಗೆ ಅಪ್ಡೇಟ್ ಮಾಡಿದೆ.

ಇಂಟರ್ನೆಟ್ ಬ್ರೌಸ್ ಮಾಡಲಿದೆ ಚಾಟ್ ಜಿಪಿಟಿ: OpenAI ನ ChatGPT ಗೆ ಹೊಸ ಅಪ್ಡೇಟ್ ಒಂದನ್ನು ನೀಡಲಾಗಿದೆ. ಚಾಟ್​ ಜಿಪಿಟಿಯನ್ನು ನೆರವಾಗಿ ಇಂಟರ್ನೆಟ್‌ಗೆ ಸಂಪರ್ಕಿಸುವ ಅಪ್ಡೇಟ್ ಇದಾಗಿದೆ. ಅಲ್ಲದೆ GPT-4 ನ ಇತ್ತೀಚಿನ ಆವೃತ್ತಿಯು ಈಗ 70 ಕ್ಕಿಂತ ಹೆಚ್ಚು ಥರ್ಡ್​ ಪಾರ್ಟಿ ಬ್ರೌಸರ್ ಪ್ಲಗಿನ್‌ಗಳನ್ನು ಇತರ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯಗಳು ತಿಂಗಳಿಗೆ 20 ಡಾಲರ್ ಪಾವತಿಸುವ ChatGPT ಪ್ಲಸ್ ಚಂದಾದಾರರಿಗೆ ಪ್ರತ್ಯೇಕವಾಗಿ ಲಭ್ಯವಿವೆ. ಚಾಟ್​ ಜಿಪಿಟಿಯು ಈಗ ನೇರವಾಗಿ ಇಂಟರ್ನೆಟ್ ಬ್ರೌಸ್ ಮಾಡುವುದರಿಂದ ಇದು ಇತ್ತೀಚಿನ ಈವೆಂಟ್‌ಗಳಂತಹ ವಿಷಯಗಳ ಕುರಿತು ಹೆಚ್ಚು ಹೊಸ ಮತ್ತು ನಿಖರವಾದ ಪ್ರತಿಕ್ರಿಯೆಗಳನ್ನು ಒದಗಿಸುತ್ತದೆ.

ಇದನ್ನೂ ಓದಿ : ಶಿಕ್ಷಣಕ್ಕೆ ಚಾಟ್​ಜಿಪಿಟಿ ಪೂರಕ, ಆದರೆ ಸ್ವಂತ ಆಲೋಚನೆ ಬದಲಿಸಕೂಡದು: ವಿದ್ಯಾರ್ಥಿಗಳ ಅಭಿಪ್ರಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.