ಸ್ಯಾಮ್‌ಸಂಗ್ ಕಂಪನಿ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ S23 (Samsung Galaxy S23 Series) ಸರಣಿಯ ಸ್ಮಾರ್ಟ್‌ಫೋನ್ ಅನ್ನು ತಯಾರಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದು ಈ ವರ್ಷ ಫೆಬ್ರವರಿಯಲ್ಲಿ ಅನಾವರಣಗೊಂಡ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿಯ ಮುಂದಿನ ಆವೃತ್ತಿಯಾಗಿದೆ. ಈ ಸ್ಮಾರ್ಟ್‌ಫೋನ್ ಡಿಸೈನ್ ಸಹಿತ ಹೆಚ್ಚ ಕಡಿಮೆ ಗ್ಯಾಲಕ್ಸಿ ಎಸ್ 22 ರೀತಿಯಲ್ಲೇ ಇದ್ದು, ಹಿಂಬದಿಯ ಕ್ಯಾಮೆರಾದಲ್ಲಿ ಸ್ವಲ್ಪ ವಿನ್ಯಾಸ ಬದಲಾಗಿದೆ ಎಂದು ಕಂಪನಿ ಹೇಳಿದೆ.
ಇನ್ನು ಗ್ಯಾಲಕ್ಸಿ ಎಸ್ 22 ಫೀಚರ್ಸ್, ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾಕ್ಕೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಗ್ಯಾಲಕ್ಸಿ S23 ಆಲ್ಟ್ರಾ (Galaxy S23 Ultra) ಬಗ್ಗೆ ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ. ಈ ಫೋನ್ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ (200MP Camera samsung Phone) ಲಾಂಚ್ ಆಗಲಿದೆಯಂತೆ. ಅಷ್ಟೇ ಅಲ್ಲ ಐಸ್ ಯೂನಿವರ್ಸ್ ಈ ಫೋನ್‌ನ ವಿನ್ಯಾಸದಲ್ಲಿ ಕಾರ್ಯಗತವಾಗಿದ್ದು, ಇದು ಸಹ ಗ್ಯಾಲಕ್ಸಿ S22 ಅಲ್ಟ್ರಾದಂತೆಯೇ ಇರುತ್ತದೆ ಎಂದು GSM ಅರೆನಾ ಹೇಳಿದೆ.
ಗ್ಯಾಲಕ್ಸಿ S22 ಅಲ್ಟ್ರಾ ಗ್ರಾಹಕರು ಇಷ್ಟಪಟ್ಟಿದ್ದು, ಗ್ಯಾಲಕ್ಸಿ ಎಸ್22 ಅರ್ಥಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಗ್ಯಾಲಕ್ಸಿ ಎಸ್22 ಅನುಗುಣವಾಗಿರುವಂತೆ ವಿನ್ಯಾಸ ಮತ್ತು ಆಯಾಮಗಳು ಬದಲಾಗದೆ ಮುಂದುವರಿಯುವಂತೆ ಗ್ಯಾಲಕ್ಸಿ ಎಸ್23 ಡಿಸೈನ್ ಇರುತ್ತದೆ. ಆದರೆ ಉಳಿದ Galaxy S23 ಲೈನ್-ಅಪ್ S23 ಅಲ್ಟ್ರಾದ ಕ್ಯಾಮೆರಾ ನೋಟ ಗ್ಯಾಲಕ್ಸಿ ಎಸ್22 ರೀತಿಯಲ್ಲೇ ಇರತ್ತದೆ ಎಂದು ಕಂಪನಿ ಹೇಳಿದೆ.
ಈ ಬಾರಿ ಫೋನ್‌ನ ಯಾವುದೇ ಎಕ್ಸಿನೋಸ್ ಆವೃತ್ತಿ ಇರುವುದಿಲ್ಲ: ಗ್ಯಾಲಕ್ಸಿ S23 ಸರಣಿಯು ಪ್ರಮುಖ ಸ್ನಾಪ್‌ಡ್ರಾಗನ್ ಚಿಪ್ ಅನ್ನು ಮಾತ್ರ ಹೊಂದಿರುತ್ತದೆ ಮತ್ತು ಈ ಬಾರಿ ಫೋನ್‌ನ ಯಾವುದೇ ಎಕ್ಸಿನೋಸ್ ಆವೃತ್ತಿ ಇರುವುದಿಲ್ಲ ಎಂದು TF ಇಂಟರ್ನ್ಯಾಷನಲ್ ಸೆಕ್ಯುರಿಟೀಸ್ ವಿಶ್ಲೇಷಕ ಮಿಂಗ್-ಚಿ ಕುವೊ ಬಹಿರಂಗಪಡಿಸಿದ್ದಾರೆ. ಮುಂಬರುವ Galaxy S23 ಸರಣಿಯು ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ ಎಂದು ಕುವೋ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ತಿಳಿಸಿದ್ದಾರೆ.
TSMC 4nm ಪ್ರಕ್ರಿಯೆಯಲ್ಲಿ ಅಭಿವೃದ್ಧಿ: ಕುವೋ ಪ್ರಕಾರ, Galaxy S23 ಸರಣಿಯು ಕ್ವಾಲ್ಕಾಮ್ನ ಪ್ರಮುಖ 5G ಚಿಪ್ SM8550 ನಿಂದ ರನ್ನಿಂಗ್ ಆಗುತ್ತದೆ. ಇದನ್ನು TSMC 4nm ಪ್ರಕ್ರಿಯೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೇ, ಸ್ಯಾಮ್‌ಸಂಗ್‌ನ ಪ್ರಮುಖ ಸರಣಿಯು ಆಂತರಿಕ ಎಕ್ಸಿನೋಸ್ 2300 ಚಿಪ್‌ಸೆಟ್ ಅನ್ನು ಅವಲಂಬಿಸಿರುವುದಿಲ್ಲ ಎಂದು ತಜ್ಞರು ಸೂಚಿಸುತ್ತಾರೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್22 ಬಗ್ಗೆ ಕಿರು ಮಾಹಿತಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್ 6.8 ಇಂಚಿನ ಎಡ್ಜ್ QHD ಡೈನಾಮಿಕ್ AMOLED 2X ಡಿಸ್‌ಪ್ಲೇ ಹೊಂದಿದ್ದು, ಜೊತೆಗೆ ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇದರೊಂದಿಗೆ ಐ ಕಂಫರ್ಟ್ ಶೀಲ್ಡ್ ಸೌಲಭ್ಯ ಇದೆ. ಈ ಫೋನ್ ಆಕ್ಟಾ ಕೋರ್ 4 nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಕೂಡಾ ಪಡೆದಿದೆ.
ಈ ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ 12MP+ 10MP+ 10MP ಸ್ಪೋರ್ಟ್ಸ್ ಕ್ಯಾಮೆರಾ ನೀಡಲಾಗಿದೆ. 40 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. 100X ಜೂಮ್ ಫೀಚರ್ ಇದರ ಹೈಲೇಟ್. ಹಾಗೆಯೇ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಇದೇ ಮಾದರಿಯನ್ನು ಗ್ಯಾಲಕ್ಸಿ ಎಸ್23 ಒಳಗೊಂಡಿರುತ್ತದೆ ಎಂದು ಹೇಳುತ್ತದೆ ಕಂಪನಿ.
ಓದಿ: 24 ಬಿಟ್ ಹೈ ಫೈ ಸೌಂಡ್ನ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಬಡ್ಸ್ 2 ಪ್ರೋ.. ಆ.26 ರಿಂದ ಭಾರತದಲ್ಲಿ ಲಭ್ಯ